Advertisement

3 ತಿಂಗಳ ಬಳಿಕ ಜೋಗ ಪ್ರವಾಸಿಗರಿಗೆ ಮುಕ್ತ

01:21 PM Jun 21, 2020 | Naveen |

ಸಾಗರ: ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ 3 ತಿಂಗಳಿನಿಂದ ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ.  ರಾಜಾ ಜಲಪಾತದ ಮುಂಬೈ ಬಂಗಲೆಯ ಪ್ರದೇಶ ಹೊರತುಪಡಿಸಿ, ಜೂ.18ರಿಂದ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

ಜಲಸಿರಿಯ ವೈಭವದ ವೀಕ್ಷಣೆಗೆ ಬರುವ ಪ್ರವಾಸಿಗರ ವಾಹನಗಳಿಗೆ ಪ್ರಾಧಿಕಾರದ ಮುಖ್ಯದ್ವಾರದಿಂದ ಒಳಗೆ ಪ್ರವೇಶವಿಲ್ಲ. ಪ್ರವಾಸಿಗರನ್ನು ಮಾತ್ರ ಪ್ರಧಾನ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಗುವುದು. ಮುಖಗವಸು ಕಡ್ಡಾಯ ಧರಿಸಬೇಕು. ಜಲಪಾತ ವೀಕ್ಷಣೆಯ ಸಮಯದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಕಡ್ಡಾಯ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್‌.ಎಸ್‌. ರಾಮಕೃಷ್ಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next