Advertisement

ಗೋವಾದ ಕಲಾವಿದ ಸಾಗರ್ ಸುರೇಶ್ ನಾಯ್ಕ್ ಚಿತ್ರಕಲೆಯನ್ನು ಹೊಗಳಿದ ಪ್ರಧಾನಿ ಮೋದಿ

12:46 PM Dec 28, 2021 | Team Udayavani |

ಪಣಜಿ: ಗೋವಾದ ಪೊಂಡಾ ಅಡಪೈ  ನಿವಾಸಿ ಚಿತ್ರ ಕಲಾವಿದ ಸಾಗರ್ ಸುರೇಶ್ ನಾಯ್ಕ್ ರವರು ಕಣ್ಮರೆಯಾಗುತ್ತಿರುವ ಅಪರೂಪದ ಚಿತ್ರ ಕಲೆ ಪ್ರಕಾರವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್‍ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿರುವುದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

Advertisement

ಗೋವಾ ಕಾಲೇಜ್ ಆಪ್ ಆಟ್ರ್ಸನಿಂದ ಬ್ಯಾಚುಲರ್ ಆಫ್ ಪೈನ್ ಆರ್ಟ್ಸ್ ಪದವಿ ಪಡೆದು, ಹೈದರಾಬಾದ್‍ನಲ್ಲಿ ಉನ್ನತ ಶಿಕ್ಷಣ ಪಡೆದು ಗೋವಾಕ್ಕೆ ಮರಳಿ ಗೋವಾದಲ್ಲಿ ಚಿತ್ರಕಲೆ ಮತ್ತು ಛಾಯಾಗ್ರಹಣ ಆರಂಭಿಸಿ ಇದುವರೆಗೂ ಇವರು 5 ಗೋವಾ ರಾಜ್ಯ ಮಟ್ಟದ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಇವರ ಚಿತ್ರಗಳು ಹಳ್ಳಿಗಳ ಸೌಂದರ್ಯ ವಿವರಿಸುತ್ತವೆ. ಇವರು ಬಿಡಿಸಿದ ವರ್ಣ ಚಿತ್ರಗಳು ಮತ್ತು ಗೋವಾ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು ಹೆಚ್ಚಿನ ಪ್ರಸಿದ್ಧಿ ಪಡೆದಿವೆ. ಕಣ್ಮರೆಯಾಗುತ್ತಿರುವ ಇಂತಹ ಕಲಾ ಪ್ರಕಾರವನ್ನು ಜೀವಂತವಾಗಿರಿಸಲು ಸಾಗರ್ ರವರು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ಮನ್‍ಕಿ ಬಾತ್‍ನಲ್ಲಿ ಪ್ರಸ್ತಾಪಿಸಿರುವುದು ರಾಜ್ಯಾದ್ಯಂತ ಸಾಗರ್ ರವರ ಕಲೆಯ ಬಗ್ಗೆ ಇನ್ನಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next