Advertisement
ತಾಲೂಕಿನ ಎಡಜಿಗಳೆಮನೆ ಗ್ರಾಪಂ ಎಸ್‌ಟಿ ಕಾಲೋನಿಯಲ್ಲಿ ಶನಿವಾರ ವಿಶೇಷ ಘಟಕ ಯೋಜನೆಯಡಿ 25 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಎಂದು ಸವಾಲು ಹಾಕಿದರು. ಗುತ್ತಿಗೆದಾರರು ಟೆಂಡರ್‌ಗಿಂತ ಕಡಿಮೆ ದರಕ್ಕೆ ಕಾಮಗಾರಿ ಗುತ್ತಿಗೆ ಹಿಡಿಯುವುದರಿಂದ ಗುಣಮಟ್ಟದ ಕಾಮಗಾರಿ ನಡೆಸುವುದರಲ್ಲಿ ಅನುಮಾನಗಳಿವೆ. ಸರ್ಕಾರ ಎಸ್‌ಆರ್ ಬೆಲೆ ಕೊಡಲು ಸಿದ್ಧವಿದೆ. ಗುತ್ತಿಗೆದಾರರು ಅಭಿವೃದ್ಧಿಯಾಗುವುದನ್ನು ಹಾಗೂ ಇದೇ ಸಮಯದಲ್ಲಿ ಗುಣಮಟ್ಟದ ಕೆಲಸ ಆಗುವುದನ್ನು ನಾವು ಬಯಸುತ್ತೇವೆ. ಸರ್ಕಾರ ಹಣ ಕೊಡಲು ಸಿದ್ಧ ಇರುವಾಗ ಟೆಂಡರ್‌ನಲ್ಲಿ ಕಡಿಮೆ ಮೊತ್ತ ನಮೂದಿಸಿ ಕೆಲಸ ಹಾಳು ಮಾಡುವುದನ್ನು ಸಹಿಸಲಾಗುವುದಿಲ್ಲ ಎಂದರು.
Related Articles
Advertisement
ಕೆಲಸವನ್ನು ಚುರುಕುಗೊಳಿಸಲು ಕೂಡ ಇದರಿಂದ ಸಹಾಯವಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳು ಗುಣಮಟ್ಟದ ಕೆಲಸ ಆಗುವಂತೆ ನಿಗಾವಹಿಸಬೇಕು ಎಂದರು. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ 60 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮಂಕಳಲೆಯ ಸಂಪರ್ಕ ರಸ್ತೆಯ ಉಳಿದ 300 ಮೀ. ಕಾಮಗಾರಿಯನ್ನು ನಗರಸಭೆ ಅನುದಾನದಲ್ಲಿ ಮಾಡಲಾಗುತ್ತದೆ.
ಮಂಕಳಲೆ ಹಾಗೂ ಕರ್ಕಿಕೊಪ್ಪದ ಸಂಪರ್ಕ ರಸ್ತೆಯ ಕರ್ಕಿಕೊಪ್ಪ ಭಾಗದ ಡಾಂಬರೀಕರಣಕ್ಕೆ ಅನುದಾನ ಕೊಡಲು ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಗೊಳ್ಳುತ್ತದೆ. ಈ ರಸ್ತೆಗಳ ಕೆಲಸಗಳು ಮೇ ಅಥವಾ ಜೂನ್ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದರು.
ಜಿಪಂ ಸದಸ್ಯ ಭೀಮನೇರಿ ಶಿವಪ್ಪ ಮಾತನಾಡಿ, ವಿಪರೀತವಾಗಿ ಸುರಿದ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿವೆ. ಶಾಸಕರು ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಸಮೀಪದ ಬಾಳೆಗೆರೆಯಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ಮೂಲಿಕಾವನ ನಿರ್ಮಾಣ ಮಾಡಲಾಗಿದೆ. ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಇದು ಪ್ರವಾಸಿ ತಾಣವಾಗುವ ಸಾಧ್ಯತೆ ಇದೆ. ಎಡಜಿಗಳೇಮನೆಯಲ್ಲಿ ಯಾತ್ರಿನಿವಾಸ ಕಟ್ಟಡ ನಿರ್ಮಾಣ ಮಾಡಿದ್ದು ಈತನಕ ಲೋಕಾರ್ಪಣೆಯಾಗಿಲ್ಲ. ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಗ್ರಾಪಂ ಅಧ್ಯಕ್ಷ ಎಂ.ಡಿ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಗ್ರಾಪಂ ಉಪಾಧ್ಯಕ್ಷೆ ಸುಭದ್ರ ಗಣಪತಿ, ಸದಸ್ಯರಾದ ಪ್ರಕಾಶ್, ಪದ್ಮಾವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧರ್ಮಪ್ಪ ಇನ್ನಿತರರು ಇದ್ದರು. ಮುರಳಿ ಮಂಕಳಲೆ ಸ್ವಾಗತಿಸಿದರು. ಗಿರೀಶ್ ಹಕ್ರೆ ವಂದಿಸಿದರು.