Advertisement

ಸಾರ್ಕ್‌ ಸದಸ್ಯರ ನಡುವೆ ಆನ್‌ಲೈನ್‌ ವೇದಿಕೆ ; ಪ್ರಧಾನಿ ಮೋದಿ ಕರೆಯನ್ವಯ ಹೊಸ ವ್ಯವಸ್ಥೆ ಜಾರಿ

09:31 AM Mar 29, 2020 | Hari Prasad |

ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ವೈರಸ್ ಸೋಂಕನ್ನು ನಿವಾರಿಸುವ ನಿಟ್ಟಿನಲ್ಲಿ ಎಲ್ಲಾ ಸಾರ್ಕ್‌ ರಾಷ್ಟ್ರಗಳೂ ಆನ್‌ಲೈನ್‌ ವೇದಿಕೆಯೊಂದನ್ನು ರೂಪಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆಗೆ ಅನುಗುಣವಾಗಿ, ಆನ್‌ಲೈನ್‌ ವೇದಿಕೆಯೊಂದನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

Advertisement

ಮಾ. 15ರಿಂದಲೇ ನಡೆಯುತ್ತಿರುವ ಗುರುವಾರ ನಡೆದ ಸಾರ್ಕ್‌ ರಾಷ್ಟ್ರಗಳ ಮುಖ್ಯಸ್ಥರ ಆನ್‌ಲೈನ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮೋದಿ, ಕೋವಿಡ್ 19 ಸೋಂಕು ಎದುರಿಸುತ್ತಿರುವ ಬಗ್ಗೆ ಸಾರ್ಕ್‌ ರಾಷ್ಟ್ರಗಳು ಗಳಿಸಿರುವ ನೈಪುಣ್ಯತೆ ಹಾಗೂ ಜ್ಞಾನವನ್ನು ಸಾರ್ಕ್‌ನ ಇತರ ಸದಸ್ಯ ರಾಷ್ಟ್ರಗಳೊಂದಿಗೆ ವಿನಿಮಯ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಒಂದು ಆನ್‌ಲೈನ್‌ ವೇದಿಕೆಯನ್ನು ನಿರ್ಮಿಸಬೇಕು ಎಂದು ಅವರು ಕರೆ ನೀಡಿದ್ದರು.

‘ಪ್ರಧಾನಿ ಆಶಯದಂತೆ, ಸಾರ್ಕ್‌ ರಾಷ್ಟ್ರಗಳಲ್ಲಿ ಕೋವಿಡ್ 19 ಸೋಂಕನ್ನು ಎದುರಿಸುತ್ತಿರುವ ತಜ್ಞ ವೈದ್ಯರು ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳನ್ನು ಒಗ್ಗೂಡಿಸಿದ ನೆಟ್‌ವರ್ಕನ್ನು ಸ್ಥಾಪಿಸಲಾಗಿದೆ. ಈ ತಜ್ಞರು ತಾವು ಪಡೆದ ಜ್ಞಾನವನ್ನು ಇ-ಮೇಲ್‌, ವಾಟ್ಸ್‌ಆ್ಯಪ್‌ ಮೂಲಕ ಪರಸ್ಪರ ಹಂಚಿಕೊಳ್ಳಲಿದ್ದಾರೆ’ ಎಂದು ವಿದೇಶಾಂಗ ಸಚಿವ ಜೈಶಂಕರ್‌ ಟ್ವೀಟ್‌ ಮಾಡಿದ್ದಾರೆ.

‘ಕೋವಿಡ್ 19 ಪಿಡುಗು ನಿವಾರಣೆಯಾದ ನಂತರವೂ ಈ ವೇದಿಕೆ ಮುಂದುವರಿದು ಹಲವಾರು ಯೋಜನೆಗಳಿಗೂ ಉಪಯೋಗವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next