ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನವು ಮಂಡಲ ಸೀಸನ್ ಪ್ರಯುಕ್ತ ನ.15ರಂದು ಬಾಗಿಲು ತೆರೆಯಲಿದೆ.
ಡಿ.26ರವರೆಗೆ ಒಟ್ಟು 41 ದಿನಗಳ ಕಾಲ ದೇವರ ದರ್ಶನಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಸಿದ್ಧತೆ ನಡೆಸಿಕೊಂಡಿದೆ. ಪ್ರತಿದಿನ 30 ಸಾವಿರ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ದರ್ಶನಕ್ಕೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳದ ಭಕ್ತರಿಗಾಗಿ ನೀಲಕ್ಕಲ್‌ನಲ್ಲಿ ಐದು ಬುಕ್ಕಿಂಗ್ ಕೌಂಟರ್ ತೆರೆಯಲಾಗಿದೆ.
ಭಕ್ತರಿಗೆ ಎರಡು ಡೋಸ್ ಲಸಿಕೆ ಪಡೆದಿರುವ ದಾಖಲೆ ಅಥವಾ 72 ಗಂಟೆಗಳೊಳಗೆ ಮಾಡಿಸಲಾಗಿರುವ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯ.
ನೀಲಕ್ಕಲ್‌ನಲ್ಲೇ ಕೋವಿಡ್ ಪರೀಕ್ಷಾ ಕೇಂದ್ರಗಳನ್ನೂ ತೆರೆಯಲಾಗಿದ್ದು, ಅಲ್ಲಿ ಪರೀಕ್ಷೆ ಮಾಡಿಸಿದವರಿಗೆ 3 ಗಂಟೆಗಳೊಳಗೆ ವರದಿ ನೀಡುವುದಾಗಿಯೂ ತಿಳಿಸಲಾಗಿದೆ.
ಇದನ್ನೂ ಓದಿ:ಐಎನ್‌ಕ್ಸ್ ಮೀಡಿಯಾ ಪ್ರಕರಣ: ದಾಖಲೆ ಪರಿಶೀಲಿಸಲು ಚಿದು, ಪುತ್ರಗೆ ಅವಕಾಶ