Advertisement
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜು. 25ರಂದು ಬ್ರಾಸಂ ಸಭಾಭವನದಲ್ಲಿ ನಡೆಯಲಿರುವ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಗಾರ್ಗಿ ಅವರ ಸ್ವಗ್ರಾಮ ಬಂದಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್ತಿನ ಆಹ್ವಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲ ಪೋಷಕರೂ ತಮ್ಮ ಮಕ್ಕಳಿಗೆ ಮೊದಲು ಶಿಕ್ಷಣ ಕಲಿಸಲು ಆದ್ಯತೆ ನೀಡಬೇಕು. ಶಿಕ್ಷಣ ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ. ಅದೇ ಶಿಕ್ಷಣ ನಮ್ಮ ಅಭಿರುಚಿಯನ್ನು ಬೆಳೆಸುತ್ತದೆ. ನನಗೆ ಮನೆಯಲ್ಲಿ ಹಾಗೂ ಶಾಲೆಯಲ್ಲಿ ಉತ್ತಮ ಪ್ರೋತ್ಸಾಹ ಸಿಗುತ್ತಿದೆ ಎಂದರು.
Related Articles
Advertisement
ಪರಿಷತ್ತಿನ ಅಧ್ಯಕ್ಷ ಎಸ್.ವಿ. ಹಿತಕರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷತೆಗೆ ಪಾರದರ್ಶಕವಾಗಿ ಸಂದರ್ಶನ ಮಾಡಿ ಗಾರ್ಗಿ ಅವರನ್ನು ಆಯ್ಕೆ ಮಾಡಿದ್ದೇವೆ. ದೊಡ್ಡ ಸಮ್ಮೇಳನದಲ್ಲಿ ಮಕ್ಕಳಿಗೆ ಅವಕಾಶ ಸಿಗುವುದಿಲ್ಲ ಎಂಬ ಉದ್ದೇಶದಿಂದ ಮಕ್ಕಳಿಗಾಗಿಯೇ ಸಮ್ಮೇಳನ ಮಾಡುತ್ತಿದ್ದೇವೆ. ಸಮ್ಮೇಳನ ಮಕ್ಕಳ ಸಾಹಿತ್ಯ ಸ್ಪರ್ಶಕ್ಕೆ ಸ್ಫೂರ್ತಿ ತುಂಬುತ್ತದೆ. ಕೆಳದಿ ಅರಸರು ಆಳಿದ ಈ ಪುಣ್ಯ ನೆಲದಲ್ಲಿ ಗಾರ್ಗಿಯ ಪ್ರತಿಭೆ ಅನಾವರಣಗೊಂಡಿದೆ. ಪರಿಷತ್ತು ನಿಜವಾದ ಪ್ರತಿಭೆಯನ್ನು ಗುರುತಿಸಿ ಆಯ್ಕೆ ಮಾಡಿದೆ ಎಂಬ ಸಂತೋಷವಿದೆ ಎಂದರು.
ಗ್ರಾಮಸ್ಥರ ಪರವಾಗಿ ಕೃಷಿಕ ರಾಧಾಕೃಷ್ಣ ಬಂದಗದ್ದೆ, ಉದ್ಯಮಿ ಉಮೇಶ್ ಬಂದಗದ್ದೆ ಮಾತನಾಡಿದರು. ಗಾರ್ಗಿ ಅವರ ತಂದೆ ಶೈಲೇಂದ್ರ ಬಂದಗದ್ದೆ, ತಾಯಿ ಸರಸ್ವತಿ ಹೆಗಡೆ, ಪರಿಷತ್ತಿನ ನಿರ್ದೇಶಕರಾದ ಪರಶುರಾಮಪ್ಪ, ಶಿವಾನಂದ ಮಾಸೂರು, ಗಣಪತಿ ಶಿರಳಗಿ, ಹೆಲ್ತ್ ಹನುಮಂತಪ್ಪ, ವಸಂತ ಶೇಟ್, ಜಿ.ಆರ್. ಶಿವಶಂಕರ್, ಹಿರಿಯ ಪತ್ರಕರ್ತ ಎಚ್.ವಿ. ರಾಮಚಂದ್ರ ರಾವ್, ಮೃತ್ಯುಂಜಯ ಚಿಲುಮೆಮಠ, ಗ್ರಾಮದ ನವೀನಕುಮಾರ್, ವಿಜಯಶ್ರೀ, ಸಂಧ್ಯಾ, ಅನುರಾಧಾ, ಕಾಂತಿಮತಿ, ಶ್ರೀಮತಿ, ಸಹನಾ, ನಾಗರತ್ನ ಮತ್ತಿತರರು ಇದ್ದರು. ಪರಿಷತ್ತಿನ ಕಾರ್ಯದರ್ಶಿ ಮೇಜರ್ ಎಂ. ನಾಗರಾಜ್ ಸ್ವಾಗತಿಸಿದರು. ನಿರ್ದೇಶಕಿ ಗಂಗಮ್ಮ ವಂದಿಸಿದರು.