ಗುಳೇದಗುಡ್ಡ: ಸೈನಿಕರ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎಂದು ಕೋಲಾರದ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥದೇವರು ಹೇಳಿದರು. ಮುರುಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮುರುಡಿ ಗ್ರಾಮಸ್ಥರ ವತಿಯಿಂದ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 22 ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧ ಪಾಂಡು ಹನಮಪ್ಪ
ದಾಸರ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇರೆಯವರಿಗಾಗಿ ಬದುಕುವವರು ದೊಡ್ಡವರಾಗುತ್ತಾರೆ. ಇದಕ್ಕೆ ಸಾಕ್ಷಿಯೇ ನಮ್ಮ ವೀರಯೋಧರು. ದೇಶದ ಗಡಿಯನ್ನು
ಕಾಯವ ಕಾರ್ಯಮಾಡಿ ಈಗ ನಿವೃತ್ತಿ ಜೀವನಕ್ಕೆ ಕಾಲಿಟ್ಟಿರುವ ಪಾಂಡು ಅವರ ಸೇವೆ ಸದಾ ಸ್ಮರಣೀಯವಾಗಿರುತ್ತದೆ. ಗ್ರಾಮದ ಯುವಕರು ಇವರಿಂದ ಸ್ಫೂರ್ತಿ ಪಡೆದು ದೇಶವನ್ನು ರಕ್ಷಿಸಲು ಮುಂದಾಗಬೇಕು ಎಂದರು.
ಸೈನಿಕರು ತಮ್ಮ ಪತ್ನಿ ಮಕ್ಕಳು ಕುಟುಂಬಕ್ಕಾಗಿ ಬದುಕುವುದಿಲ್ಲ, ಕುಟುಂಬದ ಪ್ರೀತಿ, ಸುಖ ತ್ಯಾಗ ಮಾಡಿ ದೂರದ ಗಡಿಯಲ್ಲಿ ಮಳೆ, ಗಾಳಿ, ಬಿಸಿಲು ಲೆಕ್ಕಿಸದೇ ದೇಶಕ್ಕಾಗಿ ನಿಸ್ವಾರ್ಥದಿಂದ ಪ್ರಾಣವನ್ನು ಪಣಕ್ಕಿಟ್ಟು ದುಡಿಯತ್ತಾರೆ ಎಂದರು. ಗ್ರಾಮದಲ್ಲಿ ನಿವೃತ್ತ ಯೋಧ ಪಾಂಡು ದಾಸರ ಅವರನ್ನು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ನಿವೃತ್ತ ಯೋಧ ಪಾಂಡು ದಾಸರ, ಪತ್ನಿ ಶಿಲ್ಪಾ ಹಾಗೂ ತಂದೆ ಹನಮಪ್ಪ, ತಾಯಿ ಶಾಂತವ್ವ ಅವರ ಮುರುಡಿ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷ ಜಗದೀಶ ಹಿರೇಗೌಡರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಹನಮವ್ವ ಡೆಂಗಿ, ಎಂ.ಜಿ. ದಾಸರ, ಸಿದ್ಲಿಂಗಪ್ಪ ಮಲ್ಲಶೆಟ್ಟಿ, ಕಬೀರಪ್ಪ ದಾಸರ, ಆರ್. ಎಚ್. ದಾಸರ, ಎಂ.ಎಲ್. ಸಣಗಿನ, ಶಿಲ್ಪಾ ದಾಸರ, ಪರಶುರಾಮ ಮಾದರ, ರಾಮಣ್ಣ ಗೌಡರ, ರಾಮಣ್ಣ ನೀರಲಕೇರಿ, ಶಿವಾನಂದ ವಾಲೀಕಾರ, ಭೀಮಪ್ಪ ಡೆಂಗಿ, ರಾಮಪ್ಪ ವಾಲೀಕಾರ, ಮಂಗಳಪ್ಪ ಹೊಸೂರ, ಈರಪ್ಪ ಭೊಳಿ, ಯಮನಪ್ಪ ಕೋರಿ, ಮುದುಕಪ್ಪ ಗೌಡರ, ಚಂದಪ್ಪ ಗೌಡ್ರ, ರಂಗಪ್ಪ ವಾಲೀಕಾರ, ಹನಮಪ್ಪ ಗೌಡ್ರ, ವಿಠಲ ಪಮ್ಮಾರ, ಚಂದಪ್ಪ ಬಿಲ್ಲಕೇರಿ, ಹನಮಪ್ಪ ಪೂಜಾರಿ, ಮಾರುತಿ ದ್ಯಾಮನಗೌಡರ, ನಿಂಗಪ್ಪ ಗೌಡರ, ಪಾಂಡುರಂಗ ವಾಲೀಕಾರ, ಸಾವಿತ್ರಿ ಕಳಸಾ ಇದ್ದರು.