Advertisement

ಭಾರತದಲ್ಲಿ ದ್ವೇಷ ಹೆಚ್ಚಿದೆ, ಆದರೆ ದೇಶ ಬಿಟ್ಟು ಹೋಗುವುದು ಪರಿಹಾರವಲ್ಲ:ಫಾರೂಕ್ ಅಬ್ದುಲ್ಲಾ

05:39 PM Dec 23, 2022 | Team Udayavani |

ನವದೆಹಲಿ : ಶಾರುಖ್ ಖಾನ್ ಅವರ ‘ಪಠಾಣ್’ ಚಿತ್ರ ದಲ್ಲಿ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ವಿವಾದವು ಸ್ಫೋಟಗೊಂಡಿದೆ. ಕೇಸರಿ ಹಿಂದೂಗಳದ್ದು, ಹಸಿರು ಮುಸಲ್ಮಾನರದ್ದು ಎಂದರ್ಥವೇ? ಇದು ಏನು? ಹಸು ಹಿಂದೂಗಳಿಗೆ ಮತ್ತು ಎತ್ತು ಮುಸ್ಲಿಮರಿಗೇ ? ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

Advertisement

ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಶುಕ್ರವಾರ ಮಾತನಾಡಿದ ನ್ಯಾಷನಲ್‌ ಕಾನ್ಫರೆನ್ಸ್‌(ಎನ್‌ಸಿ) ಪಕ್ಷದ ಅಧ್ಯಕ್ಷ” ”ಭಾರತದಲ್ಲಿ ದ್ವೇಷ ಹೆಚ್ಚಿದೆ ನಿಜ ಆದರೆ ದೇಶ ಬಿಟ್ಟು ಹೋಗುವುದು ಪರಿಹಾರವಲ್ಲ. ನಾವು ಒಗ್ಗಟ್ಟಾಗಿ ಉಳಿಯಬೇಕು ಮತ್ತು ದ್ವೇಷವನ್ನು ಮುಗಿಸಬೇಕು. ಈ ದೇಶ ಉಳಿಯಬೇಕಾದರೆ, ಎಲ್ಲಾ ಧರ್ಮದ ಜನರು ಸಹೋದರತ್ವವನ್ನು ಪಾಲಿಸಬೇಕು” ಎಂದು ಆರ್‌ಜೆಡಿ ನಾಯಕ ಎಬಿ ಸಿದ್ದಿಕಿ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದರು.

”ಆರ್ಟಿಕಲ್ 370 ರದ್ದತಿಯಿಂದ ಭಯೋತ್ಪಾದನೆ ಕೊನೆಗೊಳ್ಳುತ್ತದೆ ಎಂದು ಸರಕಾರ ಹೇಳಿತ್ತು. ಅದನ್ನು ತೆಗೆದು ಎಷ್ಟು ವರ್ಷಗಳಾದವು? ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ಕೊನೆಗೊಂಡಿದೆಯೇ?” ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next