ಸಾಗರ: ಸೊರಬದ ವಿಶ್ವಮಾನವ ಶಕ್ತಿಸತ್ಯಶೋಧಕ ಸಮಾಜ ಟ್ರಸ್ಟ್ ಮತ್ತು ವಿವಿಧಪ್ರಗತಿಪರ ಸಂಘಟನೆಗಳ ಒಕ್ಕೂಟದವತಿಯಿಂದ ನ. 14ರಂದು ಬೆಳಗ್ಗೆ 11ಕ್ಕೆತಾಲೂಕಿನ ಕಾಗೋಡು ಗ್ರಾಮದಲ್ಲಿಕ್ರಾಂತಿಕಾರಿ ಕಾಗೋಡು ರೈತ ಸತ್ಯಾಗ್ರಹ ಚಳುವಳಿಯ ಸ್ಮರಣೆ, ರೈತ ಸಮಾವೇಶಮತ್ತು ಕಾಗೋಡು ಹೋರಾಟದ ರೂವಾರಿಗಳಾಗಿರುವ ಕುಟುಂಬದ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಮುಖ್ಯಸ್ಥ ಚಂದ್ರಪ್ಪ ಆರ್.ಬಿ. ಕೋಡ್ಕಣಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಕಾಗೋಡು ಗ್ರಾಮದಐತಿಹಾಸಿಕ ಅರಳಿಮರದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾಜಿಸಚಿವ ಕಾಗೋಡು ತಿಮ್ಮಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿಕಾಗೋಡು ಅವರಿಗೆ ವಿಶ್ವಮಾನವ ಕಲ್ಯಾಣಜ್ಯೋತಿ ಭಾರತ ರತ್ನ ಪ್ರಶಸ್ತಿ ಪ್ರದಾನಮಾಡಲಾಗುತ್ತದೆ ಎಂದರು.
ಇದರ ಜೊತೆಗೆ ಕಾಗೋಡು ಹೋರಾಟದರೂವಾರಿಗಳಾಗಿದ್ದ 8 ಕುಟುಂಬದ ಸದಸ್ಯರಿಗೆಕರ್ನಾಟಕ ರತ್ನ, ಅನ್ನದಾತರು ಇನ್ನಿತರ ಪ್ರಶಸ್ತಿನೀಡಿ ಗೌರವಿಸಲಾಗುತ್ತದೆ. ಆಧುನಿಕ ಭಾರತನಿರ್ಮಾಣದಲ್ಲಿ ಎಲ್ಲರ ಪಾತ್ರ ಅತ್ಯಗತ್ಯ.ಇದರ ಜೊತೆಗೆ ಸೊರಬ ತಾಲೂಕಿನ 309ಹಳ್ಳಿಗಳಲ್ಲಿ ಮತ್ತು ಕಾಗೋಡು ಗ್ರಾಮದ ಪ್ರತಿಮನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಕೃಷಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆಆಗುವ ಸಂಕಷ್ಟ ಕುರಿತು ಸಂಗ್ರಹಿಸಲಾಗಿರುವವರದಿಯನ್ನು ತಲುಪಿಸಲಾಗುತ್ತದೆ ಎಂದುತಿಳಿಸಿದರು.
ನ. 14ರಂದು ಬೆಳಿಗ್ಗೆ 8ಕ್ಕೆ ಸೊರಬತಾಲೂಕಿನ ಕೊಡಕಣಿ ರಾಮೇಶ್ವರ ದೇವಸ್ಥಾನಆವರಣದಿಂದ ಸೈಕಲ್ ಮತ್ತು ಬೈಕ್‌ಜಾಥಾವನ್ನು ಕಾಗೋಡು ಗ್ರಾಮದವರೆಗೆಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿಕಾಯ್ದೆತಿದ್ದುಪಡಿ, ಖಾಸಗಿಕರಣ ಕೈಬಿಡುವುದು,ಭಾರತದ ಹಳ್ಳಿಗಳನ್ನು ಸಂಪೂರ್ಣಮದ್ಯಮುಕ್ತ ಗ್ರಾಮವಾಗಿ ಘೋಷಣೆಮಾಡಲು ಒತ್ತಾಯಿಸಲಾಗುತ್ತದೆ ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದಕುಗ್ವೆ, ಪ್ರಮುಖರಾದ ಇಂದೂಧರ, ಸುಶೀಲ,ಶ್ಯಾಮಲ, ಎಂ.ಡಿ. ಯೋಗೀಶ್ವರಪ್ಪ, ಸದಾಶಿವಆರ್.ಬಿ., ಚೌಡಪ್ಪ, ನಾಗರಾಜ್ ಇನ್ನಿತರರುಇದ್ದರು.