Advertisement
ಸೌಕೂರಿನ ಜಾತ್ರೆಗೆ ಶುಭಕೋರಿ ಫೆ.25 ರ ಸಂಜೆ ವೇಳೆ ಕಬ್ಬಿಣದ ಫ್ಲೆಕ್ಸ್ ಅಳವಡಿಸುವಾಗ ಆಕಸ್ಮಿಕವಾಗಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನ ತಂತಿಗೆ ತಗುಲಿ ಪ್ರಶಾಂತ್ ದೇವಾಡಿಗೆ ಸ್ಥಳದಲೇ ಸಾವನ್ನಪ್ಪಿದ್ದರು. ಶ್ರೀಧರ್ ಎಂಬುವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೌಕೂರಲ್ಲಿ ಒಂದೇಡೆ ದೇವಸ್ಥಾನ, ಪಕ್ಕದಲ್ಲಿಯೇ ಶಾಲೆ ಇದೆ. ಆದರೂ ಟ್ರಾನ್ಸ್‌ಫಾರ್ಮರ್ ಸುತ್ತ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಜನನಿಬಿಡವಾಗುವ ಪ್ರದೇಶದಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಿದರೂ ಕೂಡ ಸಂಬಂಧಪಟ್ಟ ಇಲಾಖೆ ಕನಿಷ್ಠ ಅದಕ್ಕೊಂದು ಬೇಲಿಯನ್ನು ನಿರ್ಮಿಸುವ ಕೆಲಸವನ್ನು ಮಾಡಿಲ್ಲ. ಆಸುಪಾಸಿನಲ್ಲಿ ನಿತ್ಯ ಶಾಲೆಗೆ ಬರುವ ಸಣ್ಣ ಸಣ್ಣ ಮಕ್ಕಳು ಓಡಾಡುತ್ತಾರೆ. ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ಸಾಕಷ್ಟು ಸಂಖ್ಯೆಯ ಜನ ಸೇರುತ್ತಾರೆ ಎನ್ನುವ ಅರಿವಿದ್ದರೂ ಕೂಡ ಈ ಟ್ರಾನ್ಸ್‌ಫಾರ್ಮರ್ ಸುತ್ತ ಒಂದು ಜಾಲರಿಯ ಬೇಲಿ ನಿರ್ಮಿಸಲೂ ಸಾಧ್ಯವಿಲ್ಲವೇ? ಒಂದು ವೇಳೆ ಈ ಟಿಸಿಗೆ ಸುತ್ತ ಬೇಲಿಯಿದ್ದಿದ್ದರೆ ಆ ಅದಾದರೂ ಎಚ್ಚರಿಸುತ್ತಿತ್ತು. ಆಗ ಇಂತಹ ಅವಘಢ ಸಂಭವಿಸುತ್ತಿರಲಿಲ್ಲ. ಅದಲ್ಲದೇ ಈ ಟಿಸಿಯ ವಿದ್ಯುತ್ ತಂತಿಗಳು ಜಾಸ್ತಿ ಎತ್ತರದಲಿಲ್ಲ. ಕೈಗೆ ತಾಗುವ ಅಂತರದಲ್ಲಿದೆ. ಈ ರೀತಿಯ ನಿರ್ಲಕ್ಷéದಿಂದ ಒಂದು ಬಡಕುಟುಂಬದ ಆಧಾರ ಸ್ತಂಭವೇ ಕುಸಿದು ಬಿದ್ದಂತಾಗಿದೆ. ಇದನ್ನೂ ಓದಿ : ಹಂಪಿ ಮಾದರಿಯಲ್ಲೇ ಕಾರ್ಕಳ ಉತ್ಸವಕ್ಕೆ ಸಕಲ ಸಿದ್ಧತೆ
Related Articles
ಮೆಸ್ಕಾಂ ಇಲಾಖೆಯು ಖಾಸಗಿಯವರಿಗೆ ಟಿಸಿ ನಿರ್ಮಾಣ ಮಾಡುವಾಗ ಒಂದಷ್ಟು ಷರತ್ತುಗಳನ್ನು ಹಾಕುತ್ತಾರೆ. ಸಾಕಷ್ಟು ಎತ್ತರದಲ್ಲಿ ಟಿಸಿ ಇರಬೇಕು. ಸುತ್ತ ಸುರಕ್ಷತೆಗೆ ಸುತ್ತಲೂ ಬೇಲಿ ಅಳವಡಿಸಬೇಕು ಇತ್ಯಾದಿ ಷರತ್ತುಗಳನ್ನು ಹಾಕುತ್ತಾರೆ. ದೊಡ್ಡ ದೊಡ್ಡ ಕಟ್ಟಡ, ಉದ್ಯಮ, ಅಪಾರ್ಟ್‌ಮೆಂಟ್ ಇತ್ಯಾದಿಗಳಿಗೆ ವಿದ್ಯುತ್ ಸಂಪರ್ಕ ಟ್ರಾನ್ಸ್ ಫಾರ್ಮರ್ ಅಳವಡಿಸುವಾಗ ಅವರು ಅದಕ್ಕೆ ರಕ್ಷಣ ಕ್ರಮಗಳನ್ನು ಅಳವಡಿಸುತ್ತಾರೆ. ಆದರೆ ಇಲಾಖೆಯ ಅಧೀನದ ಸಾರ್ವಜನಿಕ ಸ್ಥಳಗಳಲ್ಲಿರುವ ಟ್ರಾನ್ಸ್ ಫಾರ್ಮರ್‌ಗಳಿಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸುವುದಿಲ್ಲ. ಈ ಷರತ್ತು, ನಿಯಮ ಖಾಸಗಿಯವರಿಗೆ ಮಾತ್ರವೇ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
Advertisement