Advertisement

ಸಾಲುಮರಗಳ ಕಡಿತಲೆಗೆ ಆಕ್ಷೇಪ ಸಲ್ಲ

02:13 PM Oct 24, 2021 | Team Udayavani |

ಸಾಗರ: ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು,ರಸ್ತೆ ಅಗಲೀಕರಣ ಅನಿವಾರ್ಯವಾಗುತ್ತಿದೆ.ಆದರೆ ರಸ್ತೆ ಬದಿಯ ಸಾಲು ಮರಗಳಕಡಿತಲೆ ಆಕ್ಷೇಪಿಸಿ, ಅಭಿವೃದ್ಧಿ ಕಾರ್ಯವನ್ನುವಿರೋಧಿ ಸುವ ಮನೋಭಾವಸ್ವಾಗತಾರ್ಹವಲ್ಲ ಎಂದು ಎಂಎಸ್‌ಐಎಲ್‌ ಅಧ್ಯಕ್ಷ, ಶಾಸಕ ಎಚ್‌.ಹಾಲಪ್ಪಹರತಾಳು ಹೇಳಿದರು.

Advertisement

ಇಲ್ಲಿನ ಸೊರಬ ರಸ್ತೆಯ ಕೆಳದಿವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿಸಾಗರ ಸೊರಬ ರಾಜ್ಯ ಹೆದ್ದಾರಿ 62ರನಗರದ ಹೊರವಲಯದ ನಾಲ್ಕು ಪಥದರಸ್ತೆಯ ಲೋಕಾರ್ಪಣೆ ಮಾಡಿದ ಅವರು ಮಾತನಾಡಿ, ನಗರವ್ಯಾಪ್ತಿಯಲ್ಲಿ ಇನ್ನಷ್ಟುಅಭಿವೃದ್ಧಿ ಕೆಲಸಗಳು ನಡೆಯಬೇಕಾಗಿದೆ.

ಅಭಿವೃದ್ದಿಗೆ ಸರ್ಕಾರದಿಂದ ಹೆಚ್ಚಿನಹಣ ತರುವ ಪ್ರಯತ್ನ ನಡೆಸುತ್ತೇನೆ.ಸ್ವತ್ಛ ಮತ್ತು ಸುಂದರ ಸಾಗರನಿರ್ಮಿಸಲು ಎಲ್ಲರೂ ಸಂಘಟಿತವಾಗಿಪ್ರಯತ್ನ ನಡೆಸಬೇಕಾಗಿದೆ. ಬಿಎಚ್‌ರಸ್ತೆ ಅಗಲೀಕರಣದಿಂದ ಮರನಾಶವಾಗುತ್ತದೆ ಎಂದು ಕೆಲವರುವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಅಗಲೀಕರಣ ಸಂದರ್ಭದಲ್ಲಿ ಮರನಾಶ ಆಗುವುದಕ್ಕೆ ನನ್ನದೂ ವಿರೋಧವಿದೆ.

ಆದರೆ ಅಭಿವೃದ್ಧಿ ವಿಷಯ ಬಂದಾಗ ನಾಶವಾಗುವ ಮರವನ್ನು ಪರ್ಯಾಯವಾಗಿ ಬೆಳೆಸುವತ್ತ ಗಮನಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.

ನಗರದ ಮಧ್ಯಭಾಗದ ಮಾರ್ಕೆಟ್‌ರಸ್ತೆ ಅಗಲೀಕರಣ ಕಾಮಗಾರಿಯನ್ನುಆವಿನಹಳ್ಳಿ ರಸ್ತೆಯ ಇಕ್ಕೇರಿವೃತ್ತದವರೆಗೂ ವಿಸ್ತರಿಸಲಾಗುವುದು.77 ಕೋಟಿ ವೆಚ್ಚದ ಬಿ.ಎಚ್‌. ರಸ್ತೆಯ8 ಕಿಮೀ ಅಗಲೀಕರಣ ಕಾಮಗಾರಿನ. 15ರೊಳಗೆ ಆರಂಭವಾಗಲಿದೆ.ನಾನು ಶಾಸಕನಾಗಿ ಕೆಲಸ ಮಾಡಿದಎಲ್ಲ ಕ್ಷೇತ್ರಗಳಲ್ಲಿಯೂ ನಾಲ್ಕುಪಥದರಸ್ತೆಯನ್ನು ನಿರ್ಮಿಸಿದ್ದೇನೆ.

