ಮುಂಬೈ:ಪ್ರಭಾಸ್, ಶ್ರದ್ಧಾ ಕಪೂರ್, ಜಾಕಿ ಶ್ರಾಫ್ ನಟಿಸಿರುವ ಈ ವರ್ಷದ ಬಹುಕೋಟಿ ವೆಚ್ಚದ, ಬಹು ನಿರೀಕ್ಷೆಯ “ಸಾಹೋ” ಸಿನಿಮಾ ಶುಕ್ರವಾರ ತೆರೆಗೆ ಬಂದಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಸಾಹೋ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈಗಾಗಲೇ ಸಿನಿಮಾ ವೀಕ್ಷಿಸಿರುವ ಅಭಿಮಾನಿಗಳು ಆನ್ ಲೈನ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಭಾರತೀಯ ಸಿನಿಮಾರಂಗದ ಭರ್ಜರಿ ಆ್ಯಕ್ಷನ್ ಸಿನಿಮಾ ಎಂದೇ ಬಿಂಬಿತವಾಗಿದ್ದ ಸಾಹೋ ಟ್ರೈಲರ್ ಭರ್ಜರಿ ಹಿಟ್ ಆಗಿತ್ತು. ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿದ್ದ ಸಿನಿಮಾ ಕೊನೆಗೂ ತೆರೆ ಕಂಡಿದ್ದು, ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯುಎಇ ಸೆನ್ಸಾರ್ ಮಂಡಳಿಯ ಸದಸ್ಯ ಉಮೈರ್ ಸಾಂಧಿ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದು, ಸಾಹೋ ಫ್ರಂ ಯುಎಇ ಸೆನ್ಸಾರ್ ಬೋರ್ಡ್! ನಿಮ್ಮ ಎದೆಗುಂಡಿಗೆಯನ್ನು ನಡುಗಿಸುವ ಆ್ಯಕ್ಷನ್ ಸಾಹೋ ಸಿನಿಮಾದಲ್ಲಿದೆ. ಅಂದದ ದೃಶ್ಯ, ಇಂಪಾದ ಸಂಗೀತ..ಒಟ್ಟಾರೆ ಈ ಮಸಾಲ ಸಿನಿಮಾವನ್ನು ನೀವು ಪ್ರೀತಿಸುತ್ತೀರಿ..ವಾರಾಂತ್ಯಕ್ಕೆ ನೀವು ಉತ್ತಮ ಸಿನಿಮಾ ವೀಕ್ಷಿಸಬಹುದಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆದರೆ ಸಾಹೋ ಥ್ರಿಲ್ಲರ್ ಸಿನಿಮಾದ ಬಗ್ಗೆ ಅಭಿಮಾನಿಗಳು ಪಾಸಿಟಿವ್, ನೆಗೆಟಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Related Articles
ಮಿಶ್ರ ಪ್ರತಿಕ್ರಿಯೆ:
ಪ್ರಭಾಸ್ ನ ಚಿರಂಜೀವಿ ಹೆಸರಿನ ಅಭಿಮಾನಿ ಟ್ವೀಟ್ ನಲ್ಲಿ, ನಾನು ಸಾಹೋ ಕಥೆ ಬಗ್ಗೆ ಹೆಚ್ಚು ವಿವರ ನೀಡಲ್ಲ, ಆದರೆ ಸಿನಿಮಾದಲ್ಲಿನ ಪಾತ್ರಗಳು ಕತ್ತಲೆಗೆ ಎಳೆದೊಯ್ಯುತ್ತದೆ ಎಂದು ಉಲ್ಲೇಖಿಸಿದ್ದಾರೆ!
ಸಿಬಿ ಎಂಬ ಮತ್ತೊಬ್ಬರ ಟ್ವೀಟ್ ಪ್ರಕಾರ, ಸಾಹೋ ಮೊದಲಾರ್ಧ ಉತ್ತಮವಾಗಿದೆ. ಕಥೆ ಹೆಚ್ಚು ವರ್ಕ್ ಔಟ್ ಆಗಿಲ್ಲ. ಸೆಕೆಂಡ್ ಹಾಫ್ ಕುತೂಹಲಕಾರಿಯಾಗಿದೆ…
ದಿಲೀಪ್ ಕುಮಾರ್ ಕಾಂಡೂಲಾ ಎಂಬ ಅಭಿಮಾನಿ ಪ್ರಕಾರ, ಕೊನೆಗೂ ಸುಜೀತ್ ಜೀವಿತಾವಧಿಯಲ್ಲಿ ಒಮ್ಮೆ ಸಿಗುವ ಅವಕಾಶವನ್ನು ನಿರಾಸೆಗೊಳಿಸಿದ್ದಾರೆ. ಸಾಹೋದಲ್ಲಿ ಎಲ್ಲಾ ಹಾರ್ಡ್ ವರ್ಕ್ ನಷ್ಟವಾಗಿದೆ. ಸಾಹೋ ಅಭಿಮಾನಿಗಳಿಗಲ್ಲ, ಇದು ಕೇವಲ ಕಟ್ಟಾ ಅಭಿಮಾನಿಗಳಿಗೆ ಮಾತ್ರ ಎಂದು ತಿಳಿಸಿದ್ದಾರೆ.