Advertisement

Divorce: ಪತ್ನಿಗೆ ವಿಚ್ಛೇದನ ನೀಡಿದ ಸಚಿನ್‌

01:00 AM Nov 01, 2023 | Team Udayavani |

ರಾಜಸ್ಥಾನದ ಟೋಂಕ್‌ನಿಂದ ಸ್ಪರ್ಧಿಸಿರುವ ಮಾಜಿ ಡಿಸಿಎಂ ಸಚಿನ್‌ ಪೈಲಟ್‌ ಪತ್ನಿ ಸಾರಾ ಅವರಿಗೆ ವಿಚ್ಛೇದನ ನೀಡಿದ್ದಾರೆ. ಅವರು ನಾಮಪತ್ರದ ಜತೆಗೆ ಸಲ್ಲಿಸಿರುವ ಆಸ್ತಿ ವಿವರಕ್ಕೆ ಸಂಬಂಧಿಸಿದ ಅಫಿದವಿತ್‌ನಲ್ಲಿ ಈ ಅಂಶವನ್ನು ಉಲ್ಲೇಖೀಸಲಾಗಿದೆ ಮತ್ತು ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೊಸ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.

Advertisement

ಸಾರಾ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಡಾ| ಫಾರೂಕ್‌ ಅಬ್ದುಲ್ಲಾ ಅವರ ಪುತ್ರಿ. 2004ರಲ್ಲಿ ಸಾರಾ ಮತ್ತು ಸಚಿನ್‌ ವಿವಾಹವಾಗಿತ್ತು. ಅವರಿಗೆ ಆರಾನ್‌ ಮತ್ತು ವಿಹಾನ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ತಮ್ಮ ಇಬ್ಬರು ಮಕ್ಕಳು ಸ್ವತಂತ್ರರಾಗಿದ್ದಾರೆ ಎಂಬ ಅಂಶವನ್ನೂ ಅಫಿದವಿತ್‌ನಲ್ಲಿ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next