ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ, ಸಂಗೀತ ನಿರ್ದೇಶಕನಾಗಿ, ನಿರ್ದೇಶಕನಾಗಿ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಸಾಧುಕೋಕಿಲ, ಈಗ ಸದ್ದಿಲ್ಲದೆ ಮತ್ತೂಂದು ಹೊಸ ಚಿತ್ರಕ್ಕೆ ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಸಾಧುಕೋಕಿಲ ನಿರ್ದೇಶನ ಮಾಡುತ್ತಿರುವ ಹೊಸಚಿತ್ರಕ್ಕೆ “ಜಾಲಿ ಲೈಫ್’ ಎಂದು ಹೆಸರಿಡಲಾಗಿದೆ. ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಇದೇ ಏಪ್ರಿಲ್ ವೇಳೆಗೆ ಚಿತ್ರದ ಶೂಟಿಂಗ್ ಶುರು ಮಾಡುವ ಪ್ಲಾನ್‌ನಲ್ಲಿ ಚಿತ್ರತಂಡ.
ಇನ್ನು ಹೆಸರೇ ಹೇಳುವಂತೆ “ಜಾಲಿ ಲೈಫ್’ ಕಂಪ್ಲೀಟ್ ಯೂಥ್ಸ್ ಸಬೆjಕ್ಟ್ ಚಿತ್ರವಂತೆ, ಇಂದಿನ ಯೂಥ್ಸ್, ಅವರ ಲೈಫ್ ಸ್ಟೈಲ್, ಕಾಲೇಜ್ ಮತ್ತಿತರ ವಿಷಯಗಳ ಸುತ್ತ ಇಡೀ ಚಿತ್ರ ನಡೆಯಲಿದೆ. ಇಲ್ಲಿಯವರೆಗೆ ಮಾಡಿದ ಚಿತ್ರಗಳಿಗಿಂತ ವಿಭಿನ್ನ ಕಂಟೆಂಟ್, ಕಥಾಹಂದರ “ಜಾಲಿ ಲೈಫ್’ನಲ್ಲಿದ್ದು, ಇದು ಪಕ್ಕಾ ಯೂಥ್ಸ್ ಸಿನಿಮಾ. ಜೊತೆಗೆ ಇತರ ವರ್ಗದ ಆಡಿಯನ್ಸ್ ಕನೆಕ್ಟ್ ಆಗುವಂತಿದೆ ಅನ್ನೋದು ಸಾಧು ಮಾತು.
ಇದನ್ನೂ ಓದಿ:ಮಾ.29 ವಿಷ್ಣು ಪ್ರಿಯ ಟ್ರೇಲರ್: ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಾಯಕಿ
ಈ ಹಿಂದೆ “ತ್ರಿಕೋನ’ ಎಂಬ ಚಿತ್ರವನ್ನು ನಿರ್ಮಿಸಿದ್ದ ರಾಜಶೇಖರ್, “ಜಾಲಿ ಲೈಫ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, “ಪೊಲೀಸ್ ಪ್ರಕ್ಕಿ’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರದ ಬಹುತೇಕ ಪಾತ್ರಗಳಲ್ಲಿ ಹೊಸ ಪ್ರತಿಭೆಗಳೇ ಅಭಿನಯಿಸಲಿದ್ದು, ಇಲ್ಲಿಯವರೆಗೆ ಪಾತ್ರಕ್ಕಾಗಿ ರಂಗಾಯಣ, ನೀನಾಸಂ, ಟೆಂಟ್ ಸಿನಿಮಾ ಮೊದಲಾದ ಸಂಸ್ಥೆಗಳ ಮೂಲಕ ಸುಮಾರು 500 ರಿಂದ 600 ಜನರನ್ನು ಆಡಿಶನ್ ಮಾಡಲಾಗಿದೆ. ಅಂತಿಮವಾಗಿ ಚಿತ್ರದ ಪ್ರಮುಖ ಪಾತ್ರಗಳಿಗೆ ಇಪ್ಪತ್ತು ಹೊಸ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಿರಿಯ ನಟ ಸುಚೀಂದ್ರ ಪ್ರಸಾದ್ ನೇತೃತ್ವದಲ್ಲಿ ವಿಭಿನ್ನವಾಗಿ ನಡೆದ ಆಡಿಶನ್‌ನಲ್ಲಿ ಈ ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ ಸಾಧುಕೋಕಿಲ.
ಇದನ್ನೂ ಓದಿ: ಮಿಲನಾ ಈಗ ‘ಮಿಲಿ’: ಸ್ವಿಮ್ಮಿಂಗ್ ಸುತ್ತ ಸಿನಿಮಾ
ಉಳಿದಂತೆ “ಜಾಲಿ ಲೈಫ್’ ಚಿತ್ರವನ್ನು ನಿರ್ದೇಶಿಸುತ್ತಿರುವುದರ ಜೊತೆಗೆ ಚಿತ್ರದ ಐದು ಹಾಡುಗಳಿಗೂ ಸಾಧುಕೋಕಿಲ ಅವರ ಪುತ್ರ ಸುರಾಗ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳು ಹೊಸಥರ ಇರಬೇಕು, ಇಂದಿನ ಯೂಥ್ಸ್ ಆಡಿಯನ್ಸ್ ಅಭಿರುಚಿಗೆ ತಕ್ಕಂತೆ ಇರಬೇಕು ಅನ್ನೋ ಕಾರಣಕ್ಕೆ ಸಾಧು ಈ ಚಿತ್ರಕ್ಕೆ ತಮ್ಮ ಮಗನ ಕೈಯಿಂದ ಸಂಗೀತ ಸಂಯೋಜನೆ ಮಾಡಿಸುತ್ತಿದ್ದಾರೆ.
ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣವಿದೆ. ಸದ್ಯ “ಜಾಲಿ ಲೈಫ್’ ಚಿತ್ರದ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಇದೇ ವರ್ಷದ ಕೊನೆಗೆ ಸಾಧು “ಜಾಲಿ ಲೈಫ್’ ಸ್ಕ್ರೀನ್ ಮೇಲೆ ಬರಬಹುದು ಎಂಬ ನಿರೀಕ್ಷೆ ಇದೆ