Advertisement

Sagara: ಬಾಳೆಹಳ್ಳಿಯಲ್ಲೊಂದು ವಿಚಿತ್ರ ಬೆಳವಣಿಗೆ; ಒಂದೇ ಜಾಗ, ಎರಡು ವನಮಹೋತ್ಸವ!

03:38 PM Aug 27, 2024 | Poornashri K |

ಸಾಗರ: ಕೇವಲ 68 ದಿನಗಳ ಹಿಂದೆ ಖುದ್ದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಪಾಲ್ಗೊಂಡು ವನಮಹೋತ್ಸವ ಮಾಡಿದಲ್ಲಿಯೇ ಮತ್ತೊಮ್ಮೆ ಗ್ರಾಮಸ್ಥರು, ಅರಣ್ಯ ಇಲಾಖೆಯವರು ಗಿಡ ನೆಟ್ಟ ವಿಚಿತ್ರ ಘಟನೆ ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಳೆಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

Advertisement

ಜೂನ್21ರಂದು ಸೊಪ್ಪಿನ ಬೆಟ್ಟ ಸಂರಕ್ಷಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ಪಾಲ್ಗೊಂಡಿದ್ದರು. ಹಲಸಿನ ಗಿಡ ನೆಟ್ಟು, ಇದರ ಫಲವನ್ನು ನಾವೇ ತಿನ್ನುವ ಕಾಲ ಬರಲಿ ಎಂದು ಆಶಯ ವ್ಯಕ್ತಪಡಿಸಿದ್ದರು. ಈ ನಡುವೆ ಆಗಸ್ಟ್ 22ರಂದು ಕೆಲವು ದುಷ್ಕರ್ಮಿಗಳು ತಮ್ಮ ಒತ್ತುವರಿಯನ್ನು ಕಂದಾಯ ಇಲಾಖೆ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಬಾಳೆಹಳ್ಳಿಯ ಗ್ರಾಮಸ್ಥರ ಕೈವಾಡ ಇದೆ ಎಂದು ಶಂಕಿಸಿ, ಈ ಭಾಗದಲ್ಲಿ ನೆಟ್ಟ ಗಿಡಗಳನ್ನು ಕಿತ್ತು, ಕತ್ತರಿಸಿ, ಟ್ರೀ ಗಾರ್ಡ್‌ಗಳನ್ನು ನಾಶಗೊಳಿಸಿದ ಘಟನೆ ನಡೆದಿತ್ತು. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿತ್ತು.
ಈ ನಡುವೆ ಬಾಳೆಹಳ್ಳಿಯ ಗ್ರಾಮಸ್ಥರನ್ನು ಸಂಪರ್ಕಿಸಿದ ಅರಣ್ಯ ಇಲಾಖೆ, ಮಳೆಗಾಲ ಮುಕ್ತಾಯವಾಗದೇ ಇರುವ ಹಿನ್ನೆಲೆಯಲ್ಲಿ ಇನ್ನೊಮ್ಮೆ ವನಮಹೋತ್ಸವ ಮಾಡುವ ಇಂಗಿತ ವ್ಯಕ್ತಪಡಿಸಿತ್ತು. ಸಕಾರಾತ್ಮಕವಾಗಿ ಗ್ರಾಮಸ್ಥರು ಸ್ಪಂದಿಸಿದ್ದರಿಂದ ಇಜೆ ಮನೆ ಗ್ರಾಪಂ ಅಧ್ಯಕ್ಷೆ ನಾಗವೇಣಿ ಪ್ರವೀಣ ಮತ್ತೊಂದು ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಲಯ ಅರಣ್ಯಾಧಿಕಾರಿ ಅಣ್ಣಪ್ಪ, ಗ್ರಾಪಂ ಸದಸ್ಯ ಗಿರೀಶ್ ಎನ್. ಹಕ್ರೆ, ಸಾಮಾಜಿಕ ಕಾರ್ಯಕರ್ತ ಪ್ರವೀಣ ಸೆಟ್ಟಿಸರ, ಗ್ರಾಮಸ್ಥರಾದ ಶ್ರೀಧರಮೂರ್ತಿ, ಮನು, ಬಿ.ಟಿ.ಪ್ರಭಾಕರ, ಗಣಪತಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next