Advertisement

ಸ್ವಚ್ಛತೆ ಬಳಿಕ ಹೊರಜಗತ್ತಿಗೆ ತೆರೆದ ಬಸ್ರೂರು ಸದಾನಂದ ದೇಗುಲ

12:35 AM Feb 25, 2020 | Sriram |

ಬಸ್ರೂರು: ಬಸ್ರೂರು ಒಂದು ಐತಿಹಾಸಿಕ ನಗರ. ಇಲ್ಲಿನ ರಾಜರು, ಪೋರ್ಚುಗೀಸರು, ಆಂಗ್ಲರ ಬಗ್ಗೆ ಬಹಳಷ್ಟು ದಾಖಲೆಗಳಿದ್ದರೂ ಎಲ್ಲವನ್ನೂ ಉಳಿಸಿಕೊಳ್ಳಲಾಗಿಲ್ಲ. ಬಸ್ರೂರುಒಂದು ಬಂದರು ಪ್ರದೇಶವಾಗಿಯೂ ಗುರುತಿಸಿಕೊಂಡಿದೆ. ಈಗಾಗಲೇ ಕೆಲವೊಂದು ಶಿಲಾಶಾಸನಗಳನ್ನು ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಉಳಿಸಿ ಸಂರಕ್ಷಿಸಿಡಲಾಗಿದೆ ಬಿಟ್ಟರೆ ಉಳಿದ ಶಿಲಾಶಾಸನಗಳು ಹೇಳ ಹೆಸರಿಲ್ಲದಂತಾಗಿದೆ. ಇದು ಹೊರತಾಗಿ ಅಪರೂಪದ ದೇಗುಲವೊಂದು ಇತ್ತೀಚಿಗೆ ಪತ್ತೆಯಾಗಿದ್ದು ಅದರ ವಠಾರ ಶುಚಿಗೊಳಿಸುತ್ತಿದ್ದಂತೆಯೇ ಜನರನ್ನು ಆಕರ್ಷಿಸುತ್ತಿದೆ.

Advertisement

ವಿಶಿಷ್ಟ ದೇಗುಲ
ಬಸ್ರೂರು ನೀರು ಟ್ಯಾಂಕ್‌ ಹತ್ತಿರ ಗುಂಡಿಗೋಳಿಗೆ ಹೋಗುವ ಮಾರ್ಗದಲ್ಲಿ ನೂರು ಮೀ.ನಷ್ಟು ಮೇಲೆ ಸಾಗಿದರೆ ಎಡಕ್ಕೆ ಕಾಣುವ ತಿರುವಿನಲ್ಲಿ ಮಾಡಿದ ನೂತನ ಮಾರ್ಗ 12ನೇ ಶತಮಾನದಷ್ಟು ಪ್ರಾಚೀನ ಇತಿಹಾಸವುಳ್ಳ ಶಿಥಿಲಾವಸ್ಥೆಯಲ್ಲಿರುವ ಶ್ರೀ ಸದಾನಂದ ದೇವಸ್ಥಾನವನ್ನು ತೋರಿಸುತ್ತದೆ. ದೇಗುಲದ ಬಲಭಾಗದಲ್ಲಿ ಬಸ್ರೂರಿನ ಅಂದಿನ ಕೋಟೆಯಿತ್ತೆಂದು ಹೇಳಲಾದರೂ ಅದರ ಅವಶೇಷಗಳು ಕಾಣುತ್ತಿಲ್ಲ. ಅದನ್ನು ಉಳಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಸದ್ಯ ದೇಗುಲ ಇರುವ ಪ್ರದೇಶ ರಾಜ್ಯ ಪುರಾತತ್ವ ಇಲಾಖೆಗೆ ಸೇರಿದ ಜಾಗದಲ್ಲಿದೆ.

ಪ್ರದೇಶ ಸ್ವಚ್ಛ
ಈ ದೇವಸ್ಥಾನಕ್ಕೆ ಹೋಗಲಾಗದಷ್ಟು, ಇಲ್ಲಿನ ದಾರಿ ಕಲ್ಲು-ಮುಳ್ಳುಗಳ ನಡುವೆ ಹುದುಗಿ ಹೋಗಿತ್ತು. ಆದರೆ ಕಳೆದ ಹತ್ತು ವಾರಗಳಿಂದ ಉತ್ಸಾಹಿ ಸಂಘಟನೆಗಳು ಗ್ರಾ.ಪಂ.ನ ಪರವಾನಿಗೆ ಪಡೆದು ಸದಾನಂದ ಮಠದ ಸುತ್ತಲ ಪರಿಸರವನ್ನು, ದೇಗುಲದ ಜಾಗವನ್ನು ಸ್ವತ್ಛಗೊಳಿಸಿದ ಪರಿಣಾಮ ಈಗ ಹನ್ನೆರಡನೇ ಶತಮಾನದಲ್ಲಿ ವಿಜಯನಗರ ಅರಸರು ಕಟ್ಟಿಸಿದ್ದಾರೆಂದು ತಿಳಿದು ಬರುವ ಶ್ರೀ ಸದಾನಂದ ದೇವಸ್ಥಾನಕ್ಕೆ ಸುಲಭವಾಗಿ ಹೋಗಿ ವೀಕ್ಷಿಸಬಹುದಾಗಿದೆ.

ರಾಜ್ಯ ಪುರಾತತ್ವ ಇಲಾಖೆ ಇಲ್ಲವೆ ಸ್ಥಳೀಯಾಡಳಿತ ಶ್ರೀ ಸದಾನಂದ ದೇವಸ್ಥಾನ ವನ್ನು ದೂರದಿಂದ ಬರುವವರಿಗೆ ತೋರಿ ಸುವ ದೃಷ್ಟಿಯಿಂದ ಸೂಕ್ತ ವ್ಯವಸ್ಥೆ ಮಾಡ ಬೇಕಾಗಿದೆ. ಇತಿಹಾಸದ ಅಂಶಗಳು ಪೂರ್ತಿಯಾಗಿ ನಶಿಸಿ ಹೋಗದಂತೆ ನೋಡಿ ಕೊಳ್ಳುವ ಹೊಣೆಗಾರಿಕೆ ಸಂಬಂಧಿಸಿದ ಇಲಾಖೆಯದ್ದಾಗಿದೆ.

ಶೋಧನೆ ಅಗತ್ಯ
ಸದಾನಂದ ದೇಗುಲದಲ್ಲಿ ಒಂದು ಸುರಂಗವಿದ್ದು ಈ ಸುರಂಗಕ್ಕೂ ಬಸ್ರೂರಿನ ಕೋಟೆಗೂ ಹತ್ತಿರದ ಸಂಬಂಧವಿದೆ. ಈ ಸುರಂಗದ ಒಳಗೆ ಹೋದರೆ ಕೋಟೆಯ ಒಳಗೆ ಹೋಗುತ್ತದೆ ಎನ್ನುವ ಮಾತುಗಳೂ. ಇವೆ. ಇದರ ಬಗ್ಗೆ ಇನ್ನಷ್ಟು ಅಧ್ಯಯನ, ಶೋಧನೆ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next