ಸಾಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ಪದ್ಧತಿ-ಪಿಎಂ ಕಿಸಾನ್ ಯೋಜನೆ- ಫ್ರೂಟ್ಸ್’ ರೈತರಿಗೆ ಯಾವ ರೀತಿಯಲ್ಲಿಯೂ ನೆರವು ನೀಡದ ಹಿನ್ನೆಲೆಯಲ್ಲಿ ಕೃಷಿಕರು ತಮ್ಮ ತೋಟ- ಗದ್ದೆಗಳಲ್ಲಿ ಕೃಷಿ ಕೆಲಸ ಮಾಡುವುದರ ಬದಲು ದಾಖಲೆಗಳಿಗಾಗಿ ಸರ್ಕಾರದ ವಿವಿಧ ಇಲಾಖೆ, ಅಧಿಕಾರಿಗಳಲ್ಲಿ ಎಡತಾಕುವ ಪರಿಸ್ಥಿತಿ ಮುಂದುವರಿದಿದೆ.
Advertisement
ಒಂದೊಮ್ಮೆ ಫಾರ್ಮರ್ ರಿಜಿಸ್ಟ್ರೇಷನ್ ಎಂಡ್ ಬೆನಿಫಿಶಿಯರಿ ಇನ್‌ಫಾರ್ಮೇಶನ್ ಸೆಂಟರ್ (ಫ್ರೂಟ್ಸ್) ಸರಿಯಾಗಿ ಚಾಲ್ತಿಯಲ್ಲಿದ್ದಿದ್ದರೆ ಇದರಲ್ಲಿ ತಮ್ಮ ದಾಖಲೆಗಳನ್ನು ಸಲ್ಲಿಸಿ ನೋಂದಣಿಯಾದ ರೈತರು ಸಾಲ, ಸಹಾಯಧನ, ಪರಿಹಾರ ಮೊದಲಾದವುಗಳನ್ನು ಪಡೆಯಲು ಕನಿಷ್ಟ ದಾಖಲೆಗಳನ್ನು ಕೊಟ್ಟಿದ್ದರೆ ಸಾಕಿತ್ತು. ಆದರೆ ರಾಜ್ಯದಾದ್ಯಂತ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಆಗಿರುವ ವೈಫಲ್ಯದಿಂದ ರೈತರ ಗೋಳು ಮುಂದುವರಿದಿದೆ.
Related Articles
Advertisement
ಈ ಕುರಿತು ಪ್ರತಿಕ್ರಿಯಿಸುವ ಅಂತಾರಾಜ್ಯ ರೈತಸಂಘದ ಸಂಚಾಲಕ ಕೆ.ಟಿ. ಗಂಗಾಧರ್, ಆಡಳಿತಾತ್ಮಕ ಸುಧಾರಣೆಯ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಕಾರ್‍ಯಾಂಗ ಸೋಲುತ್ತಿದೆ. ಸೇವಾ ಮನೋಭಾವದ ಬದಲು ಸುಲಿಗೆ ಮನೋಭಾವವೇ ಮುಂದುವರಿದಿದೆ. ಸರ್ಕಾರ ತರುವ ಅಂಥ ವ್ಯವಸ್ಥೆಗಳನ್ನು ನೌಕರರು, ಅಧಿಕಾರಿಗಳು ಉದಾಸೀನ ಮಾಡುತ್ತಾರೆ. ಅವಿದ್ಯಾವಂತ ಕೃಷಿವರ್ಗಕ್ಕೆ ಇಂಥ ಯೋಜನೆಗಳ ಮಾಹಿತಿಯೂ ಇರುವುದಿಲ್ಲ. ವ್ಯವಸ್ಥೆಯ ಇಂಥ ನ್ಯೂನತೆಗಳ ವಿರುದ್ಧ ನಾವು ಹೋರಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆಗಬೇಕಾದುದು ಇಷ್ಟೇ!ಈಗಾಗಲೇ ಫ್ರೂಟ್ಸ್‌ನಲ್ಲಿ ರಾಜ್ಯದ ಹಲವು ರೈತರ ವಿವರ ನೋಂದಣಿಯಾಗಿದೆ. ರೈತರಿಗೆ ಪಿಎಂಕೆ ಐಡಿಯನ್ನೂ ನೀಡಲಾಗಿದೆ. ಸಾಫ್ಟ್‌ವೇರ್‌ನಲ್ಲಿರುವ ದೋಷಗಳನ್ನು ಸರಿಪಡಿಸುವ ಕೆಲಸವನ್ನು ಮಾಡಲಿ. ಈ ನಡುವೆ ನೋಂದಣಿಯಾಗಿರುವ ರೈತರು ತಮ್ಮ ಅರ್ಜಿ ಜೊತೆಗೆ ಪಿಎಂಕೆ ಐಡಿ ನಮೂದಿಸಿದರೆ ದಾಖಲೆಗಳು ಸಾಕು ಎಂದು ಸರ್ಕಾರ ಆದೇಶ ಹೊರಡಿಸಿದರೆ ಕೊನೆ ಪಕ್ಷ ನೋಂದಾಯಿತ ರೈತರಿಗೆ ಅನುಕೂಲವಾಗುತ್ತದೆ. ಇದರಿಂದ ಉಳಿದ ರೈತರೂ ಉತ್ತೇಜಿತರಾಗಿ ನೋಂದಣಿಗೆ ಕ್ಯೂ ನಿಲ್ಲುವಂತಾಗುತ್ತದೆ ಎಂಬ ಅಭಿಪ್ರಾಯವನ್ನು ಹೆಸರು ಪ್ರಕಟಿಸಲಿಚ್ಛಿಸದ ತೋಟಗಾರಿಕಾ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ. ಇಲಾಖೆಯ ಅಧಿಕಾರಿಗಳು ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದರು. ನೋಂದಣಿ ಅರ್ಜಿ, ವಿವರ ನೀಡುವುದಾಗಿ ತಿಳಿಸಿದ್ದರು. ಆದರೆ ಆ ನಂತರ ಏನೂ ಮಾಹಿತಿ ಇಲ್ಲ. ರೈತರ ಮಾಹಿತಿ ಇಲಾಖೆ ಬಳಿ ಇದ್ದರೆ ವಿವಿಧ ಯೋಜನೆಗಳ ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಅಗತ್ಯ ದಾಖಲೆಗಳ ಸಂಗ್ರಹ, ಜೆರಾಕ್ಸ್ ಮಾಡುವ ಶ್ರಮ ಇರುತ್ತಿರಲಿಲ್ಲ. ರೈತ ನೋಂದಣಿ ಕಾರ್ಯ ಶೀಘ್ರವಾಗಿ ಆಗಬೇಕು.
•ಬಿ.ಆರ್. ಗಣಪತಿ ಬಂದಗದ್ದೆ,
ಕೃಷಿಕ