Advertisement

ಕ್ರಿಕೆಟ್‌ ಲೆಜೆಂಡ್‌ ಸಚಿನ್‌ ಗೆ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವ

09:18 AM Jul 20, 2019 | keerthan |

ಮುಂಬೈ: ವಿಶ್ವ ಕ್ರಿಕೆಟ್‌ ನ ದಂತಕಥೆ, ಭಾರತದ ಮಾಜಿ ಆಟಗಾರ ಸಚಿನ್‌ ತೆಂಡುಲ್ಕರ್‌ ಗೆ ಐಸಿಸಿ ಹೊಸತೊಂದು ಗೌರವ ನೀಡಿ ಪುರಸ್ಕರಿಸಿದೆ. ಲಿಟಲ್‌ ಮಾಸ್ಟರ್‌ ಗೆ ಐಸಿಸಿ ತನ್ನ ಅತ್ಯುನ್ನತ ʼ ಹಾಲ್‌ ಆಫ್‌ ಫೇಮ್‌ʼ ಗೌರವ ನೀಡಿದೆ.

Advertisement

46 ವರ್ಷದ ಸಚಿನ್‌ ತೆಂಡುಲ್ಕರ್‌ ಈ ಅತ್ಯನ್ನತ ಗೌರವ ಪಡೆದ ಆರನೇ ಭಾರತೀಯ. ಈ ಮೊದಲು ಸುನೀಲ್‌ ಗಾವಸ್ಕರ್‌, ಬಿಷನ್‌ ಸಿಂಗ್‌ ಬೇಡಿ, ಕಪಿಲ್‌ ದೇವ್‌, ಅನಿಲ್‌ ಕುಂಬ್ಳೆ, ಮತ್ತು ರಾಹುಲ್‌ ದ್ರಾವಿಡ್‌ ಈ ಗೌರವಕ್ಕೆ ಪಾತ್ರರಾಗಿದ್ದರು.

“ಈ ಸಂದರ್ಭದಲ್ಲಿ ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ನನ್ನ ಪಾಲಕರು, ಸಹೋದರ ಅಜಿತ್‌, ಪತ್ನಿ ಅಂಜಲಿ ನನ್ನ ಬದುಕಿನ ಆಧಾರ ಸ್ಥಂಭಗಳು. ರಮಾಕಾಂತ್‌ ಅಚ್ರೇಕರ್‌ ರಂತಹ ಕ್ರಿಕೆಟ್‌ ಕೋಚ್‌ ರನ್ನು ಪಡೆದಿದ್ದು ನನ್ನ ಅದೃಷ್ಟ” ಎಂದು ಸಚಿನ್‌ ಹೇಳಿಕೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಅತೀ ಹೆಚ್ಚು ರನ್‌ ಗಳಸಿರುವ ಸಾಧನೆ ಮಾಡಿರುವ ಸಚಿನ್‌, ಟೆಸ್ಟ್‌ ಕ್ರಿಕೆಟ್‌ ನಲ್ಲಿ 15,921 ರನ್‌ ಮತ್ತು ಏಕದಿನ ಕ್ರಿಕೆಟ್‌ ನಲ್ಲಿ 18426 ರನ್‌ ಗಳಿಸಿದ್ದಾರೆ.

ಸಚಿನ್‌ ತೆಂಡುಲ್ಕರ್‌ ಜೊತೆಗೆ ದಕ್ಷಿಣ ಆಫ್ರಿಕ ಮಾಜಿ ಆಟಗಾರ ಅಲನ್‌ ಡೊನಾಲ್ಡ್‌ ಮತ್ತು ಮಾಜಿ ಆಸೀಸ್‌ ಆಟಗಾರ ಕ್ಯಾಥ್ರಿನ್‌ ಫಿಜ್‌ ಪ್ಯಾಟ್ರಿಕ್‌ ಅವರಿಗೆ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next