ಬಾಕು: ಈಶಾ ಫೌಂಡೇಶನ್‌ನ ಸಂಸ್ಥಾಪಕರಾಗಿರುವ ಸದ್ಗುರು ಜಗ್ಗಿ ವಾಸುದೇವ ಅವರು 100 ದಿನಗಳ “ಮಣ್ಣು ಉಳಿಸಿ’ ಅಭಿಯಾನ ನಡೆಸುತ್ತಿದ್ದು, ಅದರ ಭಾಗ ವಾಗಿ ಇತ್ತೀಚೆಗೆ ಅಜರ್‌ಬೈಜಾನ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ದಾರೆ.
ಜನರಿಗೆ ಮಣ್ಣಿನ ರಕ್ಷಣೆಯ ಬಗ್ಗೆ ಅರಿವು ಮೂಡಿಸಿದ್ದಾರೆ.
ಹಾಗೆಯೇ ಅಜರ್‌ಬೈಜಾನ್‌ನ ರಾಜಧಾನಿ ಬಾಕುವಿನಲ್ಲಿ ದೇಶದ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವರನ್ನು ಭೇಟಿ ಮಾಡಿ ಮಾತನಾಡಿದ ಅವರು, ಅಲ್ಲಿನ ಸರಕಾರ ಮತ್ತು “ಮಣ್ಣು ಉಳಿಸಿ’ ಅಭಿಯಾನದ ನಡುವಿನ ಮೆಮೋರಂಡಮ್‌ಗೆ ಸಹಿ ಹಾಕಿದ್ದಾರೆ.
ಈ ಒಪ್ಪಂ ದವು ಸರಕಾರವು ಮಣ್ಣಿನ ರಕ್ಷಣೆಗೆ ಪಣ ತೊಟ್ಟಿರುವುದನ್ನು ತೋರಿಸುತ್ತದೆ ಎಂದರು.