Advertisement
ಮಾಲ್ಡೀವ್ಸ್ ಪರ ಇಬ್ರಾಹಿಂ ಹುಸೇನ್ (19ನೇ ನಿಮಿಷ), ಅಲಿ ಫಝಿರ್ (66ನೇ ನಿಮಿಷ) ಗೋಲು ಸಿಡಿಸಿದರೆ ತಾರಾ ಆಟಗಾರ ಸುನೀಲ್ ಚೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಭಾರತದ ಪರ 90 ಪ್ಲಸ್ 2ನೇ ನಿಮಿಷದಲ್ಲಿ ಪಾಸಿ ಗೋಲು ಸಿಡಿಸಿದರು.
2008ರಲ್ಲಿ ಮಾಲ್ಡೀವ್ಸ್ 1-0 ಗೋಲುಗಳಿಂದ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಮೊದಲ ಬಾರಿಗೆ ಸ್ಯಾಫ್ ಕಪ್ ಟ್ರೋಫಿ ಗೆದ್ದಿತ್ತು. ಇದಕ್ಕೂ ಮೊದಲು 1997ರಲ್ಲಿ ಫೈನಲ್ ಪ್ರವೇಶಿಸಿ 5-1ರಿಂದ ಭಾರತ ವಿರುದ್ಧ ಸೋತು ಟ್ರೋಫಿ ಕಳೆದುಕೊಂಡಿತ್ತು. ಇದಾದ ಬಳಿಕ 2003ರಲ್ಲೂ ಫೈನಲ್ ಪ್ರವೇಶಿಸಿದ್ದ ಮಾಲ್ಡೀವ್ಸ್ ಬಾಂಗ್ಲಾದೇಶ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಅಂತರದಿಂದ ಸೋತಿತ್ತು. 2008ರಲ್ಲಿ ಮಾಲ್ಡೀವ್ಸ್ ಕೊನೆಗೂ ಟ್ರೋಫಿ ಗೆದ್ದು ಕನಸು ನನಸು ಮಾಡಿಕೊಂಡಿತ್ತು. 2009ರಲ್ಲಿ ಮಾಲ್ಡೀವ್ಸ್ ಫೈನಲ್ ಪ್ರವೇಶಿಸಿತ್ತಾದರೂ ಭಾರತದ ವಿರುದ್ಧ 3-1 ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಭಾರತ ಇಷ್ಟರವರೆಗೆ 7 ಬಾರಿ ಈ ಪ್ರಶಸ್ತಿ ಜಯಿಸಿದೆ.ಉತ್ತಮ ರೀತಿಯಲ್ಲಿ ಆಟ ಆರಂಭಿಸಿದ್ದ ಭಾರತ ಪ್ರತಿ ದಾಳಿ ಸಂಘಟಿಸಿ ಗೋಲು ಹೊಡೆಯುವ ಕೆಲವು ಪ್ರಯತ್ನ ನಡೆಸಿತ್ತು. ಆದರೆ ಮಾಲ್ಡೀವ್ಸ್ ತಂಡದ ರಕ್ಷಣಾತ್ಮಕ ಆಟದಿಂದಾಗಿ ಭಾರತ ತಂಡದ ದಾಖಲೆ ಎಂಟನೇ ಬಾರಿ ಸ್ಯಾಫ್ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಯಿತು. ಮಾಲ್ಡೀವ್ಸ್ ಮೊದಲು ಗೋಲು ಹೊಡೆದ ಬಳಿಕ ಭಾರತ ಸಮಬಲಕ್ಕೆ ತೀವ್ರ ಪ್ರಯತ್ನ ನಡೆಸಿತ್ತು. ಆದರೆ ತಂಡದ ಆಕ್ರಮಣಕಾರಿ ಆಟಗಾರರು ಗೋಲು ಹೊಡೆಯಲು ವಿಫಲರಾದರು.