Advertisement

ಭಗವಂತ ಮೆಚ್ಚುವ ಕೆಲಸದಿಂದ ಯಶಸ್ಸು

05:25 PM Dec 14, 2019 | Naveen |

ಸಾಗರ: ಸಂಸ್ಕಾರಹೀನರಾದರೆ ಏನನ್ನೂ ಗಳಿಸಿದರೂ ಪ್ರಯೋಜನವಿಲ್ಲ. ಒಳ್ಳೆಯ ಕೆಲಸವನ್ನು ಮಾಡುತ್ತೇವೆ ಎನ್ನುವುದು ಇತರರಿಗೆ ಗೊತ್ತಾಗಲಿ ಎಂದು ಪ್ರಸಿದ್ಧಿ ಪ್ರಚಾರ ಒಳ್ಳೆಯದಲ್ಲ. ಇದರಿಂದ ಅಪಾಯವೇ ಹೆಚ್ಚು. ಭಗವಂತ ಮೆಚ್ಚುವ ಹಾಗೆ ಕೆಲಸ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಉಡುಪಿ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮಿಗಳು ಹೇಳಿದರು.

Advertisement

ನಗರದ ಮಾಧ್ವ ಸಂಘಕ್ಕೆ ಆಗಮಿಸಿದ್ದ ಅವರು ಸಮಾಜದ ಗೌರವವನ್ನು ಸ್ವೀಕರಿಸಿ ಮಾತನಾಡಿದರು. ಎಣಿಸಲಾಗದಷ್ಟು ಸಂಪತ್ತಿದ್ದರೂ ನಿದ್ದೆ ಬರುವುದಿಲ್ಲ. ಏನೂ ಸಂಪತ್ತಿಲ್ಲದವರು ವ್ಯವಸ್ಥಿತವಾಗಿ ಬದುಕು ನಡೆಸುತ್ತಾರೆ. ಇದು ಹೇಗೆ ಸಾಧ್ಯ ಎಂದರೆ ಅವರು ಭಗವಂತ ಮೆಚ್ಚುವ ಹಾಗೆ ಬದುಕುತ್ತಾರೆ. ಇದ್ದಾಗ ದೇವರನ್ನು ಮರೆತೇ ಬಿಡುತ್ತೇವೆ. ಇಲ್ಲದವನು ಮಾತ್ರ ಸದಾ ದೇವರನ್ನು ನೆನೆಯುತ್ತಾನೆ. ಬರಲಿರುವ ನಮ್ಮ ಪರ್ಯಾಯದಲ್ಲಿ ತಾವೆಲ್ಲರೂ ಭಾಗವಹಿಸಿ ಶ್ರೀಕೃಷ್ಣನ ದರ್ಶನ ಪಡೆಯಬೇಕು. ಜೀವನದಲ್ಲಿ ದೇವರ ಆರಾಧನೆ ಎಂಬುದು ಬಹಳ ಮುಖ್ಯ. ನಮ್ಮ ನಮ್ಮ ಕರ್ತವ್ಯದಿಂದ ನಾವು ವಿಮುಖರಾಗಬೇಡಿ ಎಂದರು.

ಪಂಡಿತ ಲಕ್ಷ್ಮೀಶ ಆಚಾರ್ಯ ಮಾತನಾಡಿ, ಕೃಷ್ಣ ಭಗವದ್ಗೀತೆಯಲ್ಲಿ ನಮ್ಮ ಎಲ್ಲ ಪ್ರಶ್ನೆಗಳಿಗೂ ಐದು ಸಾವಿರ ವರ್ಷಗಳಿಗಿಂತ ಮುಂಚೆಯೇ ಉತ್ತರ ನೀಡಿದ್ದಾನೆ. ಎಲ್ಲವೂ ನಮಗೆ ತಿಳಿದಿದೆ ಎನ್ನುವ ಭ್ರಮೆಯಲ್ಲಿದ್ದೇವೆ. ಗುರುವಾದವನು, ಜ್ಞಾನಿಯಾದವನ ಬದುಕು ಕತ್ತಿಯ ಮೇಲಿನ ಅಲಗನಂತಿರುತ್ತದೆ. ಸದಾ ಎಚ್ಚರದಿಂದ ನಮ್ಮ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಲೋಕದಲ್ಲಿ ನಮ್ಮನ್ನು ಅನುಸರಿಸುವವರೂ ಮತ್ತು ಗುರುತಿಸುವವರೂ ಇರುತ್ತಾರೆ ಎಂಬ ಪ್ರಜ್ಞೆ ಇಟ್ಟುಕೊಂಡು ಬದುಕಬೇಕು ಎಂದರು.

ಮಾಧ್ವಸಂಘದ ಅಧ್ಯಕ್ಷ ಜಿ.ವಿ. ಕಲ್ಲಾಪುರ ಶ್ರೀಗಳಿಗೆ ಸಮಾಜದ ಮೂಲಕ ಗೌರವ ಸಮರ್ಪಣೆ ಮಾಡಿದರು. ಮಾಧ್ವ ಸಂಘದ ಕಾರ್ಯದರ್ಶಿ ಅನಂತರಾವ್‌, ಉಪಾಧ್ಯಕ್ಷ ವೆಂಕಟೇಶ ಕಟ್ಟಿ, ದೀಪಕ್‌ ಕಲ್ಯಾಣಿ, ಸಂಘದ ಶ್ರೀಶಾಚಾರ್‌, ರಾಜಗೋಪಾಲ ಕೆ.ಆರ್‌.ರಘುನಂದನ ಪುರೋಹಿತ್‌, ವಿದ್ವಾನ್‌ ಪಿ.ಎಲ್‌. ಗಜಾನನ ಭಟ್‌, ರಮಾದೇವಿ, ಬದರೀಶ್‌, ಮಂಜುಳಾ, ಭಾಗ್ಯಲಕ್ಷ್ಮೀ , ನಾಗರತ್ನ, ಸುಲೋಚನ, ಎಚ್‌. ಸುಧೀಂದ್ರ ರಾವ್‌, ವೈ. ಮೋಹನ್‌,
ವಿರಜಾ ಕಲ್ಲಾಪುರ, ಆನಂದ ಕಲ್ಯಾಣಿ, ಸುಮಿತ್ರಾಬಾಯಿ, ಸಹನಾ ಪಿ.ಜಿ., ರೇವತಿ ಹತ್ವಾರ್‌, ಸುನಿಲ್‌ ಗಾಯತೊಂಡೆ, ರಾಘವೇಂದ್ರಾಚಾರ್‌, ಸಂಜಯ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next