Advertisement
ಡಿ. 25ರಂದು ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‌ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಾಫಲ್ಯ ಸೇವಾ ಸಂಘ ಆಚರಿಸಿದ ಅಮೃತಹೋತ್ಸವ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾ^ಟಿಸಿ ನೆರೆದ ಜನಸ್ತೋಮ ವನ್ನುದ್ದೇಶಿಸಿ ಮಾತನಾಡಿದ ಅವರು, ದೇವರ ದೀಪಗಳನ್ನು ಉರಿಯಲು ತೈಲಧಾರೆ ಎಸಗುವ ಕುಲಕಸುಬು ಅವಲಂಬಿಸಿರುವ ಈ ಸಮಾಜ ಸರಳ ಜೀವನಕ್ಕೆ ಮಾದರಿ. ತಾವು ಕುಲಕಸುಬು ಕೌಶಲತೆಯನ್ನು ಮಕ್ಕಳಲ್ಲಿ ರೂಢಿಸಿ ಕಟ್ಟಿಬೆಳೆಸಿರಿ. ಸೇವೆಯಲ್ಲಿ ಸ್ವಾರ್ಥ ರಹಿತ ಬದುಕು ಆವಶ್ಯವಾಗಿದ್ದು ಸೇವೆಯನ್ನು ಕರ್ತವ್ಯಪ್ರಜ್ಞೆ ಆಗಿಸಿ ಸಮಾಜವನ್ನು ಮುನ್ನಡೆಸಿರಿ. ಆ ಮೂಲಕ ಸ್ವಸಮುದಾಯದ ಜನ್ಮದ ಪುಣ್ಯಕ್ಕೆ ಭಾಜನರಾಗಿರಿ ಎಂದು ಹಿತೋಪದೇಶವನ್ನಿತ್ತರು.
ಕಲಿಯುಗದಲ್ಲಿ ಸಂಘಟನೆ ನಿಜವಾದ ಶಕ್ತಿ ಆಗಿದ್ದು, ಪ್ರತೀ ಜಾತಿ ಸಂಘಟನೆ ಬಲಿಷ್ಠವಾ ಗಬೇಕು. ಸಮಾಜವನ್ನು ಒಟ್ಟುಗೂಡಿ ಸುವುದು ಬಹುದೊಡ್ಡ ಸವಾಲು. ವಿವಿಧತೆಯಲ್ಲಿ ಏಕತೆ ಅಗತ್ಯವಾಗಿದ್ದು, ಸಮಾನತೆಗೆ ಬದಲಾಗಿ ಸಹಮತ ನಮೆಲ್ಲರಲ್ಲಿ ಬೆಳೆಯಬೇಕು. ಸ್ವಜನಾಭಿಮಾನ, ದೇಶಾಭಿಮಾನ, ಭಾಷಾಭಿಮಾನ, ಸಂಸ್ಕೃತಿ ಉಳಿಸಬೇಕು. ತುಳಸಿಯಂತೆ ತುಲನೆ ಮಾಡಲು ಅಸಾಧ್ಯವಾಗಿರುವ ತುಳು ಭಾಷೆ ಮಕ್ಕಳಿಗೆ ಕಲಿಸಬೇಕು. ಇಲ್ಲಿನ ಸಂಘದ ಶತಮಾನೋತ್ಸವ ಕಾರ್ಯಕ್ರಮಕ್ಕೆ ನಾವೆಲ್ಲರೂ ಬರುವಂತಾಗಲಿ ಎಂದು ಅಸ್ರಣ್ಣ ಶುಭಾಶಂಸನೆಗೈದರು.
