Advertisement

ಬಿಜೆಪಿ ಯುವಮೋರ್ಚಾದಿಂದ ಕೇಸರಿ ದಿನಾಚರಣೆ

09:56 AM Sep 26, 2017 | Team Udayavani |

ಮಂಗಳೂರು: ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಜನ್ಮದಿನವಾದ ಸೆ. 25ರಂದು ದ. ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಜಿಲ್ಲಾದ್ಯಂತ ಕೇಸರಿ ದಿನ ಆಚರಿಸಲಾಯಿತು.

Advertisement

ಯುವ ಮೋರ್ಚಾ ವತಿಯಿಂದ ಹಲವೆಡೆಗಳಲ್ಲಿ ಕೇಸರಿ ಶಾಲನ್ನು ನೀಡಿ ಕೇಸರಿ ದಿನ ಆಚರಿಸಲಾಗಿದೆ. ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರು ಶ್ರೇಷ್ಠ ರಾಜಕೀಯ ಸಂತ. ಭಾರತೀಯ ವಿಚಾರ ಧಾರೆಯ ಮೊದಲ ರಾಜಕೀಯ ಚಿಂತನೆ ಕೊಟ್ಟಿರುವ, ಕೇಸರಿ ಚಿಂತನೆಯ ಆಧಾರದಲ್ಲಿ ರಾಷ್ಟ್ರಕ್ಕೆ ಹೊಸ ಚಿಂತನೆ ಯನ್ನು ನೀಡಿರುವ ಮಹಾನ್‌ ನಾಯಕ. ಅಂತ್ಯೋ ದಯ ಹರಿಕಾರ ಹಾಗೂ ಏಕಾತ್ಮ ಮಾನವತಾ ವಾದದ ಸಿದ್ಧಾಂತವನ್ನು ಕೊಟ್ಟಿರುವ ನಾಯಕ. ಕೇಸರಿ ದಿನಕ್ಕೆ ಸ್ವ ಇಚ್ಛೆಯಿಂದಲೇ ಹೆಚ್ಚಿನ ಬೆಂಬಲ  ದೊರಕಿದ್ದು, ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಕಾರ್ಮಿಕರು, ಚಾಲಕರು ಸೇರಿದಂತೆ ಬೆಂಬಲ ನೀಡಿದ್ದಾರೆ. ದ.ಕ. ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗೋಡಂಬಿ ಫ್ಯಾಕ್ಟರಿ, ಬಸ್‌ ನಿಲ್ದಾಣ, ಆಟೋ ನಿಲ್ದಾಣ, ಅಂಗಡಿ, ಕಚೇರಿ ಸೇರಿದಂತೆ ಹಲವೆಡೆ ಕೇಸರಿ ದಿನ ಆಚರಿಸಲಾಗಿದೆ.

ಯುವಮೋರ್ಚಾ ದ.ಕ. ಜಿಲ್ಲಾಧ್ಯಕ್ಷ ಹರೀಶ್‌ ಪೂಂಜಾ, ಪ್ರಧಾನ ಕಾರ್ಯದರ್ಶಿ ಹರೀಶ್‌ ಮೂಡುಶೆಡ್ಡೆ, ಮಂಗಳೂರು ಉತ್ತರ ಮಂಡಲ ಯುವಮೋರ್ಚಾ ಅಧ್ಯಕ್ಷ ಸಂದೀಪ್‌ ಶೆಟ್ಟಿ, ಕಾರ್ಯದರ್ಶಿ ನಂದನ್‌ ಮಲ್ಯ ಹಾಗೂ ಎಲ್ಲ ಯುವಮೋರ್ಚಾ ಕಾರ್ಯಕರ್ತರು ಪಾಲ್ಗೊಂಡಿ ದ್ದರು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next