Advertisement
ಕಾಲ್ಚೆಂಡಿನ ಕಾದಾಟದಲ್ಲಿ ನೇಪಾಲ ಬಲಿಷ್ಠವೇನಲ್ಲ. ಈ ಕೂಟದ ಮೊದಲ ಮುಖಾಮುಖೀಯಲ್ಲಿ ಕುವೈಟ್‌ಗೆ 1-3ರಿಂದ ಶರಣಾಗಿದೆ. 1985ರಿಂದೀಚೆ ಭಾರತ-ನೇಪಾಲ ನಡುವೆ 23 ಪಂದ್ಯಗಳು ನಡೆದಿದ್ದು, ಭಾರತ 16-2 ಅಂತರದ ಗೆಲುವಿನ ದಾಖಲೆ ಹೊಂದಿದೆ. ಇತ್ತಂಡಗಳು ಕೊನೆಯ ಸಲ ಎದುರಾದದ್ದು 2021ರ ಸ್ಯಾಫ್ ಕೂಟದಲ್ಲಿ. ಭಾರತ ಇದನ್ನು 3-0 ಅಂತರದಿಂದ ಜಯಿಸಿತ್ತು.
ಇಂಟರ್‌ಕಾಂಟಿನೆಂಟಲ್ ಕಪ್ ಗೆದ್ದು ಸ್ಯಾಫ್ ಪಂದ್ಯಾವಳಿಗೆ ಆಗಮಿ ಸಿದ ಭಾರತ, ಮೊದಲ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಇದೇ ಲಯದಲ್ಲಿ ಸಾಗಿತು. ಅತ್ಯುತ್ತಮ ಫಾರ್ಮ್ ನಲ್ಲಿರುವ ನಾಯಕ ಸುನೀಲ್ ಚೆಟ್ರಿ ಹ್ಯಾಟ್ರಿಕ್ ಸಾಹಸದ ಮೂಲಕ ಮೆರೆದಿದ್ದರು. ಗಾಯಾಳು ಇಶಾನ್ ಪಂಡಿತ್ ಗೈರಲ್ಲಿ ಸುನೀಲ್ ಚೆಟ್ರಿ ಪ್ರದರ್ಶನ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿದೆ.
Related Articles
Advertisement
ಅಚ್ಚರಿಯ ಪ್ಯಾಕೇಜ್ನೇಪಾಲ ಕೆಲವು ಅಚ್ಚರಿಯ ಪ್ಯಾಕೇಜ್ ಹೊಂದಿರುವುದನ್ನು ಮರೆಯುವಂತಿಲ್ಲ. 31 ವರ್ಷದ ಅನುಭವಿ ಮಿಡ್‌ಫಿಲ್ಡರ್ ರೋಹಿತ್ ಚಂದ್, ಫಾರ್ವರ್ಡ್ ಆಟಗಾರ ಅಂಜನ್ ಬಿಷ್ಟಾ ಇವರಲ್ಲಿ ಪ್ರಮುಖರು. ರೋಹಿತ್ ಚಂದ್ ಇಂಡೋನೇಷ್ಯಾ ಲೀಗ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಕೋಚ್ ವಿನ್ಸೆಂಜೊ ಆಲ್ಬರ್ಟೊ ಆ್ಯನ್ಸ್ ಭಾರತೀಯ ಫುಟ್‌ಬಾಲ್‌ನೊಂದಿಗೆ ನಂಟು ಹೊಂದಿರುವುದನ್ನು ಗಮನಿಸಬೇಕು. ಇವರು ಐ-ಲೀಗ್ ವಿಜೇತ ಗೋಕುಲಂ ಕೇರಳ ಎಫ್ಸಿ ತಂಡದ ಮ್ಯಾನೇಜರ್ ಆಗಿದ್ದರು.