Advertisement

ಶಬರಿಮಲೆ: ಇಂದು ಚಿನ್ನ, ಬೆಳ್ಳಿ ತಪಾಸಣೆ

11:42 AM May 28, 2019 | Team Udayavani |

ತಿರುವನಂತಪುರ: ಶಬರಿಮಲೆ ಭಕ್ತರು ನೀಡಿರುವ ಚಿನ್ನದ ಕಾಣಿಕೆಗಳ ಪ್ರಮಾಣದಲ್ಲಿ ಗಣನೀಯ ಇಳಿಮುಖವಾಗಿರುವುದನ್ನು ಪತ್ತೆ ಹಚ್ಚಿರುವ ಕೇರಳ ಸರಕಾರದ ಲೆಕ್ಕ ಪರಿಶೋಧನಾ ಇಲಾಖೆ, ಈ ಹಿನ್ನೆಲೆಯಲ್ಲಿ ದೇಗುಲದ ಸ್ಟ್ರಾಂಗ್‌ ರೂಂನಲ್ಲಿ ಇಡಲಾಗಿರುವ ಎಲ್ಲ ಚಿನ್ನ ಹಾಗೂ ಬೆಳ್ಳಿ ಕಾಣಿಕೆಗಳಿಗೆ ಸಂಬಂಧಿಸಿದ ದಾಖಲೆಗಳ ತಪಾಸಣೆ ನಡೆಸುವುದಾಗಿ ಹೇಳಿದೆ.

Advertisement

ಭಕ್ತರು ದಾನವಾಗಿ ಕೊಡುವ ವೇಳೆ ದಾಖಲೆಗಳಲ್ಲಿ ಉಲ್ಲೇಖೀಸಲಾಗಿರುವ ಚಿನ್ನದ ಪ್ರಮಾಣಕ್ಕೂ, ದೇಗುಲದಲ್ಲಿರುವ ಚಿನ್ನದ ಪ್ರಮಾಣಕ್ಕೂ ಗಣನೀಯ ವ್ಯತ್ಯಾಸ ಕಂಡುಬಂದಿದೆ. ಆಡಳಿತ ಮಂಡಳಿಯವರೇ, ನಿಖರ ದಾಖಲೆಗಳಿಲ್ಲದೆ ದೇಗುಲದಿಂದ ಚಿನ್ನ ಹಾಗೂ ಬೆಳ್ಳಿಯನ್ನು ಹೊರಗೆ ಕೊಂಡೊಯ್ದಿರುವ ಬಗ್ಗೆ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಈ ಬಗ್ಗೆ ಕೇರಳದ ದೇವಸ್ವ ವಿಚಕ್ಷಣ ದಳಕ್ಕೆ ಸಾಕಷ್ಟು ದೂರುಗಳು ಬಂದಿವೆ ಎನ್ನಲಾಗಿದೆ. ಹಾಗಾಗಿ, ಈ ದೂರುಗಳ ಆಧಾರದ ಮೇರೆಗೆ ಲೆಕ್ಕಪರಿಶೋಧನಾ ಇಲಾಖೆ ಕೂಲಂಕಷ ತಪಾಸಣೆ ನಡೆಸಲು ಮುಂದಾಗಿದೆ ಎಂದು ಇಲಾಖೆ ತಿಳಿಸಿದೆ.

ಇದಕ್ಕೂ ಮೊದಲು ದೇವಸ್ವಂ ವಿಚಕ್ಷಣ ದಳವು, ಸ್ಟ್ರಾಂಗ್‌ ರೂಂನಲ್ಲಿನ ಚಿನ್ನ, ಬೆಳ್ಳಿ ದೇಣಿಗೆಯ ದಾಸ್ತಾನುಗಳ ಬಗ್ಗೆ ದೇಗುಲದ ಆಡಳಿತ ಮಂಡಳಿ ಸಮರ್ಪಕ ದಾಖಲೆಗಳನ್ನು ಇಟ್ಟುಕೊಂಡಿಲ್ಲ ಎಂದು ಹೇಳಿತ್ತು. ಹಾಗಾಗಿ, ಲೆಕ್ಕಪರಿಶೋಧನಾ ಇಲಾಖೆ, ಚಿನ್ನ, ಬೆಳ್ಳಿ ದೇಣಿಗೆಗಳನ್ನು ಸಂರಕ್ಷಿಸುವಲ್ಲಿ ದೇಗುಲ ಆಡಳಿತ ಮಂಡಳಿ ನಿಯಮಗಳನ್ನು ಪಾಲಿಸಿದೆಯೇ ಇಲ್ಲವೇ ಎಂಬುದರ ಬಗ್ಗೆಯೂ ಗಮನ ಹರಿಸಲಿದೆ ಎನ್ನಲಾಗಿದೆ.

ಶಬರಿಮಲೆ ದೇಗುಲಕ್ಕೆ ಬರುವ ಎಲ್ಲಾ ದೇಣಿಗೆಗಳನ್ನು ಆರಾನ್ಮುಲಾ ದೇಗುಲದ ಬಳಿಯಿರುವ ತಿರುವಾಂಕೂರು ದೇವಸ್ವಂ ಮಂಡಳಿಯ ಸ್ಟ್ರಾಂಗ್‌ ರೂಂನಲ್ಲಿ ಇಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next