Advertisement

Sagar;ಶಾಲೆ ಮೇಲ್ಛಾವಣಿ ಕುಸಿತ; ತಪ್ಪಿದ ಭಾರೀ ಅನಾಹುತ

04:15 PM Jun 26, 2023 | Shreeram Nayak |

ಸಾಗರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸಣ್ಣ ಮಳೆಗೆ ನಗರದ ಅರಳೀಕಟ್ಟೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕೋಣೆಯೊಂದರ ಮೇಲ್ಛಾವಣಿ ಭಾನುವಾರ ಕುಸಿದಿದ್ದು, ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದೆ.

Advertisement

ಕಳೆದ ಭಾನುವಾರ ಬೆಳಗಿನ ಜಾವ ಶಾಲಾ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದು, ಹೆಂಚು, ಪಕಾಸಿ ಧ್ವಂಸಗೊಂಡಿವೆ. ಶಾಲೆ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದೇ ಆದರೆ ಸಾಕಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಅರಳೀಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದಾರು ಕೋಣೆಗಳು ಶಿಥಿಲಗೊಂಡು ಮಳೆಯಿಂದ ಸೋರುತ್ತಿವೆ. ಈ ಬಗ್ಗೆ ಶಾಲಾ ಸಿಬ್ಬಂದಿ, ಎಸ್ಡಿಎಂಸಿ ಸದಸ್ಯರು ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಹಮತ್ ಉಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.

ಎಲ್‌ಕೆಜಿಯಿಂದ 7ನೇ ತರಗತಿ ಇದ್ದರೂ, ಮೂರು ಕೋಣೆಗಳಲ್ಲಿ ಮಾತ್ರ ಪಾಠ ಪ್ರವಚನ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಶಾಲೆಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಮುಂದಾಗುವ ಅನಾಹುತಕ್ಕೆ ತಾಲೂಕು ಆಡಳಿತ ಜವಾಬ್ದಾರಿಯಾಗಬೇಕಾಗುತ್ತದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆ ಕೋಣೆಯ ಮೇಲ್ಛಾವಣಿ ಕುಸಿದ ವಿಷಯ ತಿಳಿದ ತಕ್ಷಣ ಸಹಾಯಕ ಆಯುಕೆ ಪಲ್ಲವಿ ಸಾತೇನಹಳ್ಳಿ ಸ್ಥಳಕ್ಕೆ ಆಗಮಿಸಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಮತ್ತು ಇಸಿಒ ಅವರಿಗೆ ಹಾನಿಗೀಡಾದ ಕುರಿತು ವರದಿ ಸಲ್ಲಿಸಲು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿ ಸಮಿತಿಯ ಎಂ.ಟಿ.ಎಸ್ ರಶೀದ್, ರಫೀವುದ್ದೀನ್, ಡಿ.ಕೆ.ಎಸ್. ಅಕ್ಬರ್, ರಿಯಾಜ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next