Advertisement
ಪೊಲೀಸ್, ಸಿಆರ್‌ಪಿಎಫ್ ಮತ್ತು ಅರೆ ಸೇನಾಪಡೆಗಳಿಂದ ಕೂಡಿದ ವಲಯದಲ್ಲಿ ಮತ್ತು ಪ್ರಧಾನ ರಸ್ತೆಯ ಭಾಗದಲ್ಲಿಯೇ ಈ ವಲಯಗಳು ಇರಲಿವೆ ಎಂದು ಹಿರಿಯ ಅಧಿ ಕಾರಿ ತಿಳಿಸಿದ್ದಾರೆ. ಉಗ್ರರು ನಡೆಸಿದ ದಾಳಿ ಯಿಂದ ಹಣ್ಣಿನ ವರ್ತಕರಲ್ಲಿ ಭೀತಿ ಉಂಟಾ ಗಿದ್ದು ಸಹಜ. ಉಗ್ರರ ದಾಳಿ ಭೀತಿಯಿಂದ ಪಿರ್ ಕಿ ಗಲಿಯಲ್ಲಿ 600 ಮಂದಿ ಟ್ರಕ್‌ಗಳಲ್ಲಿ ಹಣ್ಣುಗಳ ವ್ಯಾಪಾರಸ್ಥರು ಮತ್ತು ಮಾಲೀಕರು ರಕ್ಷಣೆಗಾಗಿ ಕಾಯುತ್ತಿದ್ದಾರೆ.
ಇತ್ತೀಚೆಗೆ ಕಾಶ್ಮೀರದಲ್ಲಿ ಇಬ್ಬರು ನಾಗರಿಕರನ್ನು ಹತ್ಯೆಗೈದ ಕುಕೃತ್ಯ ಎಸಗಿದ್ದು ಮಾಜಿ ವಿಶೇಷ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಉಗ್ರರು ಎಂದು ತಿಳಿದುಬಂದಿದೆ. 2017 ರಲ್ಲಿ ಎಸ್‌ಪಿಒ ಸೈಯದ್ ನವೀದ್ ಮುಷ್ತಾಕ್ ಸೇವೆ ತ್ಯಜಿಸಿ ಉಗ್ರ ಸಂಘಟನೆ ಸೇರಿದ್ದ. ಈತ ಈಗ ಹಿಜ್ಬುಲ್‌ನ ಜಿಲ್ಲಾ ಕಮಾಂಡರ್ ಆಗಿದ್ದಾನೆ. ಈತ ರಾಹಿಲ್ ಮಗ್ರಯ್ ಜೊತೆ ಸೇರಿ ಇಬ್ಬರು ಹೊರ ರಾಜ್ಯದ ಸೇಬು ವರ್ತಕರನ್ನು ಹತ್ಯೆಗೈದಿದ್ದ. ಅಲ್ಲದೆ, ಒಂದು ಸೇಬು ಟ್ರಕ್‌ಗೂ ಬೆಂಕಿ ಹಚ್ಚಿದ್ದ. ಈತನ ಚಿತ್ರಗಳಿರುವ ಪೋಸ್ಟರ್ ಅನ್ನು ಶೋಪಿಯಾನ್ ಜಿಲ್ಲೆಯಲ್ಲಿ ಪೊಲೀಸರು ಅಂಟಿಸಿದ್ದು, ಈತನ ಬಗ್ಗೆ ಮಾಹಿತಿ ಒದಗಿಸುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ.