Advertisement

ಕ್ಷಮೆ ಕೇಳ್ದಿದ್ರೆ ನಾನು BJP ನಾನು RSS ಹೆಸ್ರಲ್ಲಿ ಜೈಲ್‌ ಭರೋ!

12:38 PM Jan 11, 2018 | |

ಬೆಂಗಳೂರು : ಬಿಜೆಪಿ, ಆರ್‌ಎಸ್‌ಎಸ್‌ ನವರು ಒಂಥರಾ ಉಗ್ರಗಾಮಿಗಳೇ ಎಂದು ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧಕೇಸರಿ ಪಡೆ ಹೋರಾಟಕ್ಕೆ ಮುಂದಾಗಿದೆ.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ  ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ‘ಕಳೆದ 70 ವರ್ಷಗಳಿಂದ ದೇಶ ಸೇವೆ ಮಾಡುತ್ತಿರುವ  ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಾಜಪೇಯಿ ಅವರು ಕಟ್ಟಿದ ಬಿಜೆಪಿಯನ್ನು ಉಗ್ರಗಾಮಿಗಳ ಪಕ್ಷ ಎನ್ನುತ್ತಾರೆ.  ಇಂದು ಸಂಜೆಯ ಒಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡುರಾವ್‌ ಅವರು ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

‘ಕ್ಷಮೆ ಯಾಚಿಸದೆ ಹೋದಲ್ಲಿ ನಾಳೆಯಿಂದ ”ನಾನು ಬಿಜೆಪಿ, ನಾನು ಆರ್‌ಎಸ್‌ಎಸ್‌” ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಜೈಲ್‌ ಭರೋ ನಡೆಸುತ್ತೇವೆ. ತಾಕತ್ತಿದ್ದರೆ ನಮ್ಮನ್ನು ಬಂಧಿಸಿ’ ಎಂದು ಸವಾಲು  ಹಾಕಿದರು. 

ಉಲ್ಟಾ ಹೊಡೆದ ಸಿಎಂ !

ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಚಾಮಾರಾಜನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ನಾನು ‘ಹಿಂದುತ್ವ ಉಗ್ರಗಾಮಿಗಳು’ ಎಂದು ಹೇಳಿದ್ದು ಎಂದು  ಸಮಜಾಯಿಷಿ ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next