Advertisement

ಸಾಗರ: ವಿವಾಹಿತೆಯ ಮೇಲೆ ಅತ್ಯಾಚಾರ ಯತ್ನ, ಬ್ಲ್ಯಾಕ್ ಮೇಲ್; ಬಂಧನ

07:32 PM Jun 27, 2022 | Vishnudas Patil |

ಸಾಗರ: ಪತಿ ಇಲ್ಲದ ಸಮಯದಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿದ ಪರಿಚಿತನೋರ್ವ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

Advertisement

ಆರೋಪಿ ದಿಗಟೆಕೊಪ್ಪದ ರಮೇಶ್ ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮಾಸೂರು ಗ್ರಾಮದ ಮಹಿಳೆ ಪತಿಗೆ ಪರಿಚಯನಾದ ರಮೇಶ್ ಆಗಾಗ್ಗೆ ಮನೆಗೆ ಬರಲು ಆರಂಭಿಸಿದ್ದ. ಜೂನ್ ಮೊದಲ ವಾರದಲ್ಲಿ ಪತಿ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದ ಸಂದರ್ಭ ಬಳಸಿಕೊಂಡು ಮನೆಗೆ ನುಗ್ಗಿದ ಆರೋಪಿ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಮಹಿಳೆ ಕಿರುಚಿ ಅಕ್ಕಪಕ್ಕದ ಮನೆಯವರು ಬಂದ ಕಾರಣ ಆರೋಪಿ ಮಹಿಳೆಯ ಫೋಟೋ ತೆಗೆದುಕೊಂಡು ಪರಾರಿಯಾಗಿದ್ದ.

ಪತಿ ಆ ಸಮಯದಲ್ಲಿಯೇ ಪೊಲೀಸ್ ಕಂಪ್ಲೇಂಟ್‌ಗೆ ಮುಂದಾದಾಗ ಆರೋಪಿ ದೂರು ನೀಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ಫೋಟೋ ಹಾಕಿ ಅಪಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ. ಆ ನಂತರವೂ ಬ್ಲಾಕ್‌ಮೇಲ್ ಮಾಡಿ ಮಹಿಳೆಯನ್ನು ಅನೈತಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next