Advertisement
2030ರ ವೇಳೆಗೆ ಪೆಟ್ರೋಲ್, ಡೀಸೆಲ್ ಕಾರುಗಳು ಮಾಯವಾಗಿ, ದೇಶದ ರಸ್ತೆಗಳಲ್ಲಿ ಕೇವಲ ವಿದ್ಯುತ್‌ಚಾಲಿತ ಕಾರುಗಳಷ್ಟೇ ಸಂಚರಿಸುವಂತೆ ಮಾಡುವ ಯೋಜನೆ ಹಾಕಿ ಕೊಂಡಿದ್ದೇವೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರಕಾರ ಹೇಳಿತ್ತು. ಜತೆಗೆ, ಇದರ ಬಳಕೆ ಹೆಚ್ಚಿಸಲು ಸಬ್ಸಿಡಿ ಮತ್ತು ಪ್ರೋತ್ಸಾಹ ಧನ ವನ್ನೂ ನೀಡಲಾಗುತ್ತದೆ ಎಂದಿತ್ತು. ಈ ಕುರಿತು ಭಾನುವಾರ ಪ್ರತಿಕ್ರಿಯಿಸಿರುವ ತೆಂಡೂಲ್ಕರ್, “ಭೂಮಿಯನ್ನು ರಕ್ಷಿಸುವ ಹೊಣೆಗಾರಿಕೆ ಪ್ರಸ್ತುತ ತಲೆಮಾರಿಗಿದೆ. ಮುಂ ದಿನ ತಲೆಮಾರಿಗೆ ನಾವು ಅತ್ಯುತ್ತಮವಾದ ಹಾಗೂ ಸುರಕ್ಷಿತವಾದ ಭೂಮಿಯನ್ನು ನೀಡಬೇಕಿದೆ. ಹಾಗಾಗಿ, ವಿದ್ಯುತ್‌ಚಾಲಿತ ಕಾರುಗಳನ್ನು ಪರಿಚಯಿಸುವ ಕೇಂದ್ರ ಸರಕಾರದ ನಿರ್ಧಾರ ಸರಿಯಾದದ್ದು. ಇಡೀ ಜಗತ್ತೇ ಈ ನಿಟ್ಟಿನಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ,’ ಎಂದು ಹೇಳಿದ್ದಾರೆ.
Advertisement
ಎಲೆಕ್ಟ್ರಿಕ್ ಕಾರು ಪರ ಸಚಿನ್ ಬ್ಯಾಟಿಂಗ್
03:45 AM Jul 03, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.