Advertisement

Sagara; ಕೆಂಪಡಕೆ ದರ ಕುಸಿಯಲ್ಲ; ಕ್ಯಾಂಪ್ಕೋ ಭರವಸೆ

06:27 PM Feb 28, 2024 | Shreeram Nayak |

ಸಾಗರ: ಕ್ಯಾಂಪ್ಕೋ ಅಡಕೆ ಬೆಲೆಯ ಸ್ಥಿರತೆಯ ಬಗ್ಗೆ ತನ್ನ ಕೈಮೀರಿ ಪ್ರಯತ್ನಗಳನ್ನ ಮಾಡುತ್ತಿದೆ. ಕೆಂಪಡಕೆಯ ಧಾರಣೆಯ ಕುರಿತು ತೀರ ಕಳವಳಪಡಬೇಕಾದ್ದಿಲ್ಲ. ಆದರೆ ಚಾಲಿ ಅಡಕೆಯ ಧಾರಣೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿತ ಕಾಣಬಹುದು ಎಂದು ಕ್ಯಾಂಪ್ಕೊ ನಿರ್ದೇಶಕ ರಾಘವೇಂದ್ರ ಗರ್ತಿಕೆರೆ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಎಪಿಎಂಸಿ ಯಾರ್ಡ್‌ನ ಅಡಕೆ ಬೆಳೆಗಾರರ ಸಂಘದ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಒಳನುಸುಳುವ ಕಳಪೆ ಗುಣಮಟ್ಟದ ಅಡಿಕೆಯನ್ನು ಕರಾವಳಿ ಮಲೆನಾಡು ಭಾಗದ ಅಡಕೆಯೊಂದಿಗೆ ಕಲಬೆರಕೆ ಮಾಡುವುದರ ಕಾರಣದಿಂದಾಗಿ ಮತ್ತು ಏರುತ್ತಿರುವ ಅಡಕೆ ಬೆಳೆಯುವ ಪ್ರದೇಶಗಳ ವಿಸ್ತಾರ ಹಾಗೂ ಇನ್ನಿತರ ಕಾರಣಗಳಿಂದಾಗಿಯೂ ಕೂಡ ಬೆಲೆ ಕುಸಿತವಾಗುತ್ತಿದೆ ಎಂದರು.

ಕ್ಯಾಂಪ್ಕೋ ರೀಜನಲ್ ಮ್ಯಾನೇಜರ್ ರತ್ನಾಕರ ಮಾತನಾಡಿ, ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸುವುದಾಗಲಿ. ಹೊಸ ಹೊಸ ಸಂಶೋಧನೆಗೆ ಆರ್ಥಿಕ ಸಹಾಯವನ್ನು ಕ್ಯಾಂಪ್ಕೋ ನಡೆಸುತ್ತಿದೆ. ಅಡಕೆ ಆಮದು, ಕಳ್ಳಸಾಗಾಣಿಕೆ ಸಂಬಂಧ ಸರ್ಕಾರಗಳೊಂದಿಗೆ ಸಂವಹನ ಮಾಡುತ್ತಿದ್ದೇವೆ. ಕ್ಯಾಂಪ್ಕೋ ಅಧ್ಯಕ್ಷರೊಂದಿಗೆ ಬರುವ ತಿಂಗಳಿನ ನಾಲ್ಕರಂದು ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ನಿಯೋಗದೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಲು ಪ್ರಯತ್ನ ನಡೆಸಲಾಗುವುದು ಎಂದರು.

ಚರ್ಚೆಯಲ್ಲಿ ಸಹಕಾರಿ ಧುರೀಣರಾದ ಕಟ್ಟಿನಕೆರೆ ಸೀತಾರಾಮಯ್ಯ, ಕೆ.ಆರ್. ಗೋಪಾಲ್ ಖಂಡಿಕಾ, ಎಂ.ಜಿ. ರಾಮಚಂದ್ರ ಮರಡುಮನೆ, ಶ್ರೀಧರ್ ಈಳಿ, ಮೋಹನ್ ಗೌಡ ಎಂ.ವಿ., ಗುರುಮೂರ್ತಿ ಚಿಪ್ಳಿ, ವೆಂಕಟಗಿರಿ ಕುಗ್ವೆ ಇನ್ನಿತರ ಪ್ರಮುಖರು ಹಾಜರಿದ್ದರು. ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರಭಟ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ ಸಮಾಲೋಚನಾ ಸಭೆಯ ನಿಯೋಜನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next