Advertisement

ಬೆಳಗಾವಿಯಲ್ಲಿ ಮಸೀದಿ ಮೇಲೆ ಕೇಸರಿ ಧ್ವಜ, ಉದ್ವಿಗ್ನ ವಾತಾವರಣ; ಪ್ರಕರಣ ದಾಖಲು

05:28 PM May 11, 2022 | Vishnudas Patil |

ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ಸತ್ತಿಗೇರಿ ಮಡ್ಡಿ ಮಸೀದಿಯ ಮೇಲೆ ಬುಧವಾರದಂದು ರಾಜ್ಯದಲ್ಲಿ ಧ್ವನಿವರ್ಧಕದ ಗದ್ದಲದ ನಡುವೆ ಕೇಸರಿ ಧ್ವಜ ಹಾರಿಸಿರುವುದು ಕಂಡುಬಂದಿದೆ.

Advertisement

ಬುಧವಾರ ಬೆಳಗಿನ ಜಾವ 3.30ರಿಂದ 5.30ರ ನಡುವೆ ದುಷ್ಕರ್ಮಿಗಳು ಧ್ವಜ ಹಾಕಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಘಟನೆ ಬೆಳಕಿಗೆ ಬಂದ ನಂತರ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಮಸೀದಿ ಖಾಜಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಉದ್ವಿಗ್ನತೆ ಉಂಟಾಗುವುದನ್ನು ತಪ್ಪಿಸಲು ಪೊಲೀಸರು ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳ ಮುಖಂಡರ ನಡುವೆ ಶಾಂತಿ ಸಭೆ ನಡೆಸಿದ್ದಾರೆ.

ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರೂ ಜಿಲ್ಲೆಯ ಎಲ್ಲಾ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next