Advertisement

ಸಗ್ರಿ: ಯುವತಿಯ ಕೊಲೆ : ಅತ್ಯಾಚಾರ ಶಂಕೆ

01:00 AM Mar 11, 2019 | Harsha Rao |

ಉಡುಪಿ: ಮಣಿಪಾಲದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಸಗ್ರಿಯ ನಿರ್ಜನ ಪ್ರದೇಶದಲ್ಲಿ ರೈಲು ಹಳಿ ಪಕ್ಕದ ಹಾಡಿಯಲ್ಲಿ ರವಿವಾರ ಸಂಜೆ ಯುವತಿಯೋರ್ವಳ ಶವ ಪತ್ತೆಯಾಗಿದ್ದು, ಕೊಲೆ ಪ್ರಕರಣ ದಾಖಲಾಗಿದೆ.

Advertisement

ಮೈಮೇಲಿನ ಬಟ್ಟೆಗಳು ಅಸ್ತವ್ಯಸ್ತವಾಗಿರುವ ಕಾರಣ ಅತ್ಯಾಚಾರ ನಡೆಸಿ ಕೊಲೆಗೈಯಲಾಗಿದೆ ಎಂದು ಶಂಕಿಸಲಾಗಿದೆ. 

ಸುಮಾರು 18ರಿಂದ 25 ವರ್ಷ ವಯಸ್ಸಿನವಳಾಗಿದ್ದು, ಬೇರೆ ಜಿಲ್ಲೆಯಿಂದ ಉಡುಪಿಗೆ ಬಂದು ಇಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಯಾಗಿರಬಹುದು ಎಂದು ಹೇಳಲಾಗಿದೆ. ಸ್ಥಳಕ್ಕೆ ಎಸ್‌ಪಿ ನಿಶಾ ಜೇಮ್ಸ್‌ ಸಹಿತ  ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

“ಸದ್ಯ ಕೊಲೆ ಪ್ರಕರಣ ದಾಖ ಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಎಸ್‌ಪಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next