Advertisement

ಸಚಿನ್‌ ಚಿತ್ರ: ಕ್ರಿಕೆಟಿಗೂ ಮೀರಿದ ಕೌತುಕ !

10:30 AM May 26, 2017 | Team Udayavani |

ಉಡುಪಿ: ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌, ಲೆಜೆಂಡರಿ ಕ್ರಿಕೆಟರ್‌, ಕ್ರಿಕೆಟ್‌ ದೇವರು ಎಂದೆಲ್ಲ ನಾಮಾಂಕಿತರಾದ ಸಚಿನ್‌ ತೆಂಡುಲ್ಕರ್‌ ಜೀವನಾ ಧಾರಿತ “ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌’ ಸಿನೆಮಾ ಸಾಕ್ಷ್ಯ ಚಿತ್ರದ ರೂಪದಲ್ಲಿ ಶುಕ್ರವಾರ ತೆರೆ ಕಾಣುತ್ತಿದ್ದು, ಎಲ್ಲರಲ್ಲೂ ಭಾರೀ ನಿರೀಕ್ಷೆ ಮೂಡಿಸಿದೆ. 

Advertisement

ತೆಂಡುಲ್ಕರ್‌ ಅವರ ಆರಂಭದ ಕ್ರಿಕೆಟ್‌ ಜೀವನ ಸುಲಭದ್ದಾಗಿರಲಿಲ್ಲ. ಸಾಕಷ್ಟು ಶ್ರದ್ಧೆ, ಕಠಿನ ಪರಿಶ್ರಮದ ಫ‌ಲವಾಗಿ 2 ದಶಕಗಳ ಕಾಲ ಜಾಗತಿಕ ಕ್ರಿಕೆಟಿನ ನಂ. 1 ಬ್ಯಾಟ್ಸ್‌ಮನ್‌ ಆಗಿ ಮೆರೆದಾಡಿದ್ದು ಈಗ ಇತಿಹಾಸ. ಇಂಥ ಮಹಾನ್‌ ಆಟಗಾರನೊಬ್ಬನ ಬದುಕನ್ನು ಬೆಳ್ಳೆತೆರೆಯಲ್ಲಿ ವೀಕ್ಷಿಸುವುದು ವಿಭಿನ್ನ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ.

ಚಿತ್ರದಲ್ಲಿ  ಏನೇನೆಲ್ಲ  ಇರಬಹುದು?
ವಿಶ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಅಗ್ರಗಣ್ಯರಾಗಿರುವ ಸಚಿನ್‌ ತೆಂಡುಲ್ಕರ್‌ ಕುರಿತ ಚಿತ್ರ ಬರುತ್ತಿದೆ ಅಂದರೆ ಅದರಲ್ಲಿ ಏನೆಲ್ಲ ಇರಬಹುದು ಅನ್ನುವ ಕುತೂಹಲ ಮೂಡುವುದು ಸಹಜ. ಸಚಿನ್‌ 16ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪಾದರ್ಪಣೆ ಮಾಡಿದ್ದು, ಅಲ್ಲಿಂದ ವಿಶ್ವಶ್ರೇಷ್ಠ ಆಟಗಾರನಾಗಿ ರೂಪುಗೊಂಡದ್ದಷ್ಟೇ ನಮಗೆ ಗೊತ್ತು. ಆದರೆ ಈ ಸಾಧನೆ ಹಿಂದೆ ಎಷ್ಟು ಜನರ ಶ್ರಮದ ಫ‌ಲವಿದೆ, ಯಾರ್ಯಾರು ಸಚಿನ್‌ಗೊàಸ್ಕರ ತ್ಯಾಗ ಮಾಡಿದ್ದಾರೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ಸಚಿನ್‌ ತಂದೆ, ತಾಯಿ, ಗುರು ರಮಾಕಾಂತ್‌ ಅಚೆÅàಕರ್‌, ಅಣ್ಣ ಅಜಿತ್‌, ಪತ್ನಿ ಅಂಜಲಿ ಜತೆಗಿನ ಲವ್‌ ಸ್ಟೋರಿ, ಕಾಂಬ್ಳಿ ಜತೆಗಿನ ಆರಂಭದ ಗೆಳೆತನ, ಕಟ್ಟಾ ಅಭಿಮಾನಿ ಸುಧೀರ್‌, 1999-2000ದ ಅವಧಿಯಲ್ಲಿ ನಡೆದ ಫಿಕ್ಸಿಂಗ್‌ ಹಗರಣ, ಆಸ್ಟ್ರೇಲಿಯದಲ್ಲಿ ನಡೆದ ಮಂಕಿ ಗೇಟ್‌ ಪ್ರಕರಣಗಳೆಲ್ಲ ಈ ಚಿತ್ರದಲ್ಲಿ ಮೂಡಿಬರಬಹುದೆಂದು ನಿರೀಕ್ಷಿಸಲಾಗಿದೆ.

ಯಾರೂ ನೋಡಿರದ ದೃಶ್ಯಗಳು
ಸಚಿನ್‌ ಮೈದಾನದಲ್ಲಿ ಹಾಗೂ ಅದರಾಚೆಗೂ ಆಟಗಾರರು, ತಂಡದ ಸಿಬಂದಿ, ಬಂಧುವರ್ಗ ದವರೊಂದಿಗೆ ಬಹಳ ಸ್ನೇಹಮಯಿಯಾಗಿರುತ್ತಾರೆ. ಡ್ರೆಸ್ಸಿಂಗ್‌ ರೂಂ, ಮನೆಯಲ್ಲಿರುವ ಸಚಿನ್‌ ಬಗ್ಗೆ ಯಾರೂ ನೋಡಿರದ ಕೆಲವು ವಿಶೇಷ ದೃಶ್ಯ ಗಳನ್ನೆಲ್ಲ ಈ ಚಿತ್ರದ ಮೂಲಕ ಅಧಿಕೃತವಾಗಿ ನೋಡಬಹುದಂತೆ. ಅದರಲ್ಲೂ ಕೆಲವು ವಿಶೇಷ ಸಂದರ್ಭದಲ್ಲಿ ಅಂದಿನ ಲೆಗ್‌ಸ್ಪಿನ್ನರ್‌, ಭಾರತದ ಕೋಚ್‌ ಅನಿಲ್‌ ಕುಂಬ್ಳೆ ತೆಗೆದ ಕೆಲವು ಚಿತ್ರಗಳನ್ನೂ ನಾವಿಲ್ಲಿ ಕಾಣಬಹುದು. 

