Advertisement

ಪವಿತ್ರ ಕಾವೇರಿ ನೀರು ಜನತೆಯ ಬಳಕೆಗೆ ದೊರಕಬೇಕು: ಡಿಕೆಶಿ

12:17 PM Dec 24, 2021 | Team Udayavani |

ಮಡಿಕೇರಿ: ನಮ್ಮ ಯಶಸ್ಸಿಗೆ ಕಾರಣಳಾಗಿ ಪಾಪ ನಿಮೂ೯ಲನೆ ಮಾಡುವ ಶಕ್ತಿ ಕಾವೇರಿಗಿದೆ ಎಂದು ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, 3 ಕೋಟಿ ಜನರಿಗೆ ನೀರು ನೀಡುವ ಮಹಾಮಾತೆ ಕಾವೇರಿ. ನೀರಿನ ಬಳಕೆ ವಿಚಾರದಲ್ಲಿ ಸಾಕಷ್ಟು ಹೋರಾಟ ನಡೆಯುತ್ತಿದೆ. ಪವಿತ್ರ ಕಾವೇರಿ ನದಿ ನೀರು ಜನತೆಯ ಬಳಕೆಗೆ ದೊರಕಬೇಕು ಎಂದರು.

ಕೆ.ಆರ್.ಎಸ್. ಅಣೆಕಟ್ಟು, ಹೇಮಾವತಿ, ಹಾರಂಗಿ, ಕಬಿನಿಯಿಂದ ನೀರು ಬಳಕೆ ಬಗ್ಗೆ ತೀಮಾ೯ನವಾಗಿದೆ. 16 ವಷ೯ಗಳಿಂದ 104 ಟಿಎಂಸಿ ನೀರು ಸಮುದ್ರಕ್ಕೆ ಹೋಗಿದೆ. ಹೀಗಾಗಿ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಕಾವೇರಿ ನೀರಿನ ಸದುಪಯೋಗವಾಗಬೇಕು. ಮೇಕೆದಾಟು ಜಲಾಶಯ ಆಗಲೇಬೇಕು. ವಿದ್ಯುತ್ ಉತ್ಪಾದನೆ ಕೂಡ ಇದರಿಂದ ಸಾಧ್ಯ ಎಂದರು.

ಮಳೆ ಕೊರತೆಯಾದಾಗ ಕಾವೇರಿ ಜಲಾನಯನ ಪ್ರದೇಶಕ್ಕೆ ಮೇಕೆದಾಟು ಅಣೆಕಟ್ಟಿನಿಂದ ಸಾಧ್ಯವಾಗಲಿದೆ. ಇದರಿಂದಾಗಿ ಕನಾ೯ಟಕ ಮತ್ತು ತಮಿಳುನಾಡು ರೈತರಿಗೆ ಅನುಕೂಲವಾಗಲಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಯಾರ ಅಡಚಣೆ ಬೇಡ ಎಂದು ಸುಪ್ರೀಂಕೋಟ್೯ ಹೇಳಿದೆ. ರಾಜಕೀಯ ರಹಿತವಾಗಿ ಮೇಕೆದಾಟು ಅಣೆಕಟ್ಟು ನಿಮಾ೯ಣಕ್ಕೆ ಒತ್ತಡ ಹಾಕಲಿದ್ದೇವೆ. ಯೋಜನೆ ಕೂಡಲೇ ಪ್ರಾರಂಭಿಸಿ ಎಂದು ಕೇಂದ್ರ, ರಾಜ್ಯ ಸಕಾ೯ರದ ಮೇಲೆ ಒತ್ತಡ ಹಾಕಲು ಪಾದಯಾತ್ರೆ ಪ್ರಾರಂಭಿಸಲಿದ್ದೇವೆ ಎಂದರು.

ಇದನ್ನೂ ಓದಿ:ನಂದಿನಿ ತುಪ್ಪ ಕಲಬೆರೆಕೆ : ಕಠಿಣ ಕ್ರಮಕ್ಕೆ ಮಾಲೂರು ಶಾಸಕ ನಂಜೇಗೌಡ ಆಗ್ರಹ

Advertisement

ರೈತರ ಅನುಕೂಲಕ್ಕಾಗಿ ಮೇಕೆದಾಟು ಅಣೆಕಟ್ಟು, ರಾಜ್ಯದ ಹಿತಕ್ಕಾಗಿ ಪಾದಯಾತ್ರೆ ನಡೆಸುತ್ತೇವೆ. ಜನವರಿ 9 ರಿಂದ 19 ರವರೆಗೆ ಮೇಕೆದಾಟಿನಿಂದ ಪಾದಯಾತ್ರೆ ಆರಂಭಿಸಲಿದ್ದೇವೆ, ಅದಕ್ಕೆ ಪೂವ೯ಭಾವಿಯಾಗಿ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದೇವೆ. ನಮ್ಮೆಲ್ಲರ ಸಂಕಲ್ಪ ಜನರಿಗೆ ಒಳ್ಳೆಯದಾಗಬೇಕು ಎಂಬುದೇ ಆಗಿದೆ ಎಂದರು.

ಕೊಡಗಿನ ಭಾಗಮಂಡಲದಲ್ಲಿ ಭಗಂಡೇಶ್ವರ ದೇಗುಲದಲ್ಲಿ ಶುಕ್ರವಾರ ಬೆಳಗ್ಗೆ ಪೂಜೆ ಸಲ್ಲಿಸಿ, ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎ.ಎಸ್.ಪೊನ್ನಣ್ಣ, ವೀಣಾ ಅಚ್ಚಯ್ಯ, ಚಂದ್ರಮೌಳಿ, ರೇವಣ್ಣ,  ಧ್ರುವನಾರಾಯಣ್, ಪುಪ್ಪಾ ಅಮರ್ ನಾಥ್, ಕೆ.ಪಿ.ಚಂದ್ರಕಲಾ, ಡಾ.ಮಂಥರ್ ಗೌಡ, ಧಮ೯ಜ ಉತ್ತಪ್ಪ, ಸೇರಿದಂತೆ ಕಾಂಗ್ರೆಸ್ ನ ನೂರಾರು ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next