Advertisement

ಸಾಗರ ತಾಲೂಕಿನಲ್ಲಿ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ ; ಗ್ರಾಮ ಪಂಚಾಯತ್ ಸದಸ್ಯ ಬಲಿ

05:38 PM May 03, 2022 | Team Udayavani |

ಸಾಗರ: 2019-20ರಲ್ಲಿ ಮಾರಣಾಂತಿಕವಾಗಿ ಕಾಡಿದ್ದ ಕ್ಯಾಸನೂರು ಅರಣ್ಯ ಕಾಯಿಲೆ ಮತ್ತೊಮ್ಮೆ ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತನ್ನ ವಿನಾಶಕ ಗುಣ ಪ್ರದರ್ಶಿಸಿದ್ದು, ಮಂಗಳವಾರ ಅರಳಗೋಡು ಗ್ರಾಮ ಪಂಚಾಯ್ತಿ ಸದಸ್ಯರಾದ ರಾಮಸ್ವಾಮಿ ಕರುಮನೆ (55) ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ.

Advertisement

ರಾಮಸ್ವಾಮಿಯವರಿಗೆ ಏಪ್ರಿಲ್ 24 ರಂದೇ ಜ್ವರ ಕಾಣಿಸಿಕೊಂಡಿತ್ತು. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸಾಗರ ಆಸ್ಪತ್ರೆಯಲ್ಲಿ ಜ್ವರ ಗುಣಮುಖವಾಗದ ಕಾರಣ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಏ. 26 ರಂದು ದಾಖಲಾಗಿದ್ದರು. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದಾಗ ಸ್ವಲ್ಪ ಚೇತರಿಕೆ ಕಂಡಿದ್ದರೂ, ಇದ್ದಕ್ಕಿದ್ದಂತೆ ಮಧ್ಯಾಹ್ನ ಕೆಎಫ್‌ಡಿ ತೀವ್ರತೆ ಹೆಚ್ಚಿ ಕೊನೆಯುಸಿರೆಳೆದರು.

2019-20ರಲ್ಲಿ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿಯೇ ಸುಮಾರು 23 ಜನ ಮಂಗನ ಕಾಯಿಲೆಗೆ ಬಲಿಯಾಗಿದ್ದರು. ಸರ್ಕಾರ ಮೃತಪಟ್ಟ ಹಲವು ಕುಟುಂಬಗಳಿಗೆ ಪರಿಹಾರವನ್ನು ನೀಡಿದೆ. ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕೆಎಫ್‌ಡಿ ಪ್ರತಿರೋಧಕ ಲಸಿಗೆಯನ್ನು ಈ ಭಾಗದಲ್ಲಿ ನೀಡಿದ್ದರಿಂದ ಸೋಂಕು ತಹಬಂದಿಗೆ ಬಂದಿದೆ ಎಂದು ನಂಬಲಾಗಿತ್ತು. ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಜೋಧ್ ಪುರ: ಈದ್ ವೇಳೆ ಭುಗಿಲೆದ್ದ ಘರ್ಷಣೆ, ಕರ್ಫ್ಯೂ ಜಾರಿ- ಇಂಟರ್ನೆಟ್ ಸೇವೆ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next