Advertisement

ಸಾಗರ: ಅಂಬೇಡ್ಕರ್ ಭವನದ ಜಾಗ ಅತಿಕ್ರಮಣ; ತೆರವಿಗೆ ಮನವಿ

05:55 PM Sep 15, 2022 | Kavyashree |

ಸಾಗರ: ತಾಲೂಕಿನ ಸಿರಿವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಂಡಿಗೇರಿ ಎಸ್‌ಸಿ ಕಾಲೋನಿಯಲ್ಲಿ ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ಅತಿಕ್ರಮವಾಗಿ ಮನೆ ಕಟ್ಟಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಗುರುವಾರ (ಸೆ.15) ಲಂಡಿಗೆರೆ ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ರೇವಪ್ಪ ಕೆ. ಹೊಸಕೊಪ್ಪ, ಲಂಡಿಗೆರೆ ಗ್ರಾಮದ ಸರ್ವೇ ನಂ. 6ರಲ್ಲಿ 25 ಕ್ಕೂ ಹೆಚ್ಚು ಎಸ್‌ಸಿ ಕುಟುಂಬಗಳು ವಾಸ ಮಾಡುತ್ತಿವೆ. ಈ ಕುಟುಂಬಗಳ ಯುವಕ ಯುವತಿಯರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅನುಕೂಲವಾಗುವಂತೆ ಅಂಬೇಡ್ಕರ್ ಭವನ ನಿರ್ಮಿಸಲು 0.20 ಗುಂಟೆ ಜಾಗವನ್ನು ಕಾಯ್ದಿರಿಸಲು ಮನವಿ ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಸಾಗರದ ದಲಿತ ಮುಖಂಡ ಪರಮೇಶ್ವರ ದೂಗೂರು ಅವರ ಮುಖಂಡತ್ವದಲ್ಲಿ ನಾಗರತ್ನ ಎಂಬುವವರು ಅಂಬೇಡ್ಕರ್ ಭವನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದ್ದಾರೆ. ಗ್ರಾಮಸ್ಥರು ತಡೆಯಲು ಮುಂದಾದಾಗ ಅಂಬೇಡ್ಕರ್‌ಗೆ ಅವಮಾನಿಸಿ, ಜಾತಿ ನಿಂದನೆ ಮಾಡಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ತಕ್ಷಣ ಭವನಕ್ಕೆ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಿರುವ ಶೆಡ್ ತೆರವುಗೊಳಿಸಬೇಕು. ದೂಗೂರು ಮತ್ತಿತರರ ವಿರುದ್ಧ ಒತ್ತುವರಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಸಿರಿವಂತೆ ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಗಾಳಿಪುರ, ಅನಿಲ್ ಗೌಡ ಮಾತನಾಡಿದರು. ಶೇಖರ ಬಾಳಗೋಡು, ಬಂಗಾರಪ್ಪ ಶುಂಠಿಕೊಪ್ಪ, ಗಾಯತ್ರಿ, ಗಂಗಮ್ಮ, ಅಣ್ಣಪ್ಪ, ಶೈಲ, ಗೌರಮ್ಮ, ಸರಿತಾ, ಪ್ರವೀಣ್, ಮಂಜುನಾಥ್ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next