ಸಾಗರ: ನಗರದ ಮಹಾಗಣಪತಿ ದೇವರ ಮಹಾಸ್ಯಂದನ ರಥೋತ್ಸವ ಮಂಗಳವಾರ ಬೆಳಿಗ್ಗೆ 7;50ಕ್ಕೆ ಆರಂಭವಾಯಿತು. ಅರ್ಚಕ ವರ್ಗದವರು, ಕಂದಾಯ ಇಲಾಖೆಯ ಅಧಿಕಾರಿಗಳು, ದೇವಸ್ಥಾನದ ಕಚೇರಿ ಅಧಿಕಾರಿ, ಸಿಬ್ಬಂದಿವರ್ಗದವರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆ ಕಳೆಗುಂದಿತ್ತು. ಕೇವಲ ಧಾರ್ಮಿಕ ವಿಧಿವಿಧಾನಗಳನ್ನು ಮಾತ್ರ ತಾಲುಕು ಆಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ನಿರ್ವಹಿಸುವಂತಾಗಿತ್ತು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮೂಷಿಕ ಯಂತ್ರೋತ್ಸವ, ಸೋಮವಾರದಂದು ಪುಷ್ಪಮಂಜರಿ ಯಂತ್ರೋತ್ಸವ ನಡೆದಿತ್ತು.
ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು, ಸಾಗರ ಉಪವಿಭಾಗದ ಸಹಾಯಕ ಆಯುಕ್ತ ಡಾ. ನಾಗರಾಜ್ ಎಲ್., ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ದೇವಸ್ಥಾನದ ಆಡಳಿತಾಧಿಕಾರಿ ರಂಗಪ್ಪ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಟಿ.ಡಿ.ಮೇಘರಾಜ್, ಬಿ.ಎಚ್.ಲಿಂಗರಾಜ್, ಪುರುಷೋತ್ತಮ್, ಜಾತ್ರೋತ್ಸವ ಸಮಿತಿ ಸಂಚಾಲಕರಾದ ಐ.ವಿ.ಹೆಗಡೆ, ಕುಸುಮ ಸುಬ್ಬಣ್ಣ ಇನ್ನಿತರರು ಹಾಜರಿದ್ದರು. ಪ್ರಧಾನ ಅರ್ಚಕ ನವೀನ್ ಜೋಯ್ಸ್, ತಾಂತ್ರಿಕರಾದ ವಿದ್ವಾನ್ ಜಗದೀಶ್ ಭಟ್, ಸದಾನಂದ ಜೋಯ್ಸ್, ಉಪಾಧಿಗಳ ಇನ್ನಿತರರ ನೇತೃತ್ವದಲ್ಲಿ ರಥೋತ್ಸವ ಕುರಿತ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.
ಇದನ್ನೂ ಓದಿ : ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದ ಮರ : ಮಹಿಳೆ ಸಾವು, ಐವರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