ಪಣಜಿ: ಮಹದಾಯಿಯ, ಕಳಸಾ ಮತ್ತು ಭಾಂಡೂರಿ ಯೋಜನೆಗಳಿಗೆ ಕರ್ನಾಟಕ ಸಲ್ಲಿಸಿರುವ ಹೊಸ ಡಿಪಿಆರ್ ಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದ ಬಳಿಕ ರಾಜ್ಯದಲ್ಲಿ ಮಹದಾಯಿ ನೀರು ತಿರುವು ಕುರಿತು ಜನಜಾಗೃತಿ ಆರಂಭವಾಗಿದೆ. ವಿವಿಧ ಸಾಮಾಜಿಕ ಸಂಘಟನೆಗಳು, ಪರಿಸರವಾದಿಗಳು ಚಳವಳಿ ಆರಂಭಿಸಿದ್ದು, ರಾಜಕೀಯ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿದೆ. ಹಾಗಾಗಿ ಈ ಆಂದೋಲನಕ್ಕೆ ಹೆಚ್ಚಿನ ಬಲ ಬಂದಿದೆ. ಈ ಕುರಿತಂತೆ ಪಣಜಿಯಲ್ಲಿ ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಸುದ್ಧಿಗಾರರೊಂದಿಗೆ ಮಾತನಾಡಿ ಮಹದಾಯಿ ಸಮಸ್ಯೆ ಬಗೆಹರಿಸಲು ಬಿಜೆಪಿ ಪಕ್ಷದ ಮಟ್ಟದಲ್ಲಿ ಶ್ರಮಿಸುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಬಿಜೆಪಿ ನಿಯೋಗ ಈಗಾಗಲೇ ದೆಹಲಿಗೆ ಭೇಟಿ ಮಾಡಿದೆ. ಇದೀಗ ಮತ್ತೊಮ್ಮೆ ಮುಖ್ಯಮಂತ್ರಿ ಹಾಗೂ ಕೆಲವು ಸಚಿವರೊಂದಿಗೆ ದೆಹಲಿಗೆ ತೆರಳಿ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ. ಆದ್ದರಿಂದ ಬಿಜೆಪಿ ತನ್ನ ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದು ಸದಾನಂದ ತಾನಾವಡೆ ಹೇಳಿದರು.
ಗೋವಾದ ವಿರ್ಡಿಯಲ್ಲಿ ಸಭೆ…!
ಗೋವಾದ ಸಾಖಳಿ ನಗರದಲ್ಲಿ ಸಭೆಗೆ ನೀಡಿದ್ದ ಅನುಮತಿಯನ್ನು ನಗರಸಭೆ ಒತ್ತಡಕ್ಕೆ ಮಣಿದು ಪರವಾನಗಿ ಹಿಂಪಡೆದ ಹಿನ್ನೆಲೆಯಲ್ಲಿ ನ.16ರಂದು ಮಹದಾಯಿ ಉಳಿವಿಗಾಗಿ ಆಯೋಜಿಸಿದ್ದ ಸಭೆ ಇದೇ ಕ್ಷೇತ್ರದ ವಿರ್ಡಿಯಲ್ಲಿ ನಡೆಯಲಿದೆ. ಮುಖ್ಯಮಂತ್ರಿಗಳು ಮ್ಹದಾಯಿ ಅವರನ್ನು ತಾಯಿ ಎಂದು ಪರಿಗಣಿಸಿದರೆ, ಅವರು ಈ ಸಭೆಗೆ ಬರಬೇಕು. ಇದು ಯಾವುದೇ ಪಕ್ಷದ ಸಭೆಯಲ್ಲ, ಗೋವಾದ ಜೀವಾಳವಾಗಿರುವ ಮಹದಾಯಿ ಉಳಿಸುವ ಆಂದೋಲನ. ಎಂದು ಸೇವ್ ಮಹದಾಯಿ ಪದಾಧಿಕಾರಿಗಳು ಆಘ್ರಹಿಸಿದ್ದಾರೆ.
ಇದನ್ನೂ ಓದಿ: ಮಾಧ್ಯಮ ಸಂಸ್ಥೆಗಳ ಮೇಲೆ ಬಿಜೆಪಿ ಸರ್ಕಾರ ಯಾವುದೇ ನಿಷೇಧ ಹೇರಿಲ್ಲ: ರಾಜನಾಥ್ ಸಿಂಗ್