Advertisement

ಆದರೆಸಾಗರ ಕ್ಷೇತ್ರದಲ್ಲಿ ನಾಲ್ಕು ಪಥದ ರಸ್ತೆಇಲ್ಲವೆಂಬ ಕೊರಗು ಇತ್ತು.ಇದೀಗ ಮೊದಲ ಹೆಜ್ಜೆಯಾಗಿಕೆಳದಿ ಸರ್ಕಲ್‌ನಿಂದ ಚತುಷ್ಪಥ ರಸ್ತೆನಿರ್ಮಿಸಿದ್ದು, ಕೆಳದಿ ಸರ್ಕಲ್‌ನಿಂದರಾಣಿಚನ್ನಮ್ಮಾಜಿ ವೃತ್ತದವರೆಗೆದ್ವಿಪಥ ರಸ್ತೆ, ಕೆಳದಿ ಸರ್ಕಲ್‌ನಿಂದಸೊರಬ ರಸ್ತೆ, ಶಿವಪ್ಪನಾಯಕ ವೃತ್ತದಮೂಲಕ ಇಕ್ಕೇರಿ ಅಘೋರೇಶ್ವರವೃತ್ತದವರೆಗೆ ಚತುಷ್ಪಥ ರಸ್ತೆಯನ್ನುಶೀಘ್ರವಾಗಿ ನಿರ್ಮಿಸಲಾಗುತ್ತದೆ.

ಚಂದ್ರಮಾವಿನಕೊಪ್ಪಲು ರುದ್ರಭೂಮಿಮೂಲಕ ಗಣಪತಿ ಕೆರೆಯ ತನಕಸುಮಾರು 2 ಕೋಟಿ ರೂ. ವೆಚ್ಚದಲ್ಲಿಸುಸಜ್ಜಿತ ರಸ್ತೆ ನಿರ್ಮಿಸಲಾಗುತ್ತದೆ.ಜೊತೆಗೆ ಗಣಪತಿ ಕೆರೆ ಕೆಳಭಾಗದಲ್ಲಿಉದ್ಯಾನವನ ನಿರ್ಮಿಸುವ ಚಿಂತನೆನಡೆಸಲಾಗಿದೆ ಎಂದು ತಿಳಿಸಿದರು.

ನಗರಸಭಾಧ್ಯಕ್ಷೆ ಮಧುರಾ ಶಿವಾನಂದ್‌ಮಾತನಾಡಿ, ರಸ್ತೆ ಅಗಲೀಕರಣ ಇನ್ನಿತರಅಭಿವೃದ್ಧಿ ಕಾರ್ಯಗಳ ಸಂದರ್ಭ ಸ್ಥಳೀಯನಾಗರಿಕರಿಗೆ ತೊಂದರೆ ಸಹಜ. ಸ್ಥಳೀಯನಾಗರಿಕರ ಸಹಕಾರದಿಂದ ಮಾತ್ರ ರಸ್ತೆಅಗಲೀಕರಣ ಕಾರ್ಯ ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಸರೋಜಾಭಂಡಾರಿ, ಗಣೇಶ್‌ ಪ್ರಸಾದ್‌,ಶ್ರೀನಿವಾಸ, ಪ್ರೇಮ ಮುಂತಾದವರುಹಾಜರಿದ್ದರು. ಶ್ರೀರಾಮ ಸ್ವಾಗತಿಸಿದರು.ಮೈತ್ರಿ ಪಾಟೀಲ್‌ ವಂದಿಸಿದರು. ಸತೀಶ್‌ಕೆ.ಮೋಗವೀರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next