Advertisement

ನೀನಾಸಂ ಶಿಬಿರದಲ್ಲಿ ಆಕರ್ಷಕ ಕಲಾಕೃತಿಗಳು

06:02 PM Oct 05, 2019 | Naveen |

ಸಾಗರ: ಶುಕ್ರವಾರದಿಂದ ತಾಲೂಕಿನ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಕೃತಿ ಶಿಬಿರ ಆರಂಭವಾಗಿದೆ. ಕೇವಲ ಕರ್ನಾಟಕವಲ್ಲದೆ ಹೊರ ರಾಜ್ಯಗಳಿಂದಲೂ ಶಿಬಿರಾರ್ಥಿಗಳಾಗಿ ಹಲವಾರು ಜನ ಪಾಲ್ಗೊಂಡಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಯಿಂದಲೂ ದೊಡ್ಡ ಸಂಖ್ಯೆಯಲ್ಲಿ ಶಿಬಿರದಲ್ಲಿ ಯುವ ವರ್ಗ ಮತ್ತು ನಿವೃತ್ತ ಹಿರಿಯರು ಪಾಲ್ಗೊಳ್ಳುವುದು ವಿಶೇಷ.

Advertisement

ಈ ಬಾರಿಯಂತೂ ಚಂದನ ವಾಹಿನಿಯ ಥಟ್‌ ಅಂತ ಹೇಳಿ ಕಾರ್ಯಕ್ರಮ ನಡೆಸಿಕೊಡುವ ಡಾ| ನಾ.ಸೋಮೇಶ್ವರ ಅಂತವರು “ಶಿಬಿರಾರ್ಥಿ’ಯಾಗಿ ಪಾಲ್ಗೊಂಡಿದ್ದಾರೆ.

ನೀನಾಸಂ ಸಂಸ್ಕೃತಿ ಶಿಬಿರ ಎಂಬುದು ಕೇವಲ ಉಪನ್ಯಾಸ, ಸಂವಾದ, ನಾಟಕ, ಇತರ ಕಲಾ ಪ್ರದರ್ಶನಗಳಿಗೆ ಸೀಮಿತವಲ್ಲ. ಇಡೀ ನೀನಾಸಂ ಪ್ರದೇಶದಲ್ಲಿ ಲಭ್ಯ ವಸ್ತುಗಳನ್ನು ಬಳಸಿ ಇಲ್ಲಿನ ನೀನಾಸಂ ವಿದ್ಯಾರ್ಥಿಗಳು ರೂಪಿಸುವ ಕಲಾಕೃತಿಗಳೇ ಹೊಸ ಹೊಸ ವ್ಯಾಖ್ಯಾನಗಳನ್ನು ಮಾಡಬಲ್ಲವು.

Advertisement

Udayavani is now on Telegram. Click here to join our channel and stay updated with the latest news.

Next