Advertisement

ಸದಾಶಿವ ಆಯೋಗದ ವರದಿ: ಮೂಡದ ಒಮ್ಮತ

06:35 AM Feb 16, 2018 | Team Udayavani |

ಬೆಂಗಳೂರು: ದಲಿತ ಸಮುದಾಯದಲ್ಲಿ ಒಳ ಮೀಸಲಾತಿ ಸೌಲಭ್ಯ ಕಲ್ಪಿಸಲು ನ್ಯಾ.ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿ ಜಾರಿ ಕುರಿತಂತೆ ಸಂಪುಟದಲ್ಲಿ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಒಮ್ಮತಕ್ಕೆ ಬರಲು ಸಂಪುಟ ಸಭೆ ವಿಫ‌ಲವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗದ ವರದಿಯ ಸಾಧಕ ಬಾಧಕ ಕುರಿತು ಪರಿಶೀಲನೆ ನಡೆಸಲು ಸಂಪುಟ ಉಪ ಸಮಿತಿ ರಚಿಸಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Advertisement

ನ್ಯಾ. ಸದಾಶಿವ ಆಯೋಗದ ವರದಿ ಒಪ್ಪಿಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಸಮಾಜ ಕಲ್ಯಾಣ ಸಚಿವ
ಎಚ್‌. ಆಂಜನೇಯ ಹಾಗೂ ಅಬಕಾರಿ ಸಚಿವ ಆರ್‌.ಬಿ ತಿಮ್ಮಾಪುರ ಸಂಪುಟದಲ್ಲಿ ಪ್ರಸ್ತಾಪ ಮಾಡಿದರು ಎಂದು ತಿಳಿದು ಬಂದಿದೆ.

ಅವರ ಪ್ರಸ್ತಾಪಕ್ಕೆ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಆಕ್ಷೇಪ ವ್ಯಕ್ತಪಡಿಸಿ ನ್ಯಾ. ಸದಾಶಿವ ಆಯೋಗದ ವರದಿಯಲ್ಲಿ ಏನಿದೆ
ಎನ್ನುವುದು ಸಂಪುಟದಲ್ಲಿರುವವರಿಗೆ ಸರಿಯಾಗಿ ಮಾಹಿತಿಯಿಲ್ಲ. ಈ ಬಗ್ಗೆ ವಸ್ತು ಸ್ಥಿತಿ ತಿಳಿದುಕೊಳ್ಳದೇ ಕೇಂದ್ರಕ್ಕೆ ಶಿಫಾರಸು
ಮಾಡುವುದು ಸರಿಯಲ್ಲ. ಈಗಾಗಲೇ ತೆಲಂಗಾಣ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿದ್ದನ್ನು ಸುಪ್ರೀಂಕೋರ್ಟ್‌ ವಜಾ ಮಾಡಿದೆ. ಅನಗತ್ಯ ಗೊಂದಲ ಸೃಷ್ಠಿಸುವ ಬದಲು ವರದಿಯ ಸಾಧಕ ಬಾಧಕ ಕುರಿತು ಮುಕ್ತ ಚರ್ಚೆಯಾಗಲಿ, ಈ ಬಗ್ಗೆ ಸಂಪುಟ ಉಪ ಸಮಿತಿ ರಚಿಸುವಂತೆ ಮನವಿ ಮಾಡಿದರು ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ವರದಿ ಜಾರಿ ಕುರಿತಂತೆ ಪ್ರತಿಯೊಬ್ಬ ಸಚಿವರನ್ನೂ ವೈಯಕ್ತಿಕವಾಗಿ ಅಭಿಪ್ರಾಯ ಕೇಳಿದ್ದಾರೆ ಎನ್ನಲಾಗಿದ್ದು, ಬಹುತೇಕ ಸಚಿವರು ಆ ವರದಿಯಲ್ಲಿನ ಅಂಶಗಳ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ಸಂಪುಟ ಉಪ ಸಮಿತಿ ರಚನೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಆಂಜನೇಯ ಮತ್ತು ತಿಮ್ಮಾಪುರ ಅವರನ್ನು ಹೊರತು ಪಡಿಸಿ ಎಲ್ಲ ಸಚಿವರೂ ಸಂಪುಟ ಉಪ ಸಮಿತಿ ರಚನೆ ಸೂಕ್ತ ಎಂಬ
ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ಸಂಪುಟ ಉಪ ಸಮಿತಿ ರಚಿಸಲು ಸೂಚಿಸಿದರು ಎಂದು ತಿಳಿದು ಬಂದಿದೆ.

Advertisement

ಬಿಗಿ ಬಂದೋಬಸ್ತ್ ಗೆ ಸೂಚನೆ: ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಸುಪ್ರೀಂಕೋರ್ಟ್‌ ಶುಕ್ರವಾರದಂದು ಅಂತಿಮ
ತೀರ್ಪು ಪ್ರಕಟಿಸುವ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿಯೂ ಗಂಭೀರ ಚರ್ಚೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next