ನವದೆಹಲಿ: ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯ ಹೆಸರು ಗಳಿಸಿದ್ದಾರೆ. ಆಕೆಗೆಂದೇ ಮೀಸಲಾದ ಹಲವಾರು ಫ್ಯಾನ್ ಪೇಜ್‌ಗಳಿವೆ .
ಇತ್ತೀಚೆಗೆ, ಸಾರಾ ತೆಂಡೂಲ್ಕರ್ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಭಿನ್ನ ಶೈಲಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಕಪ್ಪು ಡ್ರೆಸ್ ಧರಿಸಿ ತಾಜ್ ಫಲಕ್ನುಮಾ ಅರಮನೆಯ ಮೆಟ್ಟಿಲುಗಳ ಮೇಲೆ ನಡೆದದ್ದು ಫ್ಯಾನ್ಸ್ ಗಳ ಮನಗೆದ್ದಿದೆ.
ಸಾರಾ ತೆಂಡೂಲ್ಕರ್ ಜನಪ್ರಿಯ ಬಟ್ಟೆ ಬ್ರಾಂಡ್‌ಗಾಗಿ ಮಾಡೆಲಿಂಗ್‌ನೊಂದಿಗೆ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಈ ಮೂಲಕ ಮಾಡಲಿಂಗ್ ಜಗತ್ತಿಗೆ ತನ್ನ ಮೊದಲ ಹೆಜ್ಜೆಗಳನ್ನು ಇಟ್ಟಿದ್ದಾರೆ. ಸಾರಾ ತಮ್ಮ ಚೊಚ್ಚಲ ಪ್ರಚಾರದ ಮಾಡೆಲಿಂಗ್ ವೀಡಿಯೊವನ್ನು Instagram ನಲ್ಲಿ ಬಿಟ್ಟಿದ್ದಾರೆ, ಇದರಲ್ಲಿ ನಟಿ ಬನಿತಾ ಸಂಧು ಮತ್ತು ತಾನಿಯಾ ಶ್ರಾಫ್ ಕೂಡ ಇದ್ದಾರೆ.
ಈ ಸುಂದರಿ ಪ್ರತಿಷ್ಠಿತ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದಿದ್ದಾರೆ ಮತ್ತು ನಂತರ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ನ ಯೂನಿವರ್ಸಿಟಿ ಕಾಲೇಜಿಗೆ ಹೋದರು. ಮೇ 24, 1995 ರಂದು ಸಚಿನ್ ತೆಂಡೂಲ್ಕರ್ ಅಂಜಲಿ ಮೆಹ್ತಾ ಅವರನ್ನು ವಿವಾಹವಾದರು. ಈ ದಂಪತಿಗಳು ಸಾರಾ ಮತ್ತು ಅರ್ಜುನ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.