Advertisement
ಶಾರೀರಿಕ ಆಟೋಟಗಳ ಬಳಿಕ ನಡೆದ ಸಭೆಯಲ್ಲಿ ಬೌದ್ಧಿಕ್ ನೀಡಿದ ಆರ್‌ಎಸ್‌ಎಸ್ ಮುಖಂಡ ಆಲಂಕಾರು ಶ್ರೀ ಭಾರತಿ ಶಾಲಾ ಶಿಕ್ಷಕ ಯದುಶ್ರೀ ಆನೆಗುಂಡಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿಶ್ವದಲ್ಲಿ ಶಾಖೆಗಳನ್ನು ಹೊಂದಿದ್ದು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದೊಂದು ಸಾಂಸ್ಕೃತಿಕ ಸಂಘಟನೆಯಾಗಿದ್ದು, ದೇಶದ ಇತಿಹಾಸವನ್ನು ಸೃಷ್ಟಿಸಿ ಸಾರ್ವಭೌಮತ್ವವನ್ನು ಸಾಧಿಸುವತ್ತ ಹೆಜ್ಜೆ ಹಾಕುತ್ತಿದೆ. ಭಾರತದ ಗತವೈಭವವನ್ನು ಮರುಕಳಿಸಿ ವಿಶ್ವದಲ್ಲಿ ಭಾರತಕ್ಕೆ ಉನ್ನತ ಸ್ಥಾನಮಾನ ದೊರುಕುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ.
ಉತ್ಸಾವವನ್ನು ಕುಗ್ಗಿಸಲು ಎಷ್ಟೇ ಷಡ್ಯಂತರ ನಡೆದರೂ ನಮ್ಮ ಕಾರ್ಯಕರ್ತರು ಬೆಳೆಯುತ್ತಲೇ ಬಂದಿದ್ದಾರೆ. ವಿಶ್ವಮಾನ್ಯ ಸಂಘಟನೆಯಾಗುವಲ್ಲಿ ತಮ್ಮ ಪ್ರತಿಫಲಾಪೇಕ್ಷೆಯಿಲ್ಲದ ಪ್ರಾಮಾಣಿಕ ಸೇವೆ ಮಾಡುತ್ತಲೇ ಬಂದಿದ್ದಾರೆ. ಮುಂದೊಂದು ದಿನ ಭಾರತ ವಿಶ್ವಗುರುವಾಗುವಲ್ಲಿ ಸಂಘದ ಪಾತ್ರ ಬಹಳ ದೊಡ್ಡಗಾಗಿರುತ್ತದೆ ಎಂದು ಯದುಶ್ರೀ ಹೇಳಿದರು. ಸಂಘದ ಸಬಳೂರು ಶಾಖಾ ಶಿಕ್ಷಕ ನಿತಿನ್ ಕಡೆಂಬ್ಯಾಲ್ ಅವರು ಸ್ವಾಗತಿಸಿದರು. ಕಾರ್ಯಕರ್ತ ಚಿದಾನಂದ ಪಾನ್ಯಾಲ್ ಅವರು ವಂದಿಸಿದರು. ಉಮೇಶ್ ಬುಡಲೂರು ಅವರು ಕಾರ್ಯಕ್ರಮ ನಿರೂಪಿಸಿದರು.