ವಾಡಿ: ಲಂಬಾಣಿ ಜನಾಂಗದ ಮೀಸಲಾತಿ ಹಕ್ಕಿನ ಮೇಲೆ ದಾಳಿ ನಡೆಸಲು ಸಿದ್ಧಪಡಿಸಲಾಗಿರುವ ಸದಾಶಿವ ಆಯೋಗದ ವರದಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಎಂದು ಬಂಜಾರಾ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಭಾಷ ರಾಠೊಡ ಆಕ್ರೋಶ ವ್ಯಕ್ತಪಡಿಸಿದರು.
ಬಂಜಾರಾ ಸಮಾಜದ ವತಿಯಿಂದ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ 278ನೇ ಜಯಂತಿಯ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಚಿನ್ನ, ಬೆಳ್ಳಿ ವ್ಯಾಪಾರ ಮಾಡಿ ಬದುಕುತ್ತಿದ್ದ ಲಂಬಾಣಿ ಸಮುದಾಯದ ಮೇಲೆ, ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಸವಾರಿ ಮಾಡಿದರು.
ಅಂಬೇಡ್ಕರ್ ಸಂವಿಧಾನದ ಆಶಯದಂತೆ ಪರಿಶಿಷ್ಟ ಜಾತಿಗೆ ಸೇರ್ಪಟ್ಟು ಮೀಸಲಾತಿಯ ಹಕ್ಕು ಪಡೆಯುತ್ತಿದ್ದರೆ ಕೆಲವರಿಗೆ ಹೊಟ್ಟೆಯುರಿಯುತ್ತಿದೆ ಎಂದು ಹರಿಹಾಯ್ದರು. ನಮ್ಮ ಮೀಸಲಾತಿ ಕಸಿಯಲು ಸಿದ್ಧಗೊಂಡಿರುವ ಸದಾಶಿವ ಆಯೋಗದ ವರದಿಯನ್ನು ಲಂಬಾಣಿಗರು ಒಗ್ಗಟ್ಟಿನಿಂದ ವಿರೋಧಿಧಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ರೇವೂನಾಯಕ ಬೆಳಮಗಿ, ಸಂವಿಧಾನಬದ್ಧ ಮೀಸಲಾತಿಗೆ ಕೈ ಹಚ್ಚಿದರೆ ಅಂತಹವರ ಕೈ ಕತ್ತರಿಸುತ್ತೇವೆ ಎಂದು ಗುಡುಗಿದರು. ಲಿಂಗಸುಗೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಹಳಕರ್ಟಿಯ ಶ್ರೀ ಮುನೀಂದ್ರ ಸ್ವಾಮೀಜಿ, ಶ್ರೀ ಜೇಮಸಿಂಗ್ ಮಹಾರಾಜರು, ಶ್ರೀಲತಾ ಮಾತಾಜಿ, ಹೈದ್ರಾಬಾದನ ಶಮ್ಮಿಪಶಾ ಖಾದ್ರಿ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ, ಬಂಜಾರಾ ಸಮಾಜದ ಅಧ್ಯಕ್ಷ ರವಿ ಆರ್.ಬಿ.ಚವ್ಹಾಣ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಜಿಪಂ ಸದಸ್ಯ ಅಶೋಕ ಸಗರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ ಸಾಹೇಬ, ಶಿವರಾಮ ಪವಾರ, ರಮೇಶ ಕಾರಬಾರಿ, ಲಕ್ಷ್ಮಣ ಚವ್ಹಾಣ, ವಾಲ್ಮೀಕ ರಾಠೊಡ, ಭೀಮರಾವ ದೊರೆ, ಬಸವರಾಜ ಪಂಚಾಳ, ಸಿದ್ದಣ್ಣ ಕಲಶೆಟ್ಟಿ, ಮುಕುºಲ ಜಾನಿ, ಬೋರು ರಾಠೊಡ, ಗಣೇಶ ಚವ್ಹಾಣ, ಡಾ| ಗುಂಡಣ್ಣ ಬಾಳಿ ಪಾಲ್ಗೊಂಡಿದ್ದರು.
ಸುರೇಶ ರಾಠೊಡ ಬೆಳಗೇರಾ ನಿರೂಪಿಸಿ, ವಂದಿಸಿದರು. ಇದಕ್ಕೂ ಮೊದಲು ಯುವಕರಿಂದ ಬೈಕ್ ರ್ಯಾಲಿ ನಡೆಯಿತು. ಸಾಂಪ್ರದಾಯಿಕ ಉಡುಗೆ ತೊಟ್ಟು ಶ್ರೀ ಸೇವಾಲಾಲ ಮಹಾರಾಜರ ಭಾವಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 88 ತಾಂಡಾಗಳ ಸಾವಿರಾರು ಲಂಬಾಣಿ ಮಹಿಳೆಯರು ಪ್ರದರ್ಶಿಸಿದ ನೃತ್ಯ ಪ್ರದರ್ಶಿಸಿದರು. ಮೈಕ್ರೊ ಬಯಾಲಜಿ ವಿಷಯದಲ್ಲಿ ಚಿನ್ನದ ಪದಕ ಪಡೆದುಕೊಂಡ ಕಲಬುರಗಿ ವಿವಿ ವಿದ್ಯಾರ್ಥಿನಿ ಮಮತಾ ಟಿ.ಚವ್ಹಾಣ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.