Advertisement
ರೈಲು ನಿಲ್ದಾಣಗಳ ಕಾರ್ಯಾಚರಣೆ, ನಿಲ್ದಾಣಗಳು ಮತ್ತು ವಸತಿ ಗೃಹಗಳ ನೈರ್ಮಲ್ಯ, ನೀರು ಸರಬರಾಜು, ನಿರೀಕ್ಷಣಾ ಕೊಠಡಿಗಳು, ಟಿಕೆಟ್ ಬುಕಿಂಗ್ ಕಚೇರಿಗಳು, ರನ್ನಿಂಗ್ ರೂಮ್, ಆರೋಗ್ಯ ಘಟಕಗಳು, ರೂಟ್ ರಿಲೇ ಇಂಟರ್‌ಲಾಕಿಂಗ್ ಕ್ಯಾಬಿನ್ ಗಳು, ಲಘು ಉಪಹಾರ ಗೃಹಗಳು ಹಾಗೂ ವಸತಿಗೃಹಗಳ ತಪಾಸಣೆ ಕೈಗೊಂಡರು.
Related Articles
Advertisement
ಬಳ್ಳಾರಿ ನಿಲ್ದಾಣದಲ್ಲಿ ಹೊಸದಾಗಿ ಅಭಿವೃದ್ಧಿ ಪಡಿಸಲಾದ ಉದ್ಯಾನವನದಲ್ಲಿ ಸೆಲಿ ಪಾಯಿಂಟ್ ಉದ್ಘಾಟಿಸಿದರು. ವಾಲಿಬಾಲ್ ಕೋರ್ಟ್, ಕೊಳ, ಒಳಚರಂಡಿ, ನೀರು ಸಂಸ್ಕರಣಾ ಘಟಕ, ಬುಕಿಂಗ್ ಕಾರ್ಯಾಲಯದಲ್ಲಿ ಡಿಜಿಟಲ್ ರಿಜಿಸ್ಟರ್, ಸ್ಮಾರ್ಟ್ ಕ್ಯೂಆರ್ ಕೋಡ್ ಆಧಾರಿತ ಗುರುತಿನ ಪತ್ರಗಳನ್ನು ಸಮರ್ಪಿಸಿದರು.
ಬಳ್ಳಾರಿ ನಿಲ್ದಾಣದಲ್ಲಿ ಗ್ಯಾಂಗ್ ಟೂಲ್ ರೂಮ್ ಉದ್ಘಾಟಿಸಿದರು.ಆರ್‌ಪಿಎಫ್ ಬರಾಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇಲ್ಲಿನ ಆರೋಗ್ಯ ಘಟಕದಲ್ಲಿ ಇಲಾಖೆಗಳ ಪ್ರಧಾನ ಮುಖ್ಯಸ್ಥರಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಹೊಸಪೇಟೆಯಲ್ಲಿ ಪಾರ್ಕಿಂಗ್ ಲಾಟ್, ರೈಲ್ವೆ ಕಾಲೋನಿ ಮತ್ತು ರುಟಿನ್ ಓವರ್ ಹಾಲಿಂಗ್ ಶೆಡ್‌ಗಳನ್ನು ಪರಿಶೀಲಿಸಿದರು. ಆರ್‌ಒಎಚ್ ಶೆಡ್‌ನಲ್ಲಿ ವಿಶ್ವೇಶ್ವರಯ್ಯ ಉದ್ಯಾನವನ ಉದ್ಘಾಟಿಸಿದರು. ಮುನಿರಾಬಾದ್ ನಿಲ್ದಾಣ ಪರಿಶೀಲಿಸಿದರು. ಗದಗ ನಿಲ್ದಾಣದಲ್ಲಿ ವೀಡಿಯೋ ಕಣ್ಗಾವಲು ವ್ಯವಸ್ಥೆ ಉದ್ಘಾಟಿಸಿದರು. ರೈಲ್ವೆ ಕಾಲೋನಿಯಲ್ಲಿ ಮಕ್ಕಳ ಉದ್ಯಾನವನ, ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟಿಸಿದರು. ಆರ್‌ಪಿಎಫ್ ಬರಾಕ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ಜಿಎಂ ಕಿಶೋರ ಅವರು ನಗದು ಬಹುಮಾನ ಘೋಷಿಸಿದರು.
ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಪ್ರಧಾನ ಮುಖ್ಯ ಅಭಿಯಂತರ ಎಸ್.ಪಿ.ಎಸ್. ಗುಪ್ತ, ಪ್ರಧಾನ ಮುಖ್ಯ ಯಾಂತ್ರಿಕ ಅಭಿಯಂತರ ಸುಬ್ಬರಾವ್, ಪ್ರಧಾನ ಮುಖ್ಯ ಪರಿಚಾಲನಾ ವ್ಯವಸ್ಥಾಪಕ ಹರಿಶಂಕರ ವರ್ಮಾ, ಪ್ರಧಾನ ಮುಖ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಜೈಪಾಲ ಸಿಂಗ, ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಎ.ಎಸ್. ರಾವ್, ಪ್ರಧಾನ ಮುಖ್ಯ ಸಂಕೇತ ಮತ್ತು ದೂರಸಂಪರ್ಕ ಅಭಿಯಂತರ ಪಿ. ರಾಜಶೇಖರ, ಪ್ರಧಾನ ಮುಖ್ಯ ಸಾಮಗ್ರಿ ವ್ಯವಸ್ಥಾಪಕ ರಜನೀಶ ಗುಪ್ತ, ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಅಲೋಕ ಕುಮಾರ, ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಅಲೋಕ ತಿವಾರಿ, ಪ್ರಧಾನ ಮುಖ್ಯ ಕಾರ್ಮಿಕ ಅಧಿಕಾರಿ ಅಲೋಕ ಕುಮಾರ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು, ಹುಬ್ಬಳ್ಳಿ ವಿಭಾಗದ ಶಾಖಾ ಮುಖ್ಯಸ್ಥರು, ಮೊದಲಾದವರಿದ್ದರು.