Advertisement

ರಸ್ತೆಯಲ್ಲಿ ಹೊಂಡಗುಂಡಿ; ಪ್ರಯಾಣಿಕರಿಗೆ ಪ್ರಯಾಸ

12:42 PM Jul 12, 2019 | Naveen |

ಸಾಗರ: ತಾಲೂಕಿನ ಆನಂದಪುರದ ಮುಖ್ಯ ಬಸ್‌ ನಿಲ್ದಾಣದ ಎದುರಿನ ರಸ್ತೆ ಸಂಪೂರ್ಣ ಹೊಂಡಗುಂಡಿಯಿಂದ ತುಂಬಿದ್ದು ಪ್ರಯಾಣಿಕರು ಬಸ್‌ ಹತ್ತಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಬಸ್‌ ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿ 206 ಅಕ್ಕಪಕ್ಕದಲ್ಲಿಯೇ ಹಲವೆಡೆ ಹೊಂಡಗುಂಡಿಯಾಗಿದೆ. ಪಕ್ಕದಲ್ಲಿರುವ ಡ್ರೈನೇಜ್‌ ಸಹ ಕಟ್ಟಿಕೊಂಡಿರುವುದರಿಂದ ಚರಂಡಿಯೊಳಗಿನ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

ಬಸ್‌ ನಿಲ್ದಾಣದ ಒಳಗೆ ಕೆಎಸ್‌ಆರ್‌ಟಿಸಿ ಬಸ್‌ ಬರದೆ ಇರುವುದರಿಂದ ಸಾಗರ ಮತ್ತು ರಿಪ್ಪನ್‌ಪೇಟೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ರಸ್ತೆ ಪಕ್ಕದಲ್ಲಿಯೇ ಬಸ್‌ ಹತ್ತುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಬಸ್‌ಗೆ ಕಾಯುವ ಸಂದರ್ಭದಲ್ಲಿ ವಾಹನ ಚಕ್ರ ಹಾದು ಕೆಸರು ಬಟ್ಟೆಗೆ ಹಾರಿ ವಿದ್ಯಾರ್ಥಿಗಳು ವಾಪಸ್‌ ಮನೆಗೆ ಹೋದ ಘಟನೆಗಳು ಸಹ ನಡೆದಿದೆ.

ಹೊಂಡಗುಂಡಿ ಮುಚ್ಚುವ ಬಗ್ಗೆ ಮಾತ್ರ ಆಡಳಿತ ನಡೆಸುವವರು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಗ್ರಾಪಂ ಆಡಳಿತ ಬಸ್‌ ನಿಲ್ದಾಣದ ವಾಣಿಜ್ಯ ಮಳಿಗೆಗಳಿಂದ ಶುಲ್ಕ ವಸೂಲಿ ಮಾಡುತ್ತಿದೆ. ರಸ್ತೆ ಪಕ್ಕದ ಹೊಂಡಗುಂಡಿ ಮುಚ್ಚುವ ಬಗ್ಗೆ ಹೇಳಿದರೆ ತನಗೆ ಸಂಬಂಧವಿಲ್ಲ. ಇದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಕೆಲಸ ಎಂದು ಕೈ ತೊಳೆದುಕೊಳ್ಳುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಆನಂದಪುರದ ನಿವಾಸಿಗಳು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next