Advertisement
ದೇಗುಲಕ್ಕೆ ನಿತ್ಯ ಲಕ್ಷಾಂತರ ಭಕ್ತಾದಿಗಳು ಬರುತ್ತಿದ್ದು, ಇದಕ್ಕಾಗಿ 8,402 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನೇಮಿಸಲಾಗಿದೆ.
Related Articles
Advertisement
ಕಾಡಾನೆಯ ಹಾವಳಿ ಹೆಚ್ಚಿರುವುದರಿಂದ ಈಗಾಗಲೇ ರಾತ್ರಿ ವೇಳೆ ಸಂಚಾರಕ್ಕೆ ಅಳುದಾ-ಕಲ್ಲಿಡಾಕುನ್ನು-ಮುಕ್ಕುಳಿ-ಕರಿಮಲೆಯಲ್ಲಿ ನಿರ್ಬಂಧ ಹೇರಲಾಗಿದೆ.
ಪೊಲೀಸ್ ಇಲಾಖೆ ಪರಿಶೀಲನೆ
ಶಬರಿಮಲೆ, ಪಂಪಾ ಹಾಗೂ ಸುತ್ತ ಮುತ್ತ ಪೋಲಿಸ್ ಇಲಾಖೆಯ ಅಧಿಕಾರಿಗಳು ಭಧ್ರತೆ ಹಾಗೂ ಸುರಕ್ಷತೆಯ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
24 ಎಸ್ ಪಿ ಗಳು, 112 ಸಹಾಯಕ ಎಸ್ ಪಿ ಗಳು, 264 ಇನ್ಸ್ ಪೆಕ್ಟರ್ ಗಳು ಮತ್ತು 1,185 ಸಬ್ ಇನ್ಸ್ ಪೆಕ್ಟರ್ ಗಳು ಸೇರಿ ಒಟ್ಟು 8,402 ಪೊಲೀಸರನ್ನು ನೇಮಿಸಲಾಗುವುದು. ಅವರಲ್ಲಿ 307 ಮಹಿಳಾ ಪೊಲೀಸರು ಇರಲಿದ್ದಾರೆ. ಮಹಿಳಾ ಪೊಲೀಸರನ್ನು ಪಂಪಾ ನದಿ ಹಾಗೂ ಗಣಪತಿ ದೇವಾಲಯದ ಪಕ್ಕ ನಿಯೋಜಿಸಲಾಗಿದೆ. ಹಾಗೂ ಅಗತ್ಯ ಕಂಡುಬಂದರೆ ಇನ್ನೂ ಹೆಚ್ಚಿನ ಸಂಖ್ಯೆಯ ಸಿಬಂದಿಗಳನ್ನು ನಿಯೋಜಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿದೆ.
ಇದರ ಜತೆಗೆ ರಾಪಿಡ್ ಆ್ಯಕ್ಷನ್ ಫೋರ್ಸ್, ಎನ್.ಡಿ.ಆರ್.ಎಫ್ ಪಡೆ, ತಿರುವಾಂಕೂರು ದೇವಸ್ವಂ ಬೋರ್ಡ್ ಸಿಬಂದಿಗಳು, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ,ಶಬರಿಮಲೆ ಸ್ವಾಮಿ ಅಯ್ಯಪ್ಪ ಸೇವಾ ಸಂಘದ ಸ್ವಯಂ ಸೇವಕರು ಕರ್ತವ್ಯದಲ್ಲಿದ್ದಾರೆ.