Related Articles
Advertisement
ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಸ್ವಾಗತಿಸಿ ಪ್ರಸ್ತಾವನೆಗೈದು ಹಿರಿಯರ ಸಾಂಘಿಕತೆಯಿಂದ ಹುಟ್ಟಿ ಬೆಳೆದ ಈ ಸಂಘವು ಮಾಮರವಾಗಿ ಸಮುದಾಯಕ್ಕೆ ಆಶ್ರಯವಾಗಿದೆ. ವಿವಿಧ ಸೇವಾ ಕೊಡುಗೆಗಳ ಮೇಳೈಕೆಯೊಂದಿಗೆ ಮುನ್ನಡೆಯುವ ಆಶಯ ನಮ್ಮದಾಗಿದೆ. ಸಮುದಾಯದ ಸುಮಾರು 16 ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡ ಈ ಸಂಭ್ರಮ ಸಂಘದ ಸಫಲತೆಯ ಸಂಕೇತವಾಗಿದೆ. ನಮ್ಮೆಲ್ಲರ ಸೇವೆ ಸಮಾಜದ ಸರ್ವೋನ್ನತಿಗೆ ಸಮರ್ಥನೀಯವೆನಿಸಿದೆ ಎಂದು ಸಾಫಲ್ಯ ಸಂಘದ ಉಗಮವನ್ನು ವಿವರಿಸಿದರು.ಸದಸ್ಯರ ಸಕ್ರೀಯತ್ವದಿಂದಲೇ ಸಂಘಸಂಸ್ಥೆಗಳ ಬೆಳವಣಿಗೆ ಸಾಧ್ಯವಾಗುವುದು. ಸಾಫಲ್ಯ ಸೇವಾ ಸಂಘವೂ ಇದಕ್ಕೆ ಹೊರತಾಗಿಲ್ಲ. ಸಮಾಜದ ಮುನ್ನಡೆಗೆ ಉನ್ನತ ಶಿಕ್ಷಣದ ಅತೀ ಅಗತ್ಯವಿದೆ. ನಾವೂ ಶೈಕ್ಷಣಿಕ ವಿಚಾರಗಳತ್ತ ಹೆಚ್ಚಿನ ಗಮನ ನೀಡಿ ಮಕ್ಕಳನ್ನು ಮುನ್ನಡೆಸಬೇಕು. ಸಾಕ್ಷರತಾ ಸಾಧನಾ ಸಮಾಜಗಳು ಸರ್ವೋನ್ನತಿಯತ್ತ ಸಾಗುವುದು ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಎಂ.ಜಿ ಕರ್ಕೇರ ತಿಳಿಸಿದರು. ಸಮಾಜ ಸೇವಕರಾದ ರಘುವೀರ ಅತ್ತಾ¤ವರ ಮತ್ತು ಶಶಿಕಲಾ ರಘುವೀರ್, ವಾಸು ಪುತ್ರನ್ ಮತ್ತು ಶಕುಂತಳಾ, ಸದಾನಂದ ಸಫಲಿಗ ಮತ್ತು ಮಲ್ಲಿಕಾ ಸದಾನಂದ್ ದಂಪತಿಗಳನ್ನು, ಅಂತಾರಾಷ್ಟ್ರೀಯ ಕ್ರೀಡಾಪಟು ಕು| ತನ್ವಿ ಜಗದೀಶ್ ಅವರನ್ನು ಅತಿಥಿಗಳು ಸಮ್ಮಾನಿಸಿದರು. ಅಂತೆಯೇ ವಾಮನ ಎಸ್. ಸಾಫಲ್ಯ, ಆರ್.ಸಿ ಮೂಲ್ಕಿ, ಸುಕನ್ಯಾ ಕಮಲಾದೇವಿ, ರೇಖಾ ಡಿ. ಮೂಲಿಯಣ್ಣ, ಗಿರಿಯಪ್ಪ ಕರ್ಕೇರ, ಶ್ರೀ ಉಳ್ಳಾಳ್ತಿ ಕ್ಷೇತ್ರದ ಗುರಿಕಾರರುಗಳಾದ ಸುರೇಶ್ ಕೊಪ್ಪಳ, ರಾಜೇಶ್ ಗುರಿಕಾರ, ಭಂಡಾರಗುತ್ತು ತುಳಸೀದಾಸ್, ಸಫಲಿಗ ಸಮುದಾಯದ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಮಹಾನಗರದ ವಿವಿಧ ಸಂಸ್ಥೆಗಳ ಪ್ರತಿನಿಧಿಗಳನ್ನು ಅಮೃತ ಗೌರವದೊಂದಿಗೆ ಸತ್ಕರಿಸಲಾಯಿತು. ಸಂಭ್ರಮದ ಅಂಗವಾಗಿ ಸಂಘದ ಸದಸ್ಯರು ಮತ್ತು ಮಕ್ಕಳು ತುಳುನಾಡ ವೈಭವ, ಸಾಂಪ್ರದಾಯಿಕ ಉಡುಪುಗಳ ಫ್ಯಾಶನ್ ಶೋ, ಬಾಲಿವುಡ್‌ನ ರೆಟ್ರೋನೃತ್ಯ, ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಯುವ ವಿಭಾಗದ ಕಲಾವಿದರು “ಸತ್ಯ ಗೊತ್ತಾನಗ’ ತುಳು ನಾಟಕ ಮತ್ತು ಮಂಗಳೂರು ಉಳ್ಳಾಲ ಇಲ್ಲಿನ ನಾಟ್ಯ ನಿಲಯ ಸಂಸ್ಥೆಯು ನಾಟ್ಯ ಗುರು ಸುನೀತಾ ಜಯಂತ್ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯಗಳನ್ನು, ಮಂಗಳೂರು ಮತ್ತು ಮುಂಬಯಿಯ ನುರಿತ ಕಲಾವಿದರು ಗಣೇಶ್ ಎರ್ಮಾಳ್ ಮತ್ತು ಕಿರಣ್ ಸಫಲಿಗ ನಿರ್ದೇಶನದಲ್ಲಿ ರಾಗ ಸಂಗಮ ರಸಮಂಜರಿ ಕಾರ್ಯಕ್ರಮ ಸಾದರ ಪಡಿಸಿದರು. ಬಾಲಕಿಯರು ಕುಲದೇವರಾದ ಗೊಪಾಲಕೃಷ್ಣ ದೇವರಿಗೆ ಪ್ರಾರ್ಥನೆ ಗೈದರು. ಕಿರಣ್ ಕುಮಾರ್ ಸಫಲಿಗ ರಚಿತ ಗಾಣಿಗ ಪದ್ಯ ಮೂಲಕ ಸಮಾರಂಭ ಆದಿಗೊಂಡಿತು. ರಿತಿಕಾ ಶ್ರೀನಿವಾಸ್ ಸಾಫಲ್ಯ ಮತ್ತು ಅನಿತಾ ಕೃಷ್ಣಕುಮಾರ್ ದಂಪತಿಗಳು ಶ್ರೀಗಳನ್ನು ಸಾಂಪ್ರದಾಯಿಕವಾಗಿ ಸುಖಾಗಮನ ಬಯಸಿದರು.
ಉಪಾಧ್ಯಕ್ಷ ಕೃಷ್ಣ ಕುಮಾರ್ ಬಂಗೇರ, ಗೌ| ಪ್ರ| ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ, ಗೌರವ ಕೋಶಾಧಿಕಾರಿ ಭಾಸ್ಕರ್ ಸಫಲಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ರವಿಕಾಂತ್ ಸಫಲಿಗ ಅತಿಥಿಗಳಿಗೆ ಪುಷ್ಪಗುತ್ಛಗಳನ್ನು ನೀಡಿ ಗೌರವಿಸಿದರು. ರಿತಿಕಾ ಸಾಫಲ್ಯ, ದಮಾಯಂತಿ ಸಾಲ್ಯಾನ್, ಅನುಸೂಯ ಕೆಲ್ಲಪುತ್ತಿಗೆ, ಹರ್ಷದ್ ಅಮೀನ್, ಭಾಸ್ಕರ್ ಸಫಲಿಗ, ದಿವ್ಯಾ ಸಾಫಲ್ಯ ಸಮ್ಮಾನಿತರನ್ನು ಪರಿಚಯಿಸಿದರು. ಪ್ರೊ| ಅರುಣ್ ಉಳ್ಳಾಲ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ ಕೃತಿ ಪರಿಚಯಿಸಿ ವಂದನಾರ್ಪಣೆಗೈದರು. ಶಿಸ್ತುಬದ್ಧ, ಸೌಮ್ಯತ್ವ ಬಾಳಿಗೆ ಸಾಫಲ್ಯರು ಮಾದರಿ. ಅವರ ನಡೆನುಡಿಯ ಫಲವೇ ಈ ಸುಸಜ್ಜಿತ ಸಾಫಲ್ಯ ಸೇವಾ ಸಂಘ ಸಮುದಾಯಗಳ ಶ್ರೇಯೋನ್ನತಿಗೆ ಜಾತಿಯ ಸಂಘಟನೆಗಳ ಅಗತ್ಯವಿದೆ. ಸಮಾಜದ ಉದ್ದೇಶಗಳು ಪರಿಪೂರ್ಣವಾದಾಗಲೇ ಸಂಸ್ಥೆಯ ಸೇವೆ ಫಲಪ್ರದವಾಗುವುದು.
– ಪದ್ಮನಾಭ ಎಸ್. ಪಯ್ಯಡೆ, ಅಧ್ಯಕ್ಷ,ಬಂಟರ ಸಂಘ ಮುಂಬಯಿ. ಜಾತಿ ಸಂಘಟನೆ ಬೆಳೆಸುವಲ್ಲಿ ಎಲ್ಲರ ಪಾತ್ರ ಮಹತ್ತರವಾ ಗಿದೆ. ಸ್ವಜಾತಿ ಬಗ್ಗೆ ಹೆಮ್ಮೆ ಬೆಳೆಸುವ ಮೂಲಕ ಮಕ್ಕಳು ಅಂತರ್‌ಜಾತಿ ಕಡೆಗೆ ಹೋಗುವುದನ್ನು ತಡೆಗಟ್ಟಬೇಕು. ಪ್ರತಿ ತಾಲೂಕು ಮಟ್ಟದಲ್ಲಿ ಸಂಘ ಬಲವರ್ಧನೆಗೊಳ್ಳಬೇಕು. ಇಲ್ಲಿನ ಸಂಘಟಕರ ಪರಿಶ್ರಮ ಶ್ಲಾಘನೀಯ.
– ಸುಂದರ್ ಸಾಲ್ಯಾನ್, ಉದ್ಯಮಿ ಚಿತ್ರ-ವರದಿ: ರೋನ್ಸ್ ಬಂಟ್ವಾಳ್