Advertisement

ವಿಷ ಮೇವು ಬಿಡಿ ; ರಸಮೇವು ಕೊಡಿ : ಕೆಶಿನ್ಮನೆ ಹೇಳಿಕೆ

04:00 PM Feb 19, 2022 | Team Udayavani |

ಶಿರಸಿ : ಬಯಲು ಸೀಮೆಯಿಂದ ತರುವ ಹುಲ್ಲು ವಿಷಯುಕ್ತವಾಗಿದ್ದು, ಅದರ ಬದಲಿಗೆ‌ ರಸಮೇವು ಬಳಸಬೇಕು ಎಂದು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು‌.

Advertisement

ಅವರು ಇಲ್ಲಿ‌ನ ಟಿಆರ್ ಸಿ ಸಭಾಂಗಣದಲ್ಲಿ ತೋಟಗಾರ್ಸ ಗ್ರೀನ್ ಗ್ರುಪ್ ಫಾರ್ಮಸ್೯ ಪ್ರೊಡ್ಯೂರ್ಸ ಕಂಪನಿ ಶನಿವಾರ ಹಮ್ಕಿಕೊಂಡ ರಸಮೇವು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಉತ್ತರ ಕರ್ನಾಟಕದ ಭಾಗದಿಂದ ಬೈ ಹುಲ್ಲು ತರಿಸಿ ಇಲ್ಲಿನ ಜಾನುವಾರಿಗೆ ಹಾಕುತ್ತೇವೆ. ಅಲ್ಲಿ‌ ಹುಲ್ಲು ಗದ್ದೆಗಳಲ್ಲಿ ಇದ್ದಾಗಲೇ ಭತ್ತದ ಸಸಿಗೆ ಔಷಧ, ಗೊಬ್ಬರ ಹಾಕುತ್ತಾರೆ. ಅಲ್ಲಿಗೆ ಪಶು ಆಹಾರವಾಗಿ‌ ಕೊಡುವ ಹುಲ್ಲೂ ವಿಷಯುಕ್ತವೇ ಆಗಿರುತ್ತದೆ ಎಂದು ಆತಂಕಿಸಿದ ಅವರು, ಹಳ್ಳಿಗಳಲ್ಲಿ ಕೃಷಿ‌ಕಾರ್ಮಿಕರ‌ ಹಾಗೂ ಯುವಕರ ಕೊರತೆ ಇರುವದರಿಂದ ತೋಟದಲ್ಲಿ ಹುಲ್ಲಿದ್ದರೂ ತಂದು ಹಾಕಲು ಆಗದ ಸ್ಥಿತಿಯಲ್ಲಿ ಇದ್ದೇವೆ ಎಂದೂ ಆತಂಕಿಸಿದರು.

ಉತ್ತರ‌ ಕನ್ನಡದಲ್ಲಿ ರಸಮೇವು ಯಾರಾದರೂ ತಯಾರಿಸಿದರೆ ಅನುಕೂಲ ಆಗಬಹುದು. ಆದರೆ ಈಗಿನ ರಸಮೇವು 50-60 ಕೇಜಿ ಬರುತ್ತದೆ. ಆದರೆ, ಅದರ ಕೇಜಿ ತೂಕ ಕಡಿಮೆ‌ ಮಾಡಬೇಕು ಎಂದ ಅವರು, ಹೈನುಗಾರಿಕೆ ಶ್ರಮದ ಜೀವನ. ಸಮಯ‌ಪಾಲನೆ ಮುಖ್ಯ. ಹೈನುಗಾರಿಕೆ ವೃತ್ತಿಪರವಾಗಿ ಲೆಕ್ಕ ಹಾಕಬೇಕು. ಜಿಲ್ಲೆಯಲ್ಲಿ ನಿತ್ಯ ಧಾರವಾಡ ಹಾಲು‌ ಒಕ್ಕೂಟಕಕ್ಕೆ 7200 ಜನ ಹಾಲು ಹಾಕುತ್ತಿದ್ದಾರೆ. 52 ಸಾವಿರ ಹಾಲು‌ ಸಂಗ್ರಹಣೆ ಆಗುತ್ತಿದೆ. ಗುಣಮಟ್ಟದ ಆಹಾರ ಇಲ್ಲದೇ 2 ಸಾವಿರ‌ಲೀ. ವಾಪಸ್ ಆಗುತ್ತದೆ. ಇದಕ್ಕೆ ಸರಕಾರದ ಸಹಾಯಧನ ೫ ರೂ. ಸಿಗುತ್ತಿಲ್ಲ ಎಂದರು.

ಇದನ್ನೂ ಓದಿ : ಕೆಸಿಆರ್ ವಿರುದ್ಧ ಪ್ರತಿಭಟನೆ; ಕತ್ತೆ ಕದ್ದ ಆರೋಪದಡಿ NSUI ಅಧ್ಯಕ್ಷನ ಬಂಧನ, “ಕೈ” ಆಕ್ರೋಶ

Advertisement

ಜಿಲ್ಲೆಯ‌ ಪ್ರಸಿದ್ದ ಹೈನುಗಾರ್ತಿ ರಾಜೇಶ್ವರಿ ಹೆಗಡೆ ಗೋಳಿಕೊಪ್ಪ, ಕರಡ ಹಾಕಿದರೂ ತೊಂದರೇ‌ ಇಲ್ಲ. ಅದೆ ಸಲ್ವಲ್ಪ‌ ಮಟ್ಟಿಗೆ ಬಿಳೆ ಹುಲ್ಲು ವಿಷ ಮೇವಾಗಿದೆ. ಹಸುವಿನ ಹೊಟ್ಟೆಗೆ ತುಂಬಿಸ ಬೇಕು ಎಂದು‌ ಕಸ‌ ಕೂಡ ಹಾಕುತ್ತಿದ್ದೇವೆ. ಕಸವನ್ನು‌ ರಸ ಮಾಡಿ‌ಕೊಡುವ ಕಾಯ೯ ಆಗಬೇಕು ಎಂದರು.

ಇಂದು ಒಳ್ಳೆಯ ರಸ‌ಮೇವು ಬೇಕಾಗಿದೆ. ಆಕಳ ಮೇಲಾದರೂ ವಿಶ್ವಾಸ ಇಡಬಹುದು. ದೊಡ್ಡ ಪ್ರಮಾಣದಲ್ಲಿ ಜಾನುವಾರು ಸಾಕಿದರೆ ಕೆಲಸಗಾರರು‌ ಕೈಕೊಟ್ಟರೆ ಕಷ್ಟ ಎಂದು‌ ಅನುಭವ ಹಂಚಿಕೊಂಡರು.

ಗದಗ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಟಿ.ತಿರುಮಲೇಶ್, ಜವಳಗುಂಡಿ‌ ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಲೀಲಾವತಿ ಶೆಟ್ಟಿ, ಪಶು ವೈದ್ಯ ಡಾ. ಪಿ.ಎಸ್.ಹೆಗಡೆ, ಅಧ್ಯಕ್ಷ
ಶ್ರೀಧರ ಹೆಗಡೆ, ಟಿ.ಆರ್‌ಸಿ‌ ಕಾರ್ಯನಿರ್ವಹಣಾಧಿಕಾರಿ ರಮೇಶ ಹೆಗಡೆ ಇದ್ದರು. ಗುರುಪ್ರಸಾದ‌ಶಾಸ್ತ್ರಿ ನಿರ್ವಹಿಸಿದರು.

ಮುಖ್ಯಾಂಶಗಳು

– ಬೈ ಹುಲ್ಲಿನಲ್ಲಿ ವಿಷವೇ ಹೆಚ್ಚು, ಅದಕಿಂತ‌ ನಮ್ಮ ಕರಡವೇ ಲೇಸು
– ನಿತ್ಯ 7200 ರೈತರಿಂದ ಸರಾಸರಿ 52 ಸಾವಿರ ಕ್ಷೀರ ಸಂಗ್ರಹ
– ಪಶುಗಳನ್ನಾದರೂ‌ ನಂಬಬಹುದು, ಆಳು ನಂಬಿ ದೊಡ್ಡ‌ ಪ್ರಮಾಣದ ಹೈನುಗಾರಿಕೆ ಆಗದು
– ರಸಮೇವು 20 ಕೇಜಿಗೆ‌ ಇಳಿಸಬೇಕು

Advertisement

Udayavani is now on Telegram. Click here to join our channel and stay updated with the latest news.

Next