ದಿಗ್ಗಜರ ಮಾತುಗಳು
ಸಚಿನ್‌ಗೆ ಭಾರತೀಯರು ಮಾತ್ರವಲ್ಲ ಎದುರಾಳಿ ತಂಡಗಳಲ್ಲೂ ಬಹಳ ಮಂದಿ ಆತ್ಮೀಯರಿದ್ದಾರೆ. ವಾರ್ನ್, ಗಿಲ್‌ಕ್ರಿಸ್ಟ್‌, ಮುರಳೀಧರನ್‌, ಭಾರತದ ಯುವರಾಜ್‌, ಸೆಹವಾಗ್‌, ಧೋನಿ ಅವರೆಲ್ಲ ಸಚಿನ್‌ ಕುರಿತು ಆಡಿರುವ ಮೆಚ್ಚುಗೆಯ ಮಾತುಗಳು ಸಹ ಚಿತ್ರದಲ್ಲಿವೆ.

Advertisement

ಹೆದರುತ್ತಿದ್ದ ಬೌಲರ್‌ ಯಾರು?
ಸಚಿನ್‌ ಅಂದರೆ ಸಾಕು ವಿಶ್ವದ ಯಾವುದೇ ಬೌಲರ್‌ಗಳು ಒಂದು ಕ್ಷಣ ಬೆಚ್ಚಿ ಬೀಳದೇ ಇರುತ್ತಿರಲಿಲ್ಲ. ಅಷ್ಟರಮಟ್ಟಿಗೆ ಸಚಿನ್‌ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತಿದ್ದರು. ಭಾರತದೆದುರಿನ ಪಂದ್ಯದ ಮೊದಲ ದಿನ ಸಚಿನ್‌ ಬಗ್ಗೆ ಕನಸು ಬೀಳುತ್ತಿತ್ತು ಎನ್ನುವುದನ್ನು ವಾರ್ನ್ ಹೇಳಿದ್ದನ್ನೊಮ್ಮೆ ನೆನಪಿಸಿಕೊಳ್ಳಿ! ಅಂಥ ಸಚಿನ್‌ ಸಹ ಒಬ್ಬ ಬೌಲರ್‌ ವಿರುದ್ಧ ಆಡಲು ಹಿಂದೇಟು ಹಾಕುತ್ತಿದ್ದರು ಎಂದರೆ ನಂಬುತ್ತೀರಾ? ಹೌದು, ದಕ್ಷಿಣ ಆಫ್ರಿಕಾದ ವಿವಾದಿತ ಆಟಗಾರ, ದುರಂತ ಅಂತ್ಯ ಕಂಡ ಹ್ಯಾನ್ಸಿ ಕ್ರೋನಿಯೆ ಎಸೆತಗಳನ್ನು ಎದುರಿಸಲು ಸಚಿನ್‌ ಹಿಂಜರಿಯುತ್ತಿದ್ದ ಬಗ್ಗೆಯೂ ಚಿತ್ರದಲ್ಲಿದೆಯಂತೆ. 

24 ವರ್ಷಗಳ ಕ್ರಿಕೆಟ್‌ ಬಾಳ್ವೆ ಯಲ್ಲಿ 663 ಪಂದ್ಯ, 34,347 ರನ್‌, 190 ವಿಕೆಟ್‌, 100 ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. 

1983ರಲ್ಲಿ “ಕಪಿಲ್‌ ಡೆವಿಲ್ಸ್‌’ ವಿಕ್ಟರಿಯನ್ನು ಟಿವಿಯಲ್ಲಿ ಸಚಿನ್‌ ವೀಕ್ಷಿಸುವ ದೃಶ್ಯದೊಂದಿಗೆ ಆರಂಭವಾಗುವ ಈ ಚಿತ್ರ, 2011ರಲ್ಲಿ ತಾನೇ ವಿಶ್ವಕಪ್‌ ಎತ್ತಿ ಹಿಡಿಯುವುದರೊಂದಿಗೆ ಕನಸು ಸಾಕಾರಗೊಳಿಸಿದ್ದು ಚಿತ್ರದ ಕತೆ. 

ವಿದ್ಯೆಯಲ್ಲಿ ಯಶಸ್ಸು ಗಳಿಸದಿದ್ದರೂ, ಪಠ್ಯ ಪುಸ್ತಕದಲ್ಲಿ ಹೆಸರು ಬರುವಂತೆ ಮಾಡಿದ ಸಚಿನ್‌ ಬದುಕು ಒಂದು ಸಾಧನೆಯೇ ಸರಿ. ಸಾಕ್ಷ್ಯಚಿತ್ರದ ರೂಪದಲ್ಲಿರುವ ಈ ಸಿನೆಮಾ ಅನೇಕ ಮಂದಿ ಯುವಕರಿಗೆ ಪ್ರೇರಣೆಯಾಗಲಿ ಎನ್ನುವುದೇ ಚಿತ್ರ ತಂಡದ ಉದ್ದೇಶವಾಗಿದೆ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next