Advertisement
13ನೇ ಆವೃತ್ತಿಯ ಈ ಕೂಟದಲ್ಲಿ 12 ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಭಾರತ ತಂಡದ್ದಾಗಿದೆ. 2003ರಲ್ಲಿ ಭಾರತ ಮೂರನೇ ಸ್ಥಾನಿಯಾಗಿತ್ತು. ನೇಪಾಲಕ್ಕೆ ಇದು ಮೊದಲ ಫೈನಲ್ ಆಗಿದೆ.
ಫೈನಲ್ ಪ್ರವೇಶಕ್ಕೆ ಅತ್ಯಂತ ಮಹತ್ವದ್ದಾದ ಗುರುವಾರದ ಸಮರದಲ್ಲಿ ಭಾರತ ಆತಿಥೇಯ ಮಾಲ್ಡೀವ್ಸ್ ವಿರುದ್ಧ 3-1 ಗೋಲುಗಳ ಗೆಲುವು ಸಾಧಿಸಿತ್ತು. ನಾಯಕ ಸುನಿಲ್ ಚೆಟ್ರಿ ಅವಳಿ ಗೋಲು ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮನ್ವೀರ್ ಸಿಂಗ್ 33ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮುನ್ನಡೆ ನೀಡಿದ್ದರು. ಬಳಿಕ 62ನೇ ಮತ್ತು 71ನೇ ನಿಮಿಷದಲ್ಲಿ ಚೆಟ್ರಿ ಎರಡು ಗೋಲು ಬಾರಿಸಿದರು. ಈ ಗೋಲಿನೊಂದಿಗೆ ಚೆಟ್ರಿ ತಮ್ಮ ಅಂತಾರಾಷ್ಟ್ರೀಯ ಗೋಲುಗಳ ಸಂಖ್ಯೆಯನ್ನು 79ಕ್ಕೆ ಏರಿಸಿದರು.
Related Articles
Advertisement
ಸ್ಟಿಮ್ಯಾಕ್ ಆಶಾಭಾವಕೋಚ್ ಐಗರ್ ಸ್ಟಿಮ್ಯಾಕ್ ಭಾರತದ ಗೆಲುವಿನ ಬಗ್ಗೆ ಆಶಾಭಾವದಿಂದ್ದಾರೆ. ಆಗ ಇದು ಸ್ಟಿಮ್ಯಾಕ್ ಮಾರ್ಗದರ್ಶನಲ್ಲಿ ಭಾರತಕ್ಕೆ ಒಲಿದ ಮೊದಲ ಫುಟ್‌ಬಾಲ್ ಪ್ರಶಸ್ತಿಯಾಗಲಿದೆ. ಅವರು 2019ರಲ್ಲಿ ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ನೇಪಾಲ ವಿಶ್ವ ರ್‍ಯಾಂಕಿಂಗ್‌ನಲ್ಲಿ ಭಾರತಕ್ಕಿಂತ 61 ಸ್ಥಾನ ಕೆಳಗಿದ್ದು (168), ಗೆಲ್ಲುವ ನೆಚ್ಚಿನ ತಂಡವಾಗಿದೆ. ಕಳೆದ ವರ್ಷ ನೇಪಾಲ ವಿರುದ್ಧ ಕಠ್ಮಂಡುವಿನಲ್ಲಿ 2 ಸೌಹಾರ್ದ ಪಂದ್ಯವಾಡಿದ್ದ ಭಾರತ ಒಂದು ಡ್ರಾ ಮಾಡಿಕೊಂಡು (1-1), ಇನ್ನೊಂದನ್ನು 2-1 ಅಂತರದಿಂದ ಜಯಿಸಿತ್ತು.