Advertisement

Sagara: ಅಡಕೆಗೆ ಕೊಳೆ ರೋಗ… ಮನನೊಂದ ರೈತ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ

02:08 PM Aug 27, 2024 | sudhir |

ಸಾಗರ: ತಾಲೂಕಿನ ಬ್ಯಾಕೋಡು ಸಮೀಪದ ಬೈನೆಮನೆಯ ರೈತ ಅಶೋಕ(42) ಈ ಬಾರಿಯ ಅಡಕೆಯ ತೀವ್ರ ಕೊಳೆ ಹಾವಳಿಯಿಂದ ಸಂಕಷ್ಟಕ್ಕೊಳಗಾಗಿ ಕೃಷಿಹೊಂಡಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ (ಆಗಸ್ಟ್ 26) ನಡೆದಿದೆ.

Advertisement

ಎರಡು ಎಕರೆ ಅಡಕೆ ತೋಟ ಹೊಂದಿರುವ ಅಶೋಕ ಬ್ಯಾಂಕ್‌ಗಳಲ್ಲಿ ದೊಡ್ಡ ಮೊತ್ತದ ಸಾಲ ಪಡೆದಿದ್ದರು. ಈ ನಡುವೆ ಅಡಕೆಗೆ ಕೊಳೆ ರೋಗ ಬಂದ ಕಾರಣ ಅಡಕೆ ಸಂಪೂರ್ಣವಾಗಿ ನೆಲದ ಪಾಲಾಗಿತ್ತು. ಇಬ್ಬರು ಪುತ್ರರು ಹಾಗೂ ಓರ್ವ ಮಗಳು ಸೇರಿದಂತೆ ಮೂರು ಮಕ್ಕಳ ವಿದ್ಯಾಭ್ಯಾಸದ ಒತ್ತಡವೂ ಸೇರಿದಂತೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಇದರಿಂದ ಮನನೊಂದ ಅಶೋಕ ಮನೆಯ ಕೃಷಿ ಹೊಂಡಕ್ಕೆ ಹಾರಿ ಜೀವ ಕಳೆದುಕೊಂಡಿದ್ದಾರೆ.

ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Suprme court: ದೆಹಲಿ ಅಬಕಾರಿ ನೀತಿ ಹಗರಣ-ಬಿಆರ್‌ ಎಸ್‌ ನಾಯಕಿ ಕವಿತಾಗೆ ಜಾಮೀನು

 

Advertisement
Advertisement

Udayavani is now on Telegram. Click here to join our channel and stay updated with the latest